Monday, March 27, 2023

Latest Posts

ದಿನಭವಿಷ್ಯ| ಎಲ್ಲಾ ಚಿಂತೆಗಳನ್ನು ಮರೆತು ಸಂತೋಷ  ಸಾಧಿಸಲು ಇದು ಸಕಾಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮೇಷ
ಹೆಚ್ಚು ವಿಶ್ವಾಸ, ಹೆಚ್ಚು ಧೈರ್ಯ. ಇಂದಿನ ದಿನ ನೀವು ಅಸಾಧ್ಯವಾದು ದನ್ನು ಸಾಧಿಸುವಿರಿ. ಕಠಿಣ ಕಾರ್ಯವೂ ಸುಲಭದಲ್ಲಿ ನೆರವೇರುವುದು.

ವೃಷಭ
ಹೆಚ್ಚು ಪ್ರಾಕ್ಟಿಕಲ್ ಆಗಿ, ಗುಣಾತ್ಮಕವಾಗಿ ಇಂದು ನಡಕೊಳ್ಳುವಿರಿ. ಇದರಿಂದ ನಿಮ್ಮ ಉದ್ದೇಶ ಸಾಧಿಸುವಿರಿ. ಭಾವನಾತ್ಮಕ ಏರುಪೇರು ನಿಮಗೆ ಬಾಧಿಸದು.

ಮಿಥುನ
ನಿಮ್ಮ ಕಾರ್ಯಕ್ಕೆ ಶ್ಲಾಘನೆ ದೊರಕುವುದು. ಆದರೆ ಬೇರೆಯವರ ಮೆಚ್ಚುಗೆ ಗಳಿಸಲು ಹಾಸ್ಯಾಸ್ಪದ ಪ್ರಯತ್ನ ನಡೆಸದಿರಿ. ಆತ್ಮೀಯರ ಸಲಹೆ ಪಡೆಯಿರಿ.

ಕಟಕ
ಕೆಲವು ವಿಚಾರಗಳು ನಿಮ್ಮನ್ನು ಗೊಂದಲದಲ್ಲಿ ತಳ್ಳುತ್ತವೆ. ಅದಕ್ಕೆ ಕಾರಣ ಹುಡುಕಿ ಪರಿಹಾರ ಕಂಡುಕೊಳ್ಳಿ. ಆತುರದ ತೀರ್ಮಾನ ತೆಗೆದುಕೊಳ್ಳದಿರಿ.

ಸಿಂಹ
ಎಲ್ಲಾ ಚಿಂತೆಗಳನ್ನು ಮರೆತು ಸಂತೋಷ  ಸಾಧಿಸಲು ಇದು ಸಕಾಲ. ಕ್ಷುಲ್ಲಕ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳಲು ಹೋಗಬೇಡಿ.

ಕನ್ಯಾ
ಕೌಟುಂಬಿಕ ಶಾಂತಿ ಮರಳುವುದು. ಮಾನಸಿಕ ಒತ್ತಡದಿಂದ ಹೊರ ಬರುವಿರಿ. ಖಾಸಗಿ ಸಮಸ್ಯೆಗಳು ಪರಿಹಾರವಾದುದು ನಿರಾಳತೆ ತರುವುದು.

ತುಲಾ
ಯಾರನ್ನೂ ಕುರುಡಾಗಿ ನಂಬಬೇಡಿ. ಅವರ ವರ್ತನೆಯ ಹಿಂದೆ ಬೇರೆ  ಉದ್ದೇಶವಿರಬಹುದು. ಅದನ್ನು ಅರಿಯಲು ಪ್ರಯತ್ನಿಸಿ. ಬಂಧುಗಳ ಭೇಟಿ, ಮಾತುಕತೆ.

ವೃಶ್ಚಿಕ
ಇತರರನ್ನು ಕೇವಲ ಅವರ ಮಾತಿನಿಂದ ಅಳೆಯಬೇಡಿ. ಅವರ ಮನಸ್ಸು ಅರಿತು ವ್ಯವಹರಿಸಿ. ನಿಮಗರಿವಿಲ್ಲದ ಮುಖ ಪರಿಚಯವಾದೀತು.

ಧನು
ಕುಟುಂಬ ಸದಸ್ಯರ ಜತೆ ಹೆಚ್ಚು ಸಮನ್ವಯ ಸಾಧಿಸಿರಿ. ಸಣ್ಣ ಮಾತುಗಳು ಕೌಟುಂಬಿಕ ಶಾಂತಿ ಕದಡಲು ಅವಕಾಶ ಕೊಡದಿರಿ. ನಿಮ್ಮಿಂದ ಹೊಂದಾಣಿಕೆ ಅಗತ್ಯ.

ಮಕರ
ನಕಾರಾತ್ಮಕ ಚಿಂತನೆ ಮೊದಲು ಬಿಟ್ಟುಬಿಡಿ. ಪ್ರತಿಯೊಂದು ಕೆಲಸವೂ ನಿಮ್ಮಿಂದಾಗದು ಎಂದು  ಭಾವಿಸುತ್ತ ಪ್ರಯತ್ನ ನಡೆಸದೇ ಇರಬೇಡಿ. ಪ್ರಯತ್ನದಲ್ಲಿ ಫಲವಿದೆ.

ಕುಂಭ
ಹೊಸ ವ್ಯವಹಾರ ಆರಂಭಿಸಲು ಸಕಾಲ. ಪೂರಕ ಪರಿಸ್ಥಿತಿ ನಿರ್ಮಾಣವಾಗುವುದು. ಇತರರ ಟೀಕೆಗಳಿಗೆ ಗಮನ ಕೊಡಬೇಡಿ. ಕೌಟುಂಬಿಕ ಸಾಮರಸ್ಯ.

ಮೀನ
ಬೇರೆಯವರ ಜತೆ ಕಟು ವರ್ತನೆ ತೋರದಿರಿ. ಒರಟು ಮಾತುಗಳು ಸಂಬಂಧ ಕೆಡಿಸಬಹುದು. ಖರೀದಿಯಿಂದ ಹೆಚ್ಚು ವ್ಯಯವಾದೀತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!