ದಿನಭವಿಷ್ಯ| ಸರಿಯಾದ ಯೋಜನೆಯಿಲ್ಲದೆ ನಿಮ್ಮ ಕೆಲಸ  ಕೆಡಬಹುದು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮೇಷ
ಯಾವುದೇ ಹಿನ್ನಡೆ ನಿಮ್ಮನ್ನಿಂದು ಬಾಧಿಸದು. ಹಾಗಾಗಿ ಆ ಕುರಿತಾದ ಅಂಜಿಕೆ ಬಿಟ್ಟುಬಿಡಿ. ಆದರೆ ದಿನವಿಡಿ ನಿಮ್ಮ ಪಾಲಿಗೆ ನೀರಸವೆನಿಸುತ್ತದೆ.

ವೃಷಭ
ಹಣಕಾಸಿನ ಪರಿಸ್ಥಿತಿ ಚಿಂತೆಗೆ ಕಾರಣವಾಗುವುದು. ಉಳಿತಾಯ ಮಾಡುವ ಬಗ್ಗೆ ಯೋಜಿಸಿರಿ. ಅನವಶ್ಯ ವೆಚ್ಚ ಕಡಿಮೆ ಮಾಡಬೇಕು.

ಮಿಥುನ
ನಿಮ್ಮ ಜನಪ್ರಿಯತೆ ಹೆಚ್ಚಿಸುವ ಬೆಳವಣಿಗೆ. ಸಾಮಾಜಿಕ ಕಾರ್ಯ ದಲ್ಲಿ ಯಶಸ್ಸು.  ಕುಟುಂಬದಲ್ಲಿ ಭಿನ್ನಮತ ಮೂಡಿದರೂ ಶೀಘ್ರ ನಿವಾರಣೆ.

ಕಟಕ
ವೃತ್ತಿಯಲ್ಲಿ ಬಿಕ್ಕಟ್ಟು. ಹಣಕಾಸು ಕೊರತೆ. ಇತರರ ಸಹಕಾರದಿಂದ ಅದನ್ನು ನಿಭಾಯಿಸು ವಿರಿ. ಖಾಸಗಿ ಬದುಕಿನಲ್ಲಿ ಏರುಪೇರು. ದೊಡ್ಡ ನಿರಾಶೆ.

ಸಿಂಹ
ಸರಿಯಾದ ಯೋಜನೆಯಿಲ್ಲದೆ ನಿಮ್ಮ ಕೆಲಸ  ಕೆಡಬಹುದು. ಕೆಲಸದಲ್ಲಿನ ತಪ್ಪು ಸರಿಪಡಿಸುವುದರಲ್ಲೇ ನಿಮ್ಮ ಹಿತವಿದೆ. ಅದಕ್ಕೆ ಮುಜುಗರ ಬೇಡ.

ಕನ್ಯಾ
ಯಾವುದೋ ವಿಷಯದಲ್ಲಿ ನಿಮ್ಮ ನಿಲುವು ಬದಲಿಸುವ ಪ್ರಸಂಗ ನಡೆದೀತು. ಇತರರ ನಿಲುವು ಒಪ್ಪಿಕೊಳ್ಳಬೇಕಾದೀತು. ಸಂಘರ್ಷ ಒಳಿತಲ್ಲ.

ತುಲಾ
ಕೆಲವು ಬೆಳವಣಿಗೆ ನಿಮಗೆ ಹಿತ ತಾರದು. ಆದರೆ ಅದನ್ನು ಒಪ್ಪಿ ಕೊಂಡು ಸಾಗುವುದರಲ್ಲಿ ನಿಮ್ಮ ಹಿತವಿದೆ. ವಿನಾಕಾರಣ ಇತರರನ್ನು ಎದುರು ಹಾಕಿಕೊಳ್ಳದಿರಿ.

ವೃಶ್ಚಿಕ
ವ್ಯವಹಾರದಲ್ಲಿ ಶುಭ ಸುದ್ದಿ. ನೀವು ನಿರೀಕ್ಷಿಸಿದಂತೆ ಕೆಲಸ ಸಾಗುವುದು. ಆದರೆ ಕೌಟುಂಬಿಕವಾಗಿ ಒತ್ತಡ. ಅವರ ಕೆಲವು ಬೇಡಿಕೆ ಅತಿಯೆನಿಸುವುದು.

ಧನು
ಧಾರ್ಮಿಕ ಕಾರ್ಯ ದಲ್ಲಿ  ಹೆಚ್ಚು ಆಸಕ್ತಿ. ಕೆಲವು ಸ ಸ್ಯೆ ಗಳು ನಿಮ್ಮನ್ನು ಆಧ್ಯಾತ್ಮಿಕ
ದೆಡೆಗೆ ನೂಕಬಹುದು. ಕಷ್ಟಕ್ಕೆ ಅಂಜದಿರಿ, ಅದನ್ನು ಎದುರಿಸಿ.

ಮಕರ
ಅಧಿಕ ಕೆಲಸ, ಅಧಿಕ ಒತ್ತಡ. ಎಲ್ಲ ಕಾರ್ಯ ವನ್ನು ಮುಗಿಸಲು ಯತ್ನಿಸುವಿರಿ  ಅಂತಿಮ ವಾಗಿ ಯಾವುದೇ  ಕೆಲಸ ಸರಿಯಾಗಿ ನಡೆಯದು.

ಕುಂಭ
ಆಪ್ತರೆನಿಸಿದವರ ಬಗ್ಗೆ ಶಂಕೆಗೊಳ್ಳುವ ಪ್ರಸಂಗ ಉದ್ಭವಿಸಬಹುದು. ಸರಿಯಾಗಿ ಪರಾಮರ್ಶೆ ನಡೆಸಿ. ಆತುರದಿಂದ ವರ್ತಿಸಬೇಡಿ. ಚಾಡಿ ಮಾತು ನಂಬದಿರಿ.

ಮೀನ
ನೀವು ನಿರೀಕ್ಷಿಸಿದ ಯಶಸ್ಸು ಇಂದು ದೊರಕುವುದು.  ಆದರೆ ಯಶಸ್ಸಿನಿಂದ ಮೈಮರೆಯದಿರಿ. ಕೆಲಸ ಇನ್ನೂ ಉಳಿದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!