Thursday, March 23, 2023

Latest Posts

ಭಾರತ ಪಾಕ ಪದ್ದತಿಯಲ್ಲೂ ಶ್ರೀಮಂತ: ದಕ್ಷಿಣ ಭಾರತದ ಕೆಲ ಪಾನೀಯಗಳ ಮೂಲ ಗೊತ್ತಾ?

ತ್ರಿವೇಣಿ ಗಂಗಾಧರಪ್ಪ

ಕಲೆ, ಸಂಸ್ಕೃತಿ, ಸಂಪ್ರದಾಯ ಎಲ್ಲದರಲ್ಲೂ ಭಾರತದ್ದೇ ಮೇಲುಗೈ ಎಂಬುದು ಅರಿನವಿಲ್ಲಿದರೂ ಇಲ್ಲಿನ ಪಾಕ ಪದ್ದತಿ ಕೂಡ ಅಷ್ಟೇ ಪ್ರಾಮುಖ್ಯತೆಯನ್ನು ಪಡೆದಿದೆ. ಅನ್ನಕ್ಕೆ ದೇವರ ಸ್ವರೂಪ ಕೊಟ್ಟ ನಾಡಿದು, ಊಟ ಸೇವಿಸುವ ಮುನ್ನ ನಮಿಸಿ ಗೌರವ ಸೂಚಿಸುವ ಅಪರೂಪದ ಸಂಸ್ಕೃತಿ ಭಾರತೀಯರಿಗಿದೆ. ಇಲ್ಲಿ ಪ್ರತಿಯೊಂದ ಖಾದ್ಯವೂ ಕೂಡ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಅವುಗಳಲ್ಲಿ ನಿತ್ಯ ಸೇವಿಸುವ ಪಾನೀಯಗಳೂ ಕೂಡ ಹೊರತಾಗಿಲ್ಲ.

ಪ್ರತಿಯೊಂದಕ್ಕೂ ಪಾನೀಯಾಗೂ ವಿಶಿಷ್ಟವಾದ ಇತಿಹಾಸವಿದೆ ತೆಲೆನೋವು, ಆಯಾಸಕ್ಕೆ ಕುಡಿಯುವ ಕಾಫಿ, ಮಜ್ಜಿಗೆ, ಪಾನಕ, ರಾಗಿ ಗಂಜಿ ಎಲ್ಲದಕ್ಕೂ ಮೂಲ ಇದೆ ಅದರ ಜೊತೆಗೆ ಔಷಧೀಯ ಗುಣವೂ ಸಹ. ಅಂತವುಗಳ ಬಗ್ಗೆ ತಿಳಿಯೋದಾದರೆ….

ಫಿಲ್ಟರ್ ಕಾಫಿ: ತಾಮ್ರದ ಲೋಟದಲ್ಲಿ ಬರುತ್ತಿರುವ ಹೊಗೆ ಕಾಫಿ ಬೀಜದ ಘಮಲು ಮೂಗಿಗೆ ಬಡಿಯುತ್ತಿದ್ದರೆ ಅದರ ಪರಿಮಳಕ್ಕೆ ಮೈಯಲ್ಲಾ ಪುಳಕಿತವಾಗುತ್ತದೆ. ಕಾಫಿಗೂ ದಕ್ಷಿಣ ಭಾರತಕ್ಕೂ ಬಿಡಿಸಲಾಗದ ನಂಟಿದೆ. ಫಿಲ್ಟರ್‌ ಕಾಫಿಯ ಸಂಪೂರ್ಣ ಇತಿಹಾಸ ತಿಳಿಯಲು ಕಾಫಿ ಭಾರತಕ್ಕೆ ಹೇಗೆ ತಲುಪಿತು ಎಂಬ ಕಥೆಗೆ ಹಿಂತಿರುಗಬೇಕಾಗಿದೆ.

17 ನೇ ಶತಮಾನದ ಆರಂಭದಲ್ಲಿ, ಚಿಕ್ಕಮಗಳೂರಿನ ಬಾಬಾ ಬುಡನ್ ಎಂಬ ಮುಸ್ಲಿಂ ಸಂತನು ಮೆಕ್ಕಾಗೆ ತೀರ್ಥಯಾತ್ರೆ ಮಾಡಿದ ನಂತರ ಭಾರತಕ್ಕೆ ಕೆಲವು ಕಾಫಿ ಬೀಜಗಳನ್ನು ಕಳ್ಳಸಾಗಣೆ ಮಾಡಿದನೆಂದು ಹೇಳಲಾಗುತ್ತದೆ. ಆಗ ಹಸಿರು ಕಾಫಿ ಬೀಜಗಳನ್ನು ಸಾಗಿಸಲು ಅವಕಾಶವಿರಲಿಲ್ಲ. ಬಾಬಾ ತನ್ನ ಉದ್ದನೆಯ ಗಡ್ಡದಲ್ಲಿ ಏಳು ಕಾಳುಗಳನ್ನು ಬಚ್ಚಿಟ್ಟುಕೊಂಡು ಬಂದು ತಮ್ಮ ಊರಿನಲ್ಲಿ ಇವುಗಳನ್ನು ನೆಟ್ಟರು ಮತ್ತು 20 ನೇ ಶತಮಾನದ ವೇಳೆಗೆ, ಕಾಫಿಯು ದಕ್ಷಿಣ ಭಾರತದ ಬಹುತೇಕ ಮನೆಗಳ ಅವಿಭಾಜ್ಯ ಅಂಗವಾಯಿತು ಎಂದು ಹೇಳಲಾಗುತ್ತದೆ.

ಫಿಲ್ಟರ್‌ ಕಾಫಿ ಬಗ್ಗೆ ಇನ್ನೂ ಆಳವಾಗಿ ತಿಳಿಯಲು ಈ ಲಿಂಕ್‌ ಒತ್ತಿ

How To Make South Indian Filter Coffee + Video - Whiskaffair

ಪಾನಕ: ಬಾಯಾರಿಕೆ ನೀಗಿಸುವುದರ ಜೊತೆಗೆ ಧಾರ್ಮಿಕ ಸಂಕೇತವನ್ನು ಹೊಂದಿರುವ ಈ ಪಾನಕಕ್ಕೆ ಕರ್ನಾಟಕ, ತೆಲುಗು ರಾಜ್ಯಗಳಲ್ಲಿ ವಿಶೇಷವಾದ ಸ್ಥಾನವಿದೆ. ಬೆಲ್ಲ, ಏಲಕ್ಕಿ, ತಣ್ಣನೆಯ ನೀರಿನಿಂದ ತಯಾರಿಸಿದ ಪಾನಕ ಎಲ್ಲರ ಪ್ರಿಯ.

ಸಾಮಾನ್ಯವಾಗಿ ಇದನ್ನು ರಾಮನವಮಿ ಹಬ್ಬದ ನೈವೇದ್ಯ ಅಂತಲೂ ಹೇಳಲಾಗಿದೆ. ಶ್ರೀರಾಮನವಮಿ ಬೇಸಿಗೆ ಋತುಮಾನದಲ್ಲಿ ಬರುವ ಹಬ್ಬವಾಗಿದ್ದು, ಊರು ಮಂದಿಗೆಲ್ಲಾ ಪಾನಕ ಹಂಚಿ ಅವರ ಬಾಯಾರಿಕೆ ನೀಗಿಸುವುದು ರೂಢಿ. ಇದರ ಜೊತೆಗೆ ಕೋಸಂಬರಿಯಂತಹ ಆರೋಗ್ಯಕ್ಕೆ ತಂಪು ನೀಡುವ ಆಹಾರವನ್ನು ನೀಡಲಾಗುತ್ತದೆ.

ಪಾನೀಯದ ವಿಶೇಷತೆ ಏನೆಂದರೆ, ಕೋಣೆಯ ಉಷ್ಣಾಂಶದಲ್ಲಿ ಬಡಿಸಿದರೂ ಇದು ಉತ್ತಮ ಕೂಲರ್ ಆಗಿ ಕಾರ್ಯನಿರ್ವಹಿಸುತ್ತದೆ. ಇತ್ತೀಚಿನ ದಿನಗಳನ್ನು ಲಿಂಬೆಹಣ್ಣು, ಬೇಲದ ಹಣ್ಣಿನ ಬಳಸಿ ಕೂಡ ತಯಾರು ಮಾಡುತ್ತಾರೆ. ಹಲವಾರು ಹಿಂದೂ ದೇವಾಲಯಗಳಲ್ಲಿ, ವಿಶೇಷವಾಗಿ ಬೇಸಿಗೆಯ ತಿಂಗಳುಗಳಲ್ಲಿ ಹೆಚ್ಚಿನ ವಾಡಿಕೆಯಿದೆ.

Traditional Panakam Recipe by Archana's Kitchen

ಕಂಬು ಕೂಜ್/ರಾಗಿ ಗಂಜಿ: ಸ್ಥಳೀಯ ರಾಗಿಯಿಂದ ತಯಾರಿಸಿದ ಈ ಅಧಿಕ-ಪ್ರೋಟೀನ್ ಗಂಜಿ/ಪಾನೀಯವನ್ನು ಸಾಮಾನ್ಯವಾಗಿ ತಮಿಳುನಾಡಿನಲ್ಲಿ ಮಾರಾಟ ಮಾಡಲಾಗುತ್ತದೆ. ರಸ್ತೆಬದಿಯ ಸ್ಟಾಲ್‌ಗಳು ಮತ್ತು ಐಷಾರಾಮಿ ರೆಸ್ಟೊರೆಂಟ್‌ಗಳಲ್ಲಿಯೂ ಕೂಡ ಸಿಗುತ್ತದೆ. ಈ ಪಾನೀಯ ಕರ್ನಾಟಕದಲ್ಲೂ ಸಖತ್‌ ಫೇಮಸ್.‌ ಆರೋಗ್ಯಕರ ದೃಷ್ಟಿಯಿಂದ ಹಸಿವನ್ನು ನೀಗಿಸುವ ಶಕ್ತಿ ಈ ಪಾನೀಯಕ್ಕಿದೆ.

ಕಂಬು ಕೂಜ್ ಅನ್ನು ದಪ್ಪ ಗಂಜಿ ಅಥವಾ ತೆಳ್ಳನೆಯ ಪಾನೀಯವಾಗಿ ನೀಡಲಾಗುತ್ತದೆ. ಇದು ತಮಿಳುನಾಡಿನಲ್ಲಿ ದೊರೆಯುವ ಅತ್ಯಂತ ಅಗ್ಗದ ಖಾದ್ಯಗಳಲ್ಲಿ ಒಂದಾಗಿದ್ದು, ಕೂಲಿ ಕಾರ್ಮಿಕರು, ಚಾಲಕರು ಮತ್ತು ಮನೆಗೆಲಸದವರ ನಿತ್ಯ ಸೇವಿಸುವ ಅಮೃತವಾಗಿದೆ.

ಇದಕ್ಕೆ ಮಜ್ಜಿಗೆ, ಈರುಳ್ಳಿ, ಮೆಣಸಿನಕಾಯಿ ಅಥವಾ ಯಾವುದೇ ಆಯ್ಕೆಯ ವಸ್ತುಗಳೊಂದಿಗೆ ಬಡಿಸಬಹುದು. ತಮಿಳಿನ ಆರಂಭಿಕ ಬರವಣಿಗೆಯಾದ ಸಂಗಮ್ ಸಾಹಿತ್ಯದಲ್ಲಿ ಈ ಭಕ್ಷ್ಯವನ್ನು ಆರೋಗ್ಯಕರ ಉಪಹಾರ ಆಯ್ಕೆಯಾಗಿ ಉಲ್ಲೇಖಿಸಲಾಗಿದೆ. ಹೆಚ್ಚಿನ ಪ್ರೊಟೀನ್ ಅಂಶ ಮತ್ತು ಕಡಿಮೆ ಬೆಲೆಯಿಂದಾಗಿ ಇದು ತಮಿಳುನಾಡಿನಲ್ಲಿ ಕಾರ್ಮಿಕ ವರ್ಗದ ಸಾಮಾನ್ಯ ಆಹಾರವಾಯಿತು.

Kambu Koozh | Pearl Millet Porridge

ತಾರಿ ಕಂಜಿ: ಮುಸ್ಲಿಂ ಮನೆಗಳಲ್ಲಿ, ಖರ್ಜೂರ ಮತ್ತು ಸಾಂಪ್ರದಾಯಿಕ ಥರಿ ಕಂಜಿ, ಅಥವಾ ರವೆ ಗಂಜಿ ತಿನ್ನುವ ಮೂಲಕ ರಂಜಾನ್ ಉಪವಾಸವನ್ನು ಕೊನೆಗೊಳಿಸುವುದು ಸಾಮಾನ್ಯ. ಇದರ ಇತಿಹಾಸ ಇಫ್ತಾರ್ ಔತಣಕ್ಕೆ ಸಂಬಂಧಿಸಿದೆ. ಹಿಂದಿನ ದಿನಗಳಲ್ಲಿ, ಜನರು ಇಫ್ತಾರ್‌ಗಾಗಿ ಅದ್ದೂರಿ ಔತಣಗಳನ್ನು ಪಡೆಯಲು ಸಾಧ್ಯವಾಗದಿದ್ದಾಗ, ಥಾರಿ ಕಂಜಿ ಹೆಚ್ಚು ಜನಪ್ರಿಯವಾಗಿತ್ತು. ಇದು ಸಂಪ್ರದಾಯದಂತೆ ಮುಂದುವರೆದಿದೆ ಈಗಲೂ ಈ ಖಾದ್ಯವಿಲ್ಲದೆ ಇಫ್ತಾರ್ ಕೂಟ ಪೂರ್ಣವಾಗುವುದೇ ಇಲ್ಲ. ಇದು ಹುರಿದ ರವೆ, ಏಲಕ್ಕಿಯ ಪರಿಮಳದಿಂದ ಕೂಡಿದ ಈ ಪಾನೀಯ ಆಹ್ಲಾದಕರ.

Semolina drink (thari kanji) Recipe by Rafeena Majid - Cookpad

ಸಂಭ್ರಮ್/ಮಸಾಲ ಮಜ್ಜಿಗೆ: ಕೇರಳದ ತಣ್ಣಗಾದ ಮಜ್ಜಿಗೆಯ ಪಾನೀಯ. ಇದನ್ನು ದಕ್ಷಿಣ ಭಾರತದ ಲಸ್ಸಿ ಎಂದೂ ವಿವರಿಸಬಹುದು. ಭಾರತದಲ್ಲಿ ಹೈನುಗಾರಿಕೆಯು ಪ್ರಚಲಿತವಾದಾಗಿನಿಂದ, ಮಜ್ಜಿಗೆ ಅನೇಕ ಭಾರತೀಯರ ದೈನಂದಿನ ಆಹಾರದ ಭಾಗವಾಗಿದೆ. ಇದು ಲಸ್ಸಿ, ಚಾಸ್ ಅಥವಾ ಸಂಭ್ರಮ್/ ಕರ್ನಾಟಕದಲ್ಲಿ ಮಸಾಲಾ ಮಜ್ಜಿಗೆ ರೂಪದಲ್ಲಿ ದೊರೆಯುತ್ತದೆ.

ಉತ್ತರ ಭಾರತದ ಸಿಹಿ ವೈವಿಧ್ಯಕ್ಕಿಂತ ಭಿನ್ನವಾಗಿ, ಸಂಭ್ರಮವು ಮಜ್ಜಿಗೆಯ ಮಸಾಲೆಯುಕ್ತ ರೂಪಾಂತರವಾಗಿದೆ. ಇದು ಅತ್ಯುತ್ತಮವಾದ ತಂಪು ಮತ್ತು ಬೇಸಿಗೆಯಲ್ಲಿ ಕೇರಳಿಗರಿಗೆ ಕುಡಿಯಲು ಯೋಗ್ಯವಾದ ಪಾನೀಯವಾಗಿದೆ. ಮಜ್ಜಿಗೆಗೆ ಪುಡಿಮಾಡಿದ ಮೆಣಸಿನಕಾಯಿ, ಈರುಳ್ಳಿ, ಕರಿಬೇವಿನ ಎಲೆಗಳು, ಶುಂಠಿ ಮತ್ತು ಉಪ್ಪನ್ನು ಸೇರಿಸಿ ತಯಾರಿಸಲಾಗುತ್ತದೆ.

ಕೇರಳ, ಕರ್ನಾಟಕದಲ್ಲಿ ಇದು ದಿನವಿಡೀ ಸುಡುವ ಬಿಸಿಲಿನಲ್ಲಿ ದುಡಿಯುವ ದೈನಂದಿನ ಕೂಲಿ ಕಾರ್ಮಿಕರ ಸಾಮಾನ್ಯ ಪಾನೀಯವಾಗಿದೆ. ಇದು ನಿರ್ಜಲೀಕರಣದ ವಿರುದ್ಧ ಹೋರಾಡುತ್ತದೆ.

sambaram recipe | spicy buttermilk | summer special recipe | Special  recipes, Spicy recipes, Recipes

ನನ್ನಾರಿ ಶರಬತ್ತು: ಶರಬತ್ ಮೇಲಿನ ಪ್ರೀತಿಯು ಭೌಗೋಳಿಕ ಗಡಿಗಳಲ್ಲಿ ಭಾರತವನ್ನು ಒಂದುಗೂಡಿಸುತ್ತದೆ. ದಕ್ಷಿಣದಲ್ಲಿ, ಅತ್ಯಂತ ಜನಪ್ರಿಯವಾದ ಶರಬತ್ ಅನ್ನು ನನ್ನಾರಿ (ಭಾರತೀಯ ಸರ್ಸಪರಿಲ್ಲಾ) ಸಾರದಿಂದ ತಯಾರಿಸಲಾಗುತ್ತದೆ.

12 ನೇ ಶತಮಾನದ ಪರ್ಷಿಯನ್ ಪುಸ್ತಕದಲ್ಲಿ ಜಖಿರೆಯೆ ಖ್ವಾರಾಜ್ಮ್ಶಾಹಿ ಹೀಗೆ ಬರೆದಿದ್ದಾರೆ, “ಪ್ರಪಂಚದ ಮೊದಲ ತಂಪು ಪಾನೀಯ” ಎಂದು ಬಣ್ಣಿಸಿದ್ದಾರೆ.  ಗಲ್ಫ್ ದೇಶಗಳಿಂದ ಮೊಘಲ್ ಚಕ್ರವರ್ತಿ ಬಾಬರ್ ಆಳ್ವಿಕೆಯ ಅವಧಿಯಲ್ಲಿ ಶರಬತ್ ಮೊದಲು ಭಾರತವನ್ನು ತಲುಪಿತು. ಇದು ಶೀಘ್ರದಲ್ಲೇ ಬಾಬರ್ ಮತ್ತು ಅವನ ಉತ್ತರಾಧಿಕಾರಿಗಳ ನೆಚ್ಚಿನ ಪಾನೀಯವಾಯಿತು.

ಇದನ್ನು ಯಾವುದೇ ಹಣ್ಣು ಅಥವಾ ಮೂಲಿಕೆಯಿಂದ ತಯಾರಿಸಬಹುದು. ಇಂದಿಗೂ ಮಧುರೈನಲ್ಲಿ 115 ವರ್ಷ ಹಳೆಯದಾದ ನನ್ನಾರಿ ಶರಬತ್ ಅಂಗಡಿಯನ್ನು ಗಮನಿಸಬಹುದು. ಅದರ ಮಾಲೀಕರು ಕೇರಳದ ಪಾಲಕ್ಕಾಡ್‌ನಿಂದ ನನ್ನಾರಿ ಬೇರುಗಳನ್ನು ಪಡೆದು ದಿನಕ್ಕೆ 2,500 ಶರಬತ್ ಬಾಟಲಿಗಳನ್ನು ಮಾರಾಟ ಮಾಡುತ್ತಾರೆ.

ಬೇರುಗಳನ್ನು 12 ಗಂಟೆಗಳ ಕಾಲ ಶುದ್ಧ ನೀರಿನಲ್ಲಿ ನೆನೆಸಿ, ಸಾರವನ್ನು ಸಂಗ್ರಹಿಸುವ ಮೊದಲು 15 ನಿಮಿಷಗಳ ಕಾಲ ಕುದಿಸಿ, ತಂಪಾಗಿಸಿ ಮತ್ತು ಸಕ್ಕರೆ ಪಾಕ ಮತ್ತು ಸಿಟ್ರಿಕ್ ಆಮ್ಲದೊಂದಿಗೆ ಬೆರೆಸಲಾಗುತ್ತದೆ.

Nannari Sarbath | how to make Nannari Syrup home | Easy Nannari Syrup

ಜಿಗರ್ತಾಂಡ/ತಮಿಳಿನಲ್ಲಿ ಕಡಲಕಳೆ: ಹಾಲು, ಬಾದಾಮಿ ಪಿಸಿನ್, ಖೋಯಾ ಮತ್ತು ನನ್ನಾರಿ ರೂಟ್ ಸಿರಪ್‌ನಿಂದ ಮಾಡಿದ ತಂಪು ಪಾನೀಯ. ಮಧುರೈನಲ್ಲಿ ಹುಟ್ಟಿಲ್ಲವಾದರೂ, ಇಲ್ಲಿಂದ ಬೇರ್ಪಡಿಸಲಾಗದು. ಸ್ವಲ್ಪಮಟ್ಟಿಗೆ ಫಲೂಡಾವನ್ನು ಹೋಲುವ ಪಾನೀಯವು ಉತ್ತರದಲ್ಲಿ ತನ್ನ ಮೂಲವನ್ನು ಹೊಂದಿದೆ.  ಈ ಹೆಸರು ಸ್ವತಃ ಎರಡು ಹಿಂದಿ ಪದಗಳಿಂದ ಬಂದಿದೆ – ಜಿಗರ್ ಮತ್ತು ಥಂಡಾ ಅಥವಾ “ಹೃದಯವನ್ನು ತಂಪಾಗಿಸುವ” ಎಂದರ್ಥ. ತಮಿಳಿನಲ್ಲಿ ಇದನ್ನು ತಮಿಳಿನಲ್ಲಿ ಕಡಲಕಳೆ ಎಂತಲೂ ಕರೆಯುತ್ತಾರೆ.

ಇದರ ಮೂಲದ ಬಗ್ಗೆ ಎರಡು ಸಿದ್ಧಾಂತಗಳಿವೆ – ಇದು ಮೊಘಲರ ಅಡುಗೆಮನೆಯಲ್ಲಿ ಹುಟ್ಟಿಕೊಂಡಿದೆ ಎಂದು ಹೇಳಿದರೆ, ಇನ್ನೊಂದು ಪ್ರಕಾರ ಇದು ಪುದುಕ್ಕೊಟ್ಟೈ ಮತ್ತು ರಾಮನಾಥಪುರಂ ನಡುವಿನ ಕರಾವಳಿ ಪ್ರದೇಶದಿಂದ ಬರುತ್ತದೆ. ಉತ್ತರ ಭಾರತದಿಂದ ಮಧುರೈಗೆ ಸಾಗಿಸಲಾಗುತ್ತಿತ್ತು ಎಂದು ಹೇಳಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!