Tuesday, March 28, 2023

Latest Posts

ದಿನಭವಿಷ್ಯ| ಒಂದೇ ಕೆಲಸವನ್ನು ನಿರಂತರವಾಗಿ ಮಾಡಲು ಮನಸ್ಸಿಲ್ಲದಿದ್ದರೆ ಅದರಿಂದ ಹೊರಬನ್ನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಇತರರ ಕೆಟ್ಟ ವರ್ತನೆಯನ್ನು   ಕ್ಷಮಿಸುವ ಒಳ್ಳೆತನ ತೋರುವಿರಿ. ಅದನ್ನು ಅವರು ದುರುಪಯೋಗ ಮಾಡದಂತೆ ನೋಡಿಕೊಳ್ಳಿ.

ವೃಷಭ
ಮುಖ್ಯ ಕೆಲಸ ಇಂದೇ ಪೂರೈಸಬೇಕಾದ ಒತ್ತಡ. ಸಮಯ ಮೀರುತ್ತಿದೆ. ನೆರವು ಸಿಗುತ್ತಿಲ್ಲ. ಸಣ್ಣ ವಿಷಯವನ್ನೂ ಕಡೆಗಣಿಸಬೇಡಿ. ಎಲ್ಲ ಸರಿಯಾಗುವುದು.

ಮಿಥುನ
ನೀವು ಕೈಗೊಳ್ಳುವ ಕಾರ್ಯಕ್ಕೆ ಕುಟುಂಬಸ್ಥರ ಬೆಂಬಲದ ಅಗತ್ಯವಿದೆ. ಅನುನಯದಿಂದ ಅದನ್ನು ಪಡೆಯಿರಿ. ಅವರಿಗೆ ಅಸಮಾಧಾನ ಸೃಷ್ಟಿಸಬೇಡಿ.

ಕಟಕ
ಅನಿರೀಕ್ಷಿತವಾದುದನ್ನು ನಿರೀಕ್ಷಿಸಿ. ಯಶಸ್ಸು, ಹಣ, ಕೀರ್ತಿ ಎಲ್ಲವೂ ಇಂದು ನಿಮ್ಮೆಡೆಗೆ ಉದಾರ ದೃಷ್ಟಿ ತೋರಲಿವೆ. ಎಲ್ಲರನ್ನು ಮೆಚ್ಚಿಸುವಿರಿ.

ಸಿಂಹ
ಒಂದೇ ಕೆಲಸವನ್ನು ನಿರಂತರವಾಗಿ ಮಾಡಲು ಮನಸ್ಸಿಲ್ಲವೆ? ಹಾಗಿದ್ದರೆ ನಿಮ್ಮ ಚಿಪ್ಪಿನಿಂದ ಹೊರಬನ್ನಿ, ಹೊಸತನ ಹುಡುಕಿ. ಎಲ್ಲರ ಜತೆ ಬೆರೆಯಿರಿ.

ಕನ್ಯಾ
ಗ್ರಹಗತಿ ನಿಮಗಿಂದು ಪೂರಕವಾಗಿದೆ. ಸಂಘಟಿತ ಕಾರ್ಯದಿಂದ ಹೆಚ್ಚಿನ ಯಶಸ್ಸು. ನಾನೊಬ್ಬನೇ ಸಾಧಿಸುತ್ತೇನೆ ಎಂಬ ಅಹಂ ತ್ಯಜಿಸಿ ಕಾರ್ಯವೆಸಗಿ.

ತುಲಾ
ಒತ್ತಡ, ಉದ್ವಿಗ್ನತೆ, ಅಸಹನೆ ಇಂದು ನಿಮ್ಮನ್ನು ಆವರಿಸುತ್ತದೆ. ಸಂಜೆ ವೇಳೆಗೆ ಪ್ರೀತಿಪಾತ್ರರ ಜತೆಗಿನ ಮಾತುಕತೆ ಇವೆಲ್ಲವನ್ನು ಮರೆಸುತ್ತದೆ.

ವೃಶ್ಚಿಕ
ಗಾಯ ಅಥವಾ ಅನಾರೋಗ್ಯ ಕಾಡಬಹುದು. ಹರಿತ ವಸ್ತು, ವಾಹನ ಚಲಾವಣೆಯಲ್ಲಿ ಎಚ್ಚರ ವಹಿಸಿ. ದುಂದುವೆಚ್ಚ ಕಡಿಮೆ ಮಾಡಿ.

ಧನು
ನಿಮ್ಮ ಸಿಡುಕಿನಿಂದ ಇತರರ ಮನಸ್ಸು ನೋಯಿಸಬೇಡಿ. ಇತರರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನೆರವಾಗಿ.

ಮಕರ
ಭಾವನಾತ್ಮಕ ಸಂಘರ್ಷ. ಒಂದು ಕ್ಷಣ ಅತಿಯಾದ ಸಂತೋಷ ಅನುಭವಿಸುವಿರಿ. ಮರುಕ್ಷಣ ಬೇಸರ ಕಾಡಬಹುದು. ಆರ್ಥಿಕ ಲಾಭ ಉಂಟಾಗಲಿದೆ.

ಕುಂಭ
ನಿಮ್ಮ ಕಾರ್ಯವೈಖರಿ ನಿಮಗೆ ಹೊಗಳಿಕೆ   ತರುವುದು. ಎಲ್ಲವೂ ಸರಾಗ. ಸಂಜೆ ವೇಳೆಗೆ  ಮೋಜಿನ ಕಾಲಕ್ಷೇಪ. ಇನ್ನಿತರ ಒತ್ತಡಗಳನ್ನು ಮರೆತು ವ್ಯವಹರಿಸಿ.

ಮೀನ
ಆತ್ಮೀಯ ಸ್ನೇಹಿತರು ಇಂದು ನಿಮ್ಮ ದಿನವನ್ನು ತುಂಬುತ್ತಾರೆ. ಮಾನಸಿಕ ಒತ್ತಡಗಳನ್ನು ಅವರು ಮರೆಸುತ್ತಾರೆ. ಕೌಟುಂಬಿಕ ಹೊಣೆ ಹೆಚ್ಚುವುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!