Friday, June 9, 2023

Latest Posts

ಸಿದ್ದರಾಮಯ್ಯಗೇ ಸ್ಪರ್ಧಿಸಲು ಕ್ಷೇತ್ರವಿಲ್ಲ, ಇನ್ನು ಬೇರೆಯವರನ್ನು ಗೆಲ್ಲಿಸಲು ಹೇಗೆ ಸಾಧ್ಯ?-ನಿರಾಣಿ

ಹೊಸದಿಗಂತ ವರದಿ ಹುಬ್ಬಳ್ಳಿ: 

ರಾಜಕೀಯ ಕ್ಷೇತ್ರದಲ್ಲಿ ಅಪಾರ ಅನುಭವಿ, ಮಾಜಿ ಮುಖ್ಯಮಂತ್ರಿಯಾದವರಿಗೆ ಚುನಾವಣೆ ಸ್ಪರ್ಧಿಸಲು ತಮ್ಮದೇ ಆದ ಕ್ಷೇತ್ರವಿಲ್ಲದಿದ್ದರೆ ಮತ್ತೊಬ್ಬರನ್ನು ಗೆಲ್ಲಿಸಿ ಅಧಿಕಾರಕ್ಕೆ ಹೇಗೆ ತರುತ್ತಾರೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಕೈಗಾರಿಕಾ ಸಚಿವ ಮುರಗೇಶ ನಿರಾಣಿ ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದರು.

ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ 30 ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದರು. ಬಳಿಕ ಜಾತಿ ಜನ ಹೆಚ್ಚಾಗಿದ್ದಾರೆ ಎಂಬುದಕ್ಕೆ ಬಾದಾಮಿ ಹೋಗಿ ರ್ಸ್ಪಸಿ ಜಯಗಳಿಸಿದ್ದರು. ಸದ್ಯ ಕೋಲಾರ ಸ್ಪರ್ಧಿಸುವುದಾಗಿ ಹೇಳಿದ್ದ ಅವರು ಸರ್ವೇ ಪ್ರಕಾರ ಗೆಲ್ಲುವುದಿಲ್ಲ ಎಂಬದು ಗೊತ್ತಾಗಿ ಬೇರೆ ಕ್ಷೇತ್ರ ಹುಡುಕಾಟದಲ್ಲಿದ್ದಾರೆ ಎಂದರು.

ನಿತ್ಯ ಒಂದೊಂದು ಗ್ಯಾರೆಂಟಿ ಹೇಳುತ್ತಿದ್ದು, ಕಾಂಗ್ರೆಸ್ ಅಧಿಕಾರವಿರುವ ಸಮಯದಲ್ಲಿ ರಾಜ್ಯಕ್ಕೆ ಒಂದು ಒಳ್ಳೆಯ ಕೆಲಸ ಮಾಡಿಲ್ಲ. ಆಗದಿರುವಂತ ಗ್ಯಾರೆಂಟಿ ನೀಡುತ್ತಿದ್ದಾರೆ. ಈಗಾಗಲೇ ರಾಜ್ಯದ ಪ್ರತಿ ಮಹಿಳೆಯರಿಗೆ 1 ಸಾವಿರ ರೂ. ನೀಡುತ್ತಿರುವುದು ಚಾಲನೆಯಲ್ಲಿದೆ. 75 ಯುನಿಟ್ ವಿದ್ಯುತ್ ನೀಡುತ್ತಿದ್ದೇವೆ. ಬಿಜೆಪಿ ಸರ್ಕಾರ ಹೇಳಿದಂತೆ ಮಾಡಿದೆ. ಆದರೆ ಕಾಂಗ್ರೆಸ್ ಬೇರೆ ಸರ್ಕಾರ ಮಾಡಿದ ಅಭಿವೃದ್ಧಿ ಕಾಮಗಾರಿಗಳ ಕ್ರೆಡಿಟ್ ನಮ್ಮದು ಎನ್ನುತ್ತಿದ್ದಾರೆ. ರಾಜ್ಯದ ಜನರು ಪ್ರಜ್ಞಾವಂತರಿದ್ದು, ಕಾಂಗ್ರೆಸ್ ಸುಳ್ಳು ಭರವಸೆ ನಂಬುವುದಿಲ್ಲ ಎಂದು ತಿಳಿಸಿದರು.

ರಾಹುಲ್ ಗಾಂಧಿ ರಾಷ್ಟ್ರೀಯ ನಾಯಕರಾಗಿದ್ದಾರೆ. ನಮ್ಮ ದೇಶದ ಸಮಸ್ಯೆ ಇಲ್ಲಿ ಮಾತಾಡಬೇಕು. ಆದರೆ ಬೇರೆ ದೇಶದಲ್ಲಿ ಮಾತನಾಡುತ್ತಾರೆ ಅಂದರೆ ಅವರ ಬದ್ದತೆ ಏನು ಎಂದು ಪ್ರಶ್ನಿಸಿದರು. ದೇಶದ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ ಎಂದು ಹರಿಹಾಯ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!