Friday, March 24, 2023

Latest Posts

CRIME| ವಂಚಿಸಿದ ಪ್ರಿಯಕರನ ಮೇಲೆ ಬಿಸಿ ಬಿಸಿ ಎಣ್ಣೆ ಸುರಿದ ಯುವತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮದುವೆಯಾಗುವುದಾಗಿ ಹೇಳಿ ವಂಚಿಸಿದ ಪ್ರಿಯಕರನ ಮೇಲೆ ಯುವತಿ ಬಿಸಿ ಎಣ್ಣೆ ಸುರಿದಿರುವ ಘಟನೆ ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ ನಡೆದಿದೆ. ಯುವಕನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆಯಾ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಯುಕವನ ಹೆಸರು ಕಾರ್ತಿ ಮತ್ತು ಆರೋಪಿಯ ಹೆಸರು ಮೀನಾದೇವಿ. ಭವಾನಿ ಪ್ರದೇಶದ ವರ್ಣಪುರಂ ಗ್ರಾಮದವರಾದ ಕಾರ್ತಿ ಪೆರುಂದುರೈ ಎಂಬ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮೀನಾಳನ್ನು ಮದುವೆಯಾಗುವುದಾಗಿ ಹೇಳಿ ನಂಬಿಸಿ ಕೊನೆಗೆ  ಕಾರ್ತಿ ಬೇರೊಬ್ಬನನ್ನು ಮದುವೆಯಾಗಲು ನಿಶ್ಚಿತಾರ್ಥಕ್ಕೆ ರೆಡಿಯಾಗಿದ್ದಾರೆ. ಈ ವಿಚಾರ ತಿಳಿದ ಮೀನಾ ಇಬ್ಬರ ನಡುವೆ ಹಲವು ಬಾರಿ ಜಗಳ ಕೂಡಾ ನಡೆದಿತ್ತು.

ಈ ಹಿನ್ನೆಲೆಯಲ್ಲಿ ಶನಿವಾರ ಇಬ್ಬರೂ ಭೇಟಿಯಾಗಿದ್ದಾರೆ. ಈ ವೇಳೆಯೂ ಇಬ್ಬರ ನಡುವೆ ಮಾತಿನ ಸಮರ ಮುಂದುವರಿದಿದೆ. ಅಷ್ಟರಲ್ಲಿ ಮೀನಾ ಕಾದ ಎಣ್ಣೆಯನ್ನು ತೆಗೆದುಕೊಂಡು ಕಾರ್ತಿಯ ಮೇಲೆ ಎರಚಿದ್ದಾಳೆ. ಕೈ ಮತ್ತು ಮುಖ ಸುಟ್ಟು ಕರಕಲಾದ ಕಾರ್ತಿ ಕೆಳಗೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೀನಾ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!