Tuesday, May 30, 2023

Latest Posts

ದಿನಭವಿಷ್ಯ| ನಿಮ್ಮ ಜೀವನದ ಗುರಿ ಈಡೇರಿಸಿಕೊಳ್ಳುವ ಪ್ರಯತ್ನ ನಿಮ್ಮದು

 ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮೇಷ
ನಿಮ್ಮ ಜೀವನದ ಗುರಿ ಈಡೇರಿಸಿಕೊಳ್ಳುವ ಪ್ರಯತ್ನ ನಿಮ್ಮದು. ತಾಳ್ಮೆ ಮಾತ್ರ ಅತಿ ಮುಖ್ಯ. ಆತುರ ತೋರಿದರೆ ಕೈಗೆ ಬರುವುದೂ ತಪ್ಪಿ ಹೋಗಬಹುದು.

ವೃಷಭ
ಶಾಪಿಂಗ್ ಸಡಗರ ನಿಮ್ಮದು. ಖರ್ಚು ಹೆಚ್ಚಿದರೂ ಸಂತೋಷಕ್ಕೆ ಕೊರತೆಯಿಲ್ಲ. ಆಪ್ತರ ಭೇಟಿ. ಸಣ್ಣಪುಟ್ಟ ದೈಹಿಕ ಕಿರಿಕಿರಿ ಕಾಣಿಸಿಕೊಂಡೀತು.

ಮಿಥುನ
ವೃತ್ತಿಯಲ್ಲಿ  ನೀವು ಅಂದುಕೊಂಡುದನ್ನು ಸಾಧಿಸಲು ಹೆಚ್ಚಿನ ಶ್ರಮ ಅಗತ್ಯ. ಯಾವುದೂ ಸುಲಭದಲ್ಲಿ ಆಗದು. ಕೌಟುಂಬಿಕ ಸೌಹಾರ್ದತೆ.

ಕಟಕ
ವೃತ್ತಿಯ ಒತ್ತಡ ಇಂದು ಕಡಿಮೆಯಾಗುವುದು. ಇದರಿಂದ ನಿರಾಳತೆ. ಹೊಸ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡಿದರೆ ಉತ್ತಮ ಫಲ ದೊರಕಲಿದೆ.

ಸಿಂಹ
ಆಪ್ತರೊಂದಿಗೆ ಕಾಲ ಕಳೆಯಲು ಸಿಗುವ ಅವಕಾಶ ಬಿಟ್ಟುಬಿಡಬೇಡಿ. ವೃತ್ತಿಯ ಒತ್ತಡವನ್ನು ಮರೆಯಲು ಅದುವೇ ಒಳ್ಳೆಯ ವಿಧಾನ.

ಕನ್ಯಾ
ನಿಮ್ಮ ಕಾರ್ಯಸಿದ್ಧಿಗೆ ಕಾಯುತ್ತಿದ್ದ ಅವಕಾಶ ಲಭ್ಯವಾಗುವುದು. ನಿಮ್ಮನ್ನು ಟೀಕಿಸುವವರು ಸುಮ್ಮನಾಗುತ್ತಾರೆ. ಕೌಟುಂಬಿಕ ಭಿನ್ನಮತ ಶಮನಗೊಳಿಸಿರಿ.

ತುಲಾ
ಇತರರ ಜತೆಗೂ ನಿಮ್ಮೊಂದಿಗೂ ತಾಳ್ಮೆ ಅವಶ್ಯ. ಎಲ್ಲವೂ ತಕ್ಷಣವೇ ಆಗಬೇಕು ಎಂಬಂತಹ ಮನಸ್ಥಿತಿ ತ್ಯಜಿಸಿ. ಆತುರದಿಂದ ಕಾರ್ಯ ಕೆಟ್ಟೀತು.

ವೃಶ್ಚಿಕ
ಕೌಟುಂಬಿಕ ಸಮಸ್ಯೆ ಪರಿಹರಿಸಲು ನೀವಿಂದು ದಿನ ವ್ಯಯಿಸಬೇಕು. ಸಮಾಧಾನದಿಂದ ವ್ಯವಹರಿಸಿರಿ. ಇತರರ ಕುರಿತಂತೆ  ಅಪನಂಬಿಕೆ, ಪೂರ್ವಗ್ರಹ ಬೇಡ.

ಧನು
ಹೂಡಿಕೆಯಲ್ಲಿ ಲಾಭವಿದೆ. ನಿಮ್ಮ ಕಾರ್ಯಕ್ಕೆ ಸೂಕ್ತ ಬೆಂಬಲ ದೊರಕುವುದು. ಆದರೆ ಕೌಟುಂಬಿಕ ಅಸಮಾಧಾನ ಉಂಟಾಗಬಹುದು.

ಮಕರ
ಆಪ್ತರೊಂದಿಗೆ ಕಾಲ ಕಳೆಯುವ ಅವಕಾಶ ತಪ್ಪಿಸಿಕೊಳ್ಳದಿರಿ. ಆರ್ಥಿಕ ವಿಚಾರಕ್ಕೆ ಸಂಬಂಧಿಸಿದ ಸಮಸ್ಯೆ ಪರಿಹಾರ. ಬಂಧುಗಳ ಭೇಟಿ.

ಕುಂಭ
ಗ್ರಹಗಳು ಇಂದು ನಿಮ್ಮ ಭಾವನೆಯ ಮೇಲೆ ಪ್ರಭಾವ ಬೀರುತ್ತವೆ. ಹಾಗಾಗಿ ಪ್ರತಿ ವಿಷಯದಲ್ಲೂ ಹೆಚ್ಚು ಭಾವುಕರಾಗಿ ವರ್ತಿಸುವಿರಿ.

ಮೀನ
ಆರೋಗ್ಯ ಸಂಬಂಧಿತ ಚಿಂತೆ ಪರಿಹಾರ, ನಿರಾಳತೆ. ವೃತ್ತಿಯಲ್ಲಿ ಕಠಿಣ ಕೆಲಸವೂ ಸುಲಭದಲ್ಲಿ ನೆರವೇರುವುದು. ಆರ್ಥಿಕ ಉನ್ನತಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!