Tuesday, March 28, 2023

Latest Posts

ದಿನಭವಿಷ್ಯ| ಮನದ ಮಾತನ್ನು ನೇರವಾಗಿ ಹೇಳಲು ಹಿಂಜರಿಕೆ ಬೇಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ನಿಮ್ಮ ಮನದ ಮಾತನ್ನು ನೇರವಾಗಿ ಹೇಳಲು ಹಿಂಜರಿಕೆ ಬೇಡ. ಇದು  ಕೆಲವು ಗೊಂದಲ ನಿವಾರಿಸಬಹುದು. ಕೆಲಸದಲ್ಲಿನ ವೇಗ ತೀವ್ರಗೊಳಿಸಬೇಕು.

ವೃಷಭ
ಆಂತರಿಕ ತುಮುಲ. ಇದು ಮಾನಸಿಕ ಕಿರಿಕಿರಿಗೂ ಕಾರಣ ವಾಗುವುದು. ಕೌಟುಂಬಿಕ ಸಂಘರ್ಷ ಅತಿರೇಕಕ್ಕೆ ಹೋಗದಂತೆ ನೋಡಿಕೊಳ್ಳಿ.

ಮಿಥುನ
ಕೆಲಸದ ಒತ್ತಡವು ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಒತ್ತಡವು ಹೆಚ್ಚು ಬಾಧಿಸದಂತೆ ನೋಡಿಕೊಳ್ಳಿ.

ಕಟಕ
ಮಾತಿನಲ್ಲಿ ಇತರರನ್ನು ಒಲಿಸಿಕೊಳ್ಳುವ ಕಲೆ ನಿಮಗೆ ಕರಗತ. ಇದು ನಿಮ್ಮ ವ್ಯವಹಾರ ವೃದ್ಧಿಗೆ ಕಾರಣ ನಿಜ. ಆದರೆ ಅತಿಯಾದ ಮಾತು ಸಂಬಂಧ ಕೆಡಿಸೀತು.

ಸಿಂಹ
ನಿಮ್ಮ ಆತ್ಮೀಯ ಸಂಬಂಧ ಬಿಕ್ಕಟ್ಟಿಗೆ ಸಿಲುಕಬಹುದು. ಅದಕ್ಕೆ ನಿಮ್ಮ ನಡೆನುಡಿಯೂ ಕಾರಣವಾಗುವುದು. ಆದ್ದರಿಂದ ವಿವೇಕದಿಂದ ವರ್ತಿಸಿರಿ.

ಕನ್ಯಾ
ಆಪ್ತರೊಂದಿಗೆ ಕಾಲ ಕಳೆಯುವ ಅವಕಾಶ. ಕೆಲವರು ನಿಮ್ಮ ಬಾಂಧವ್ಯ ಕೆಡಿಸಲು ಯತ್ನಿಸುವರು. ಅದಕ್ಕೆ ಅವಕಾಶ ಕೊಡಬೇಡಿ. ಸಂಯಮವಿರಲಿ.

ತುಲಾ
ವೃತ್ತಿಕ್ಷೇತ್ರದಲ್ಲಿ ನಿಮ್ಮನ್ನು ತುಳಿಯಲು ಕೆಲವರು ಯತ್ನಿಸುವರು. ಸಾಮಾಜಿಕವಾಗಿ ಹೆಚ್ಚು ಪ್ರಬುದ್ಧತೆಯಿಂದ ವರ್ತಿಸಿರಿ. ಕೌಟುಂಬಿಕ ಒತ್ತಡ ಹೆಚ್ಚು.

ವೃಶ್ಚಿಕ
ಆಪ್ತರ ಜತೆಗೆ ವಾಗ್ವಾದ ನಡೆದೀತು. ಅದನ್ನು ತಹಬಂದಿಗೆ ತರುವ ಹೊಣೆ ನಿಮ್ಮದೇ ಆಗಿದೆ. ಕೋಪದ ಕೈಗೆ ಬುದ್ದಿ ಕೊಡಬೇಡಿ. ಸಹನೆಯಿಂದ ವರ್ತಿಸಿ.

ಧನು
ಹಲವು ಹೊಣೆಗಳು ಏಕಕಾಲದಲ್ಲಿ ನಿಮ್ಮ ಮೇಲೆ ಬೀಳಲಿದೆ. ತಾಳ್ಮೆಯಿಂದ ವ್ಯವಹರಿಸುವುದು ಮುಖ್ಯ ಅನವಶ್ಯ ಒತ್ತಡ ಮಾಡಿಕೊಳ್ಳದಿರಿ.

ಮಕರ
ಮನಸ್ಸಿನಲ್ಲಿ ಏನೋ ಕೊರತೆಯ ಭಾವ. ಯಾರಲ್ಲೂ ಹೇಳಲಾಗದ ಚಡಪಡಿಕೆ. ನಿಮ್ಮ ಮನಸ್ಸಿಗೆ ಶಾಂತಿ ಬೇಕು. ಧಾರ್ಮಿಕ ಕಾರ್ಯ ಸಹಕಾರಿ.

ಕುಂಭ
ಅಗತ್ಯದ ಖಾಸಗಿ  ಕಾರ್ಯ ಇಂದು ಪೂರ್ಣಗೊಳ್ಳುವುದು. ಮನೆಯಲ್ಲಿ ಬಿಗುವಿನ ವಾತಾವರಣ. ಸಹನೆಯಿಂದ ವರ್ತಿಸುವುದು ಮುಖ್ಯ.

ಮೀನ
ಕೆಲಸ ಮುಂದೂಡುತ್ತ ಬರುವುದು ನಿಮ್ಮ ಸ್ವಭಾವ. ಇದನ್ನು ಬದಲಿಸಿಕೊಳ್ಳಬೇಕು. ಮಾಡಬೇಕಾದ ಕೆಲಸ ತಕ್ಷಣವೇ ಮಾಡಲು ಆದ್ಯತೆ ಕೊಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!