Thursday, March 23, 2023

Latest Posts

ದಿನಭವಿಷ್ಯ| ನಿಮ್ಮ ಎಂದಿನ ಕಾರ್ಯದ ಜತೆಗೇ ಹೆಚ್ಚುವರಿ ಹೊಣೆ ಬೀಳಲಿದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ನಿಮಗೆ ಪೂರಕವಾದ ದಿನ. ಕಾರ್ಯಸಿದ್ಧಿ. ಎಲ್ಲವೂ ನಿಗದಿಪಡಿಸಿದ ರೀತಿಯಲ್ಲೆ  ಸಾಗುವುದು. ಆರೋಗ್ಯ ಪರಿಸ್ಥಿತಿ ಸುಧಾರಿಸುವುದು.

ವೃಷಭ
ನಿಮ್ಮ ಪ್ರಗತಿಗೆ ಬೇಕಾದ ಒಳ್ಳೆಯ ಅವಕಾಶ ನಿಮಗೆ ವಂಚಿತವಾಗಬಹುದು. ಹಣದ ವ್ಯವಹಾರದಲ್ಲಿ ನಿರೀಕ್ಷಿಸಿದ ಲಾಭ ದೊರಕುವುದಿಲ್ಲ.

ಮಿಥುನ
ನಿಮ್ಮ ಎಂದಿನ ಕಾರ್ಯದ ಜತೆಗೇ ಹೆಚ್ಚುವರಿ ಹೊಣೆ ಬೀಳಲಿದೆ. ಬೇಕಾಬಿಟ್ಟಿ ವರ್ತನೆ ತೋರಬೇಡಿ. ನಿಷ್ಠೆಯಿಂದ ಮಾಡಿದರೆ ಫಲಪ್ರಾಪ್ತಿ.

ಕಟಕ
ವೃತ್ತಿಯಲ್ಲಿ ಸಫಲತೆ. ಉದ್ಯೋಗದಲ್ಲಿ ಉನ್ನತಿ. ನಿಮ್ಮ ಮುಕ್ತ ಅಭಿಪ್ರಾಯವು ಇತರರ ಮೆಚ್ಚುಗೆ ಗಳಿಸಲಿದೆ. ಕೌಟುಂಬಿಕ ಭಿನ್ನಮತ ನಿವಾರಿಸಿರಿ.

ಸಿಂಹ
ನಿಮ್ಮ ಮಾತು ಕೆಲವರಲ್ಲಿ ತಪ್ಪರ್ಥ ಮೂಡಿಸಬಹುದು. ಕುಟುಂಬ ಸದಸ್ಯರಿಗೆ ನೋವು ತರುವ ರೀತಿಯಲ್ಲಿ ವರ್ತಿಸಬೇಡಿ.

ಕನ್ಯಾ
ಸಕಾಲದಲ್ಲಿ ನಿಮ್ಮ ಉದ್ದೇಶ ನೆರವೇರದೆ ನಿರಾಶೆ ಅನುಭವಿಸುವಿರಿ. ಕೆಲವರ ಅಸಹಕಾರ. ಕೆಲಸದಲ್ಲಿ ಉದಾಸೀನತೆ ಬಿಟ್ಟುಬಿಡಿ. ಆರೋಗ್ಯ ಸಮಸ್ಯೆ ಕಾಡಬಹುದು.

ತುಲಾ
ಮಾತಿನ ಮೇಲೆ ನಿಯಂತ್ರಣವಿರಲಿ. ಸಡಿಲ ಮಾತುಗಳು ಸಂಬಂಧ ಕೆಡಿಸಬಹುದು. ಇತರರ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡಲು  ಹೋಗಬೇಡಿ.

ವೃಶ್ಚಿಕ
ಯಾವುದೇ ಕೆಲಸವನ್ನು ಆತುರದಿಂದ ಮಾಡಬೇಡಿ. ಯೋಜಿಸಿ, ಮಾಡಿರಿ. ಇಲ್ಲವಾದರೆ ಕಾರ್ಯದಲ್ಲಿ ವೈಫಲ್ಯ ಅನುಭವಿಸುವಿರಿ. ಕೌಟುಂಬಿಕ ಭಿನ್ನಮತ.

ಧನು
ನಿಮ್ಮ ಬದುಕಿನಲ್ಲಿ ಮಹತ್ವದ ಬದಲಾವಣೆ ಸಂಭವಿಸಬಹುದು. ಕೆಲವರ ನಡೆನುಡಿ ನಿಮ್ಮ ಮೇಲೂ ಪರಿಣಾಮ ಬೀರಬಹುದು. ಆರ್ಥಿಕ ಒತ್ತಡ ನಿವಾರಣೆ.

ಮಕರ
ನಿಮಗಿಂದು ಎಲ್ಲಾ ವಿಷಯಗಳಲ್ಲೂ ಅನುಕೂಲ ಸಂಭವಿಸಲಿದೆ. ಹಿನ್ನಡೆಗಳು ನಿವಾರಣೆ. ಆಪ್ತರಿಂದ ಸೂಕ್ತ ನೆರವು ಒದಗುವುದು.

ಕುಂಭ
ಕೆಲವು ಮುಖ್ಯ ವಿಷಯಗಳಲ್ಲಿ ನೀವು ನಿಮ್ಮ ನಿಲುವಿನೊಂದಿಗೆ ರಾಜಿ ಮಾಡಬೇಕಾಗು ವುದು.  ಇತರರ ಅಭಿಪ್ರಾಯ ಒಪ್ಪಿಕೊಳ್ಳಬೇಕಾಗುತ್ತದೆ.

ಮೀನ
ನಿಮ್ಮ ಪಾಲಿಗೆ ಇಂದು ವಿಶೇಷ ದಿನವಾಗಬಹುದು. ಮಹತ್ವದ ಬೆಳವಣಿಗೆ ಸಂಭವಿಸಬಹುದು. ಅನಿರೀಕ್ಷಿತ ಧನಲಾಭ. ಸ್ನೇಹಿತರ ಭೇಟಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!