ದಿನಭವಿಷ್ಯ| ನಿಮ್ಮ ಕಾರ್ಯಗಳಿಗೆ ಕೊನೆಯ ಕ್ಷಣದಲ್ಲಿ ವಿಘ್ನ ಬಂದೀತು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮೇಷ
ನಿಮ್ಮ ಕೆಲಸ ಪ್ರಾಮಾಣಿಕವಾಗಿ ಮಾಡಿ. ಇತರರ ಮೇಲೆ ಜವಾಬ್ದಾರಿ ಜಾರಿಸಬೇಡಿ. ಸಂಬಂಧದಲ್ಲಿ ಉತ್ತಮ ಬೆಳವಣಿಗೆ.

ವೃಷಭ
ನಿಮ್ಮ ಕಾರ್ಯಗಳಿಗೆ ಕೊನೆಯ ಕ್ಷಣದಲ್ಲಿ ವಿಘ್ನ ಬಂದೀತು. ಅದರಿಂದ ಕಾರ್ಯ ವಿಳಂಬ. ನಿರ್ಲಕ್ಷ್ಯದಿಂದ  ತಪ್ಪುಗಳೂ ಘಟಿಸಬಹುದು.

ಮಿಥುನ
ನಿಮ್ಮ ಭಾವುಕತೆ ಕೆಲಸದ ಮೇಲೆ ಪರಿಣಾಮ ಬೀರಬಹುದು. ಕರ್ತವ್ಯದಿಂದ ಮನಸ್ಸು ವಿಮುಖ ಆಗದಿರಲಿ. ನಂಬಿಕೆ ದ್ರೋಹ ಎದುರಿಸುವಿರಿ.

ಕಟಕ
ಕೌಟುಂಬಿಕ ಚಿಂತೆ ಬಾಧಿಸುವುದು. ಭಾವನಾತ್ಮಕ ಬಂಧಗಳು ನಿಮ್ಮ ಮನಸ್ಸನ್ನು ನಿಯಂತ್ರಿಸಲು ಅವಕಾಶ ಕೊಡದಿರಿ. ಪ್ರಾಕ್ಟಿಕಲ್ ಆಗಿ ಯೋಚಿಸಿರಿ.

ಸಿಂಹ
ಪ್ರೀತಿಯ ವಿಷಯದಲ್ಲಿ ಹೆಚ್ಚು ವ್ಯಸ್ತರಾಗುವಿರಿ. ಇದರಿಂದ ನಿಮ್ಮ ಇತರ ಕರ್ತವ್ಯ ಕಡೆಗಣಿಸುವ ಸಾಧ್ಯತೆಯಿದೆ. ಹಣದ ವಿಚಾರದಲ್ಲಿ ಚಿಂತೆ ಬಾಧಿಸುವುದು.

ಕನ್ಯಾ
ಸಂಬಂಧಗಳ ವಿಚಾರದಲ್ಲಿ ಎಚ್ಚರದಿಂದ ವರ್ತಿಸಿರಿ. ಪ್ರೀತಿಪಾತ್ರರನ್ನು ದೂರ ಮಾಡಿಕೊಳ್ಳದಿರಿ. ಮಾತು, ವರ್ತನೆಯಲ್ಲಿ ಸಂಯಮವಿರಲಿ.

ತುಲಾ
ಇತರರ ವಿಷಯದಲ್ಲಿ ಅತಿಯಾದ ಆಸಕ್ತಿ ತೋರಲು ಹೋಗದಿರಿ. ಮೊದಲಿಗೆ ನಿಮ್ಮ ಆಂತರಿಕ ವ್ಯವಹಾರ ಸರಿಮಾಡಿಕೊಳ್ಳಿ. ಕೌಟುಂಬಿಕ ಉದ್ವಿಗ್ನತೆ.

ವೃಶ್ಚಿಕ
ಕೆಲವು ಸಮಸ್ಯೆ ಎದುರಾಗಬಹುದು. ಅದನ್ನು ಜಾಣತನದಿಂದ ಪರಿಹರಿಸಿಕೊಳ್ಳಿ. ಅವಸರದ ತೀರ್ಮಾನ ಬೇಡ. ಸೂಕ್ತ ಸಹಕಾರ ಲಭಿಸುವುದು.

ಧನು
ಪ್ರಮುಖ ವಿಷಯ ಸರಿಯಾಗಿ ನಿಭಾಯಿಸಬೇಕು. ಅವಸರ ಸಲ್ಲದು. ಆಪ್ತರಿಂದ ಸಲಹೆ ಸೂಚನೆ ಪಡೆಯುವುದು ಒಳ್ಳೆಯದು.

ಮಕರ
ಪರಿಸ್ಥಿತಿಗೆ ತಕ್ಕಂತೆ ಕಾರ್ಯಾಚರಿಸಿರಿ. ನಿಮ್ಮ ಲೆಕ್ಕಾಚಾರ ತಪ್ಪಿದರೆ ಹತಾಶರಾಗದಿರಿ. ಕೂಡಲೇ ಯೋಜನೆ ಬದಲಿಸಿಕೊಳ್ಳಿ. ಎಲ್ಲ ಸರಿಯಾಗುವುದು.

ಕುಂಭ
ನಿಮ್ಮ ಸಹನೆ ಕೆಣಕುವ ಬೆಳವಣಿಗೆ ಸಂಭವಿಸಬಹುದು. ಸ್ನೇಹಿತರೇ ನಿಮಗೆ ಎದುರಾಳಿಯಾದಾರು. ಅಸಹನೆಯಿಂದ ದಿನ ಕಳೆಯುವಿರಿ.

ಮೀನ
ನಿಮಗೆ ಪೂರಕವಾದ ಬೆಳವಣಿಗೆ. ಕೆಲವರ ಸಲಹೆಗಳು ನಿಮಗೆ ಲಾಭಕರ ಆಗುವುದು. ಬಂಧುಗಳಿಂದ ಒಳ್ಳೆಯ ಬೆಂಬಲ ಪಡೆಯುವಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!