ದಿನಭವಿಷ್ಯ| ಹಣಕಾಸು, ಕೌಟುಂಬಿಕ ವ್ಯವಹಾರ ಮತ್ತು ಸಂಬಂಧದಲ್ಲಿ ಹಿನ್ನಡೆಯಾಗಬಹುದು

ಮೇಷ
ಹಳೆಯ ಆಪ್ತರು ಭೇಟಿಯಾಗಬಹುದು. ಅವರ ಸಂಗದಲ್ಲಿ ಸಂತೋಷ ಪಡುವಿರಿ. ಹಣದ ವಿಚಾರದಲ್ಲಿ ಕೆಲವು ತೊಡಕು ಉಂಟಾದೀತು.

ವೃಷಭ
ಕೆಲವು ವಿಚಾರಗಳಲ್ಲಿ ಇಂದು ನಿಮಗೆ ನಿರಾಶೆ ಕಾದಿದೆ. ಹಣಕಾಸು, ಕೌಟುಂಬಿಕ ವ್ಯವಹಾರ ಮತ್ತು ಸಂಬಂಧದಲ್ಲಿ ಹಿನ್ನಡೆ ಅನುಭವಿಸುವಿರಿ. ಸಹನೆಯಿರಲಿ.

ಮಿಥುನ
ಹೆಚ್ಚಿದ ಕೌಟುಂಬಿಕ ಹೊಣೆಗಾರಿಕೆಗಳು ಮಾನಸಿಕ ಒತ್ತಡ ಹೇರುತ್ತವೆ. ಪ್ರತೀ ಕೆಲಸವನ್ನು ಹುರುಪಿನಿಂದ ಮಾಡಲು ಪ್ರಯತ್ನಿಸಿ.

ಕಟಕ
ನಿಮ್ಮ ಮನದಾಳದ ಭಾವವನ್ನು ಆಪ್ತರೊಂದಿಗೆ ಹಂಚಿಕೊಳ್ಳಲು ಹಿಂಜರಿಕೆ ಬೇಡ. ಅವರಿಂದ ಪೂರಕ ಪ್ರತಿಸ್ಪಂದನೆ ದೊರಕುವುದು.

ಸಿಂಹ
ಲಾಭ -ನಷ್ಟಗಳಿಲ್ಲದ ಸಮತೋಲಿತ ದಿನ. ಕುಟುಂಬ ಸದಸ್ಯರ ಬೇಡಿಕೆಗಳಿಗೆ ಸ್ಪಂದಿಸಿರಿ. ಅವರಿಗೆ ನಿರಾಶೆ ಉಂಟು ಮಾಡದಿರಿ. ಹಣದ ಖರ್ಚು ಹೆಚ್ಚಳ.

ಕನ್ಯಾ
ಕೆಲಸದ ಒತ್ತಡದಿಂದ ವಿಮುಖರಾಗಿ ವಿಶ್ರಾಂತಿ ಪಡೆಯಲು ಬಯಸಿದರೂ  ಅದು ನಿಮಗೆ ದುರ್ಲಭ. ಮನೆಯಲ್ಲೂ  ಕೆಲಸದೊತ್ತಡ.

ತುಲಾ
ಹಣಕಾಸು ವಿಚಾರಕ್ಕೆ ಸಂಬಂಧಿಸಿ ಹೆಚ್ಚು ಕಾರ್ಯನಿರತ. ಕೆಲಸದಲ್ಲಿ ಗೋಜಲು ಉಂಟಾಗಬಹುದು. ಅದನ್ನು ನಿವಾರಿಸುವಲ್ಲಿ ವ್ಯಸ್ತರಾಗುವಿರಿ.

ವೃಶ್ಚಿಕ
ಆರ್ಥಿಕ ಪರಿಸ್ಥಿತಿ ಚಿಂತೆ ತರುತ್ತದೆ. ಸಣ್ಣಪುಟ್ಟ ವಿಚಾರಗಳು ನಿಮ್ಮ ಸಂತೋಷ ಹಾಳುಗೆಡವುತ್ತವೆ. ಏನಿದ್ದರೂ ಆತ್ಮವಿಶ್ವಾಸ ಕುಂದದಿರಲಿ.

ಧನು
ನಿಮ್ಮ ಕಾರ್ಯವೈಖರಿ ಕೆಲವರಿಂದ  ಪ್ರಶ್ನಿಸಲ್ಪಡುವುದು.  ಅದನ್ನು ನಿರ್ಲಕ್ಷಿಸದಿರಿ. ಅದರ ಕುರಿತು ಗಮನ ಹರಿಸಿ ಕ್ರಮ ತೆಗೆದುಕೊಳ್ಳಿ.

ಮಕರ
ಬಾಹ್ಯ ಸೌಂದರ್ಯಕ್ಕೆ ನೀವಿಂದು ವಿಶೇಷ  ಗಮನ ಕೊಡುವಿರಿ. ಯಾರನ್ನೋ ಮೆಚ್ಚಿಸುವ ಪ್ರಯತ್ನ . ಹಾಗೆಂದು ಇತರರ  ಭಾವನೆಗೆ ನೋವು ನೀಡದಿರಿ.

ಕುಂಭ
ವೃತ್ತಿಯಲ್ಲಿ ಪ್ರಮುಖ ಸಾಧನೆ ಮಾಡುತ್ತೀರಿ. ಭಾವನಾತ್ಮಕವಾಗಿ ಹೆಚ್ಚು ಸಂತೋಷದಬೆಳವಣಿಗೆ. ಆರ್ಥಿಕ ಉನ್ನತಿ.

ಮೀನ
ಕೆಲದಿನಗಳಿಂದ ಕಾಡುತ್ತಿದ್ದ ಆರ್ಥಿಕ ಬಿಕ್ಕಟ್ಟು  ಪರಿಹಾರ ಕಾಣಲಿದೆ. ಇದರಿಂದ ಅವಶ್ಯ ಖರ್ಚುವೆಚ್ಚ ಸರಿದೂಗಿಸುವಿರಿ. ಕೌಟುಂಬಿಕ ಶಾಂತಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!