Friday, June 9, 2023

Latest Posts

ಕೇಜ್ರಿವಾಲ್‌ಗೆ ಮತ್ತೊಂದು ಲೆಟರ್‌ ಬಾಂಬ್:‌ ಬಿಆರ್‌ಎಸ್‌ ಕಚೇರಿಗೆ 75 ಕೋಟಿ ರೂ. ನೀಡಿದ್ದಾಗಿ ಸುಖೇಶ್‌ ಪತ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿರುವ ಸುಖೇಶ್ ಚಂದ್ರಶೇಖರ್ ಬರೆದಿರುವ ಪತ್ರ ಇದೀಗ ಸಂಚಲನ ಮೂಡಿಸಿದೆ. ಈ ಪತ್ರದಲ್ಲಿ ಸುಕೇಶ್ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರನ್ನು ಗುರಿಯಾಗಿಸಿಕೊಂಡು ಸುಕೇಶ್ ಜೈಲಿನಿಂದ ಈ ಪತ್ರ ಬರೆದಿದ್ದಾರೆ.

ಕೇಜ್ರಿವಾಲ್ ನಾಟಕ, ಭ್ರಷ್ಟಾಚಾರ, ಸುಳ್ಳುಗಳನ್ನು ಬಯಲಿಗೆಳೆಯುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ. ಕೇಜ್ರಿವಾಲ್ ಅವರೊಂದಿಗಿನ ವಾಟ್ಸಾಪ್ ಮತ್ತು ಟೆಲಿಗ್ರಾಮ್ ಚಾಟ್‌ಗಳ 700 ಪುಟಗಳ ಭಾಗವನ್ನು ಸುಖೇಶ್ ಬಹಿರಂಗಪಡಿಸಿದ್ದಾರೆ. ಕೇಜ್ರಿವಾಲ್ ಪರವಾಗಿ ಹೈದರಾಬಾದ್‌ನಲ್ಲಿರುವ ಬಿಆರ್‌ಎಸ್ (ಅಂದಿನ ಟಿಆರ್‌ಎಸ್) ಕಚೇರಿಯಲ್ಲಿ 15 ಕೋಟಿ ರೂ. ಕೊಟ್ಟಿರುವುದಾಗಿ ತಿಳಿಸಿದ್ದಾರೆ. ಹಣ ಪಡೆದ ವ್ಯಕ್ತಿ ತಾನು ದೆಹಲಿ ಮದ್ಯ ಹಗರಣದ ಆರೋಪಿ ಎಂದು ಹೇಳಿಕೊಂಡಿದ್ದಾನೆ. ಬಿಆರ್ಎಸ್ ಗೆ ಕಂತುಗಳಲ್ಲಿ 75 ಕೋಟಿ ರೂ.ಗಳನ್ನು ನೀಡಿರುವುದಾಗಿ ಪತ್ರದಲ್ಲಿ ಬಹಿರಂಗವಾಗಿದೆ.

ಚಾಟಿಂಗ್‌ನಲ್ಲಿ ಕೋಡ್ ವರ್ಡ್‌ಗಳ ಮೂಲಕ ನಗದು ವ್ಯವಹಾರ ಮತ್ತು ಹಣ ರವಾನೆ ಮಾಡಲಾಗುತ್ತಿತ್ತು ಎಂದು ಹೇಳಿದ್ದಾರೆ. 15 ಕೆ.ಜಿ ತುಪ್ಪದ ಹೆಸರಿನಲ್ಲಿ 15 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಲಾಗಿದೆ. ಬಿಆರ್‌ಎಸ್ ಪಕ್ಷದ ಕಚೇರಿ ಬಳಿ ನಿಲ್ಲಿಸಿರುವ ರೇಂಜ್ ರೋವರ್ ಕಾರು ಸಂಖ್ಯೆ 6060 ರಲ್ಲಿ ಎಪಿ ಎಂಬ ಶಾರ್ಟ್‌ ಹೆಸರಿನ ವ್ಯಕ್ತಿಗೆ 15 ಕೋಟಿ ರೂಪಾಯಿ ನೀಡುವಂತೆ ಕೇಜ್ರಿವಾಲ್ ಸೂಚಿಸಿದ್ದಾರೆ ಎಂದು ಸುಖೇಶ್ ಚಂದ್ರಶೇಖರ್ ಹೇಳಿದ್ದಾರೆ.

ಬಿಆರ್ ಎಸ್ ಕಚೇರಿಯಲ್ಲಿ ತಲಾ ರೂ.15 ಕೋಟಿಯಂತೆ ಐದು ಕಂತುಗಳಲ್ಲಿ ರೂ.75 ಕೋಟಿ ನೀಡಿದ್ದೇನೆ ಎಂದರು. 2020 ರಲ್ಲಿ, ಅವರು ಬಿಆರ್ಎಸ್ ಕಚೇರಿಗೆ ಹಣವನ್ನು ನೀಡಿರುವುದಾಗಿ ಬಹಿರಂಗಪಡಿಸಿದರು. ಇದು ಭ್ರಷ್ಟಾಚಾರ ಮತ್ತು ಅಕ್ರಮಗಳ ಟೀಸರ್ ಮಾತ್ರ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಶೀಘ್ರದಲ್ಲೇ ಇನ್ನಷ್ಟು ಅಕ್ರಮಗಳನ್ನು ಬಹಿರಂಗಪಡಿಸುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ. ಈ ನಡುವೆ ಈ ಪತ್ರ ಇದೀಗ ತೆಲಂಗಾಣ ರಾಜಕೀಯದಲ್ಲೂ ಸಂಚಲನ ಮೂಡಿಸಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಚಂದ್ರಶೇಖರ್ ಸದ್ಯ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!