Friday, June 2, 2023

Latest Posts

ದಿನಭವಿಷ್ಯ| ನೀವು ಮರೆಯಲೆತ್ನಿಸುವ ಹಳೆಯ ಪ್ರಸಂಗವೊಂದು ಮತ್ತೆ ಸಮಸ್ಯೆ ಸೃಷ್ಟಿಸಬಹುದು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ನಿಮ್ಮ ಮೇಲೆ ಪರಿಣಾಮ ಬೀರುವ ಹಲವು ಬೆಳವಣಿಗೆ. ನೀವು ಮರೆಯಲೆತ್ನಿಸುವ ಹಳೆಯ ಪ್ರಸಂಗ ವೊಂದು ಮತ್ತೆ ಸಮಸ್ಯೆ ಸೃಷ್ಟಿಸಬಹುದು.

ವೃಷಭ
ಆದಾಯದಲ್ಲಿ ಹೆಚ್ಚಳ ಸಂಭವ. ನಿಮ್ಮ ವ್ಯಕ್ತಿತ್ವ ಇತರರನ್ನು ಆಕರ್ಷಿಸುವುದು. ನಿಮ್ಮ ಹೊಸ ಚಿಂತನೆಗಳಿಗೆ ಮನ್ನಣೆ ಸಿಗುವುದು. ಕೌಟುಂಬಿಕ ಸಹಕಾರ.

ಮಿಥುನ
ನಿಮ್ಮ ವೃತ್ತಿ ಕಾರ್ಯಗಳನ್ನು ಮಂಜಾನೆಯೆ ಪೂರೈಸಿ. ಏಕೆಂದರೆ ಸಫಲತೆಯ ಸಾಧ್ಯತೆ ಹೆಚ್ಚು. ಅನವಶ್ಯ ವಿಳಂಬ ಮಾಡದಿರಿ. ಆಪ್ತರ ಭೇಟಿ.

ಕಟಕ
ಹಣದ ವಿಷಯದಲ್ಲಿ ವಿವೇಕದಿಂದ ನಡಕೊಳ್ಳಿ. ಅನವಶ್ಯ ಖರ್ಚು ನಿಯಂತ್ರಿಸಿ. ಪ್ರೀತಿಯ ವಿಷಯದಲ್ಲಿ ನಿಮಗೆ ಪೂರಕ ಬೆಳವಣಿಗೆ.

ಸಿಂಹ
ಆರೋಗ್ಯ ಮತ್ತು ಖಾಸಗಿ ಬದುಕಿನ ಮಧ್ಯೆ ಸಮತೋಲನ ಸಾಧಿಸಿ. ಏಕಾಗ್ರತೆ ಹಾಳು ಮಾಡುವ ವಿಷಯಗಳಿಂದ ದೂರವಿರಿ.

ಕನ್ಯಾ
ಅಚ್ಚರಿಯ ಬೆಳವಣಿಗೆ ಸಂಭವಿಸಬಹುದು. ಅದು ನಿಮಗೆ ಪೂರಕವೇ ಆಗುವುದು. ಕುಟುಂಬದ ಕಡೆಗೆ ಹೆಚ್ಚು ಗಮನ ಕೊಡಿ. ಇಷ್ಟಾನಿಷ್ಟ ಆಲಿಸಿರಿ.

ತುಲಾ
ಪ್ರಮುಖ ಬೆಳವಣಿಗೆ ಸಂಭವಿಸಬಹುದು. ಅದನ್ನು ಸಹನೆಯಿಂದ ನಿಭಾಯಿಸಬೇಕು. ಆಪ್ತರನ್ನು ಎದುರು ಹಾಕಿಕೊಳ್ಳದಿರಿ. ಹೊಂದಾಣಿಕೆ ಮುಖ್ಯ.

ವೃಶ್ಚಿಕ
ಕೆಲವು ಒತ್ತಡಗಳಲ್ಲಿ ಸಿಲುಕಿಕೊಳ್ಳುವಿರಿ. ಆಪ್ತರೆನಿಸಿದವರ ವರ್ತನೆಯೂ ಮಾನಸಿಕ ಉದ್ವಿಗ್ನತೆ ಸೃಷ್ಟಿಸುವುದು. ಸಾವಧಾನದಿಂದ ಪ್ರತಿಕ್ರಿಯಿಸಿರಿ.

ಧನು
ವೃತ್ತಿಯಲ್ಲಿ ಎಲ್ಲವೂ ಸುಸೂತ್ರ. ಸವಾಲೊಂದು ತಾನಾಗಿ ಬಗೆಹರಿಯುವುದು. ಕುಟುಂಬದವರ ಸಹಕಾರ ಸಿಗುವುದು. ಆರ್ಥಿಕ ಉನ್ನತಿ.

ಮಕರ
ಆಪ್ತರೆನಿಸಿದವರು ಮುನಿಸಿಕೊಳ್ಳುವರು. ಅದಕ್ಕೆ ಅವರನ್ನು ದೂರದಿರಿ. ನಿಮ್ಮ ವರ್ತನೆ  ಪರಾಮರ್ಶಿಸಿ. ಆರ್ಥಿಕ ಸಂಕಷ್ಟ ಎದುರಾದೀತು.

ಕುಂಭ
ಕೆಲಸಕ್ಕೆ ಬಾರದ ವಿಷಯಗಳಿಂದ ದೂರವಿರಿ. ಅನ್ಯರ ವಿಷಯದಲ್ಲಿ ತಲೆ ಹಾಕುವುದು ಒಳಿತಲ್ಲ. ನಿಮ್ಮ ಹಿತಾಸಕ್ತಿ ಕಾಯುವುದು ಮುಖ್ಯ.

ಮೀನ
ಎಲ್ಲರ ಜತೆ ಸೌಹಾರ್ದದಿಂದ ನಡಕೊಳ್ಳಿ. ಸಣ್ಣ ವಿಷಯಗಳು ಮನಸ್ಸು  ಕೆಡಿಸಬಹುದು. ಆದರೆ ವಿವೇಕದಿಂದ ನಡೆದುಕೊಳ್ಳಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!