ದಿನಭವಿಷ್ಯ | ಕೆಲಸ ಮಾಡುವ ಜಾಗದಲ್ಲಿ ಖಾಸಗಿ ಸಮಸ್ಯೆ ಬದಿಗಿಟ್ಟು ವ್ಯವಹರಿಸುವುದು ಒಳಿತು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಆರ್ಥಿಕ ಪರಿಸ್ಥಿತಿ ತೃಪ್ತಿದಾಯಕ. ಆದರೆ ದುಂದುವೆಚ್ಚಕ್ಕೆ ಕೈ ಹಾಕದಿರಿ. ಸಣ್ಣ ವಾಗ್ವಾದವೊಂದು ದಿನವಿಡೀ ಅಶಾಂತಿಗೆ ಕಾರಣವಾದೀತು.

ವೃಷಭ
ಮಾನಸಿಕ ತುಮುಲ ನಿಮ್ಮ ಕೆಲಸದ ಮೇಲೂ ಪರಿಣಾಮ ಬೀರಬಹುದು. ಮೊದಲಿಗೆ ಮನಶ್ಯಾಂತಿ ಪಡೆಯಲು ಯತ್ನಿಸಿ. ಕೌಟುಂಬಿಕ ವಾಗ್ವಾದ.

ಮಿಥುನ
ವೃತ್ತಿಯಲ್ಲಿ ಹೆಚ್ಚುವರಿ ಹೊಣೆಗಾರಿಕೆ. ಅದನ್ನು ಸರಿಯಾಗಿ ನಿಭಾಯಿಸಿ. ಇಲ್ಲವಾದರೆ ಹಿನ್ನಡೆ ಅನುಭವಿಸುವಿರಿ. ಸಂಗಾತಿ ಜತೆಗೆ ಮಾತಿನ ಚಕಮಕಿ ಸಂಭವ.

ಕಟಕ
ನಿಮ್ಮ ಅಭಿಪ್ರಾಯ ಮುಕ್ತವಾಗಿ ವ್ಯಕ್ತಪಡಿಸುವ ಅವಕಾಶ ಸಿಗುವುದು. ಅದನ್ನು ನಿರರ್ಥಕ ಮಾಡಬೇಡಿ. ಗೊಂದಲ ನಿವಾರಣೆಗೆ ಪ್ರಾಮುಖ್ಯತೆ ಕೊಡಿ.

ಸಿಂಹ
ವ್ಯಕ್ತಿಯೊಬ್ಬರ ಕುರಿತಂತೆ ಆಕರ್ಷಣೆ ಬೆಳೆಸಿಕೊಳ್ಳುವಿರಿ. ಅದರಿಂದ ಭಾವನೆಗಳ ತುಮುಲ. ಇದರ ಮಧ್ಯೆ ಕರ್ತವ್ಯವನ್ನು ಮರೆಯಬೇಡಿ.

ಕನ್ಯಾ
ಖಾಸಗಿ ಬದುಕಲ್ಲಿ ಏರುಪೇರು ಅನುಭವಿಸುವಿರಿ. ಹಲವಾರು ವಿಚಾರಗಳು ನಿಮಗೆ ಪ್ರತಿಕೂಲ ಆಗಬಹುದು. ನಿಭಾಯಿಸಲು ಕಷ್ಟ.

ತುಲಾ
ವೃತ್ತಿ ಕ್ಷೇತ್ರದಲ್ಲಿ ಹಿತಕರ ವಾತಾವರಣ. ಎಲ್ಲರ ಜತೆ ಸೌಹಾರ್ದ. ವೃತ್ತಿಯಲ್ಲಿ ಸಂತೃಪ್ತಿ. ಆರ್ಥಿಕ ಸ್ಥಿತಿ ಉತ್ತಮ. ಆಪ್ತರ ಜತೆ ಉತ್ತಮ ಕಾಲಕ್ಷೇಪ.

ವೃಶ್ಚಿಕ
ವೃತ್ತಿಯಲ್ಲಿ ಮತ್ತು ವೈಯಕ್ತಿಕ ಬದುಕಿನಲ್ಲಿ ಪೂರಕ ಬೆಳವಣಿಗೆ. ಪ್ರೀತಿಯ ವಿಚಾರದಲ್ಲಿ ಯಶಸ್ಸು ಸಾಧಿಸುವಿರಿ. ಕಹಿ ಭಾವನೆ ನಿವಾರಣೆ. ನಿರಾಳತೆ.

ಧನು
ಸವಾಲಿನ ದಿನ. ಮಾನಸಿಕ ಒತ್ತಡ ಹೆಚ್ಚಿಸುವ ಪರಿಸ್ಥಿತಿ ಎದುರಿಸುವಿರಿ. ಆತ್ಮೀಯರಿಂದ ಸಂವೇದನಾರಾಹಿತ್ಯ. ಅದರಿಂದ ನೋವು.

ಮಕರ
ನಿಮ್ಮ ನಿರ್ವಹಣೆಯಿಂದ ಇತರರ ಮೆಚ್ಚುಗೆ ಗಳಿಸುವಿರಿ. ಆರೋಗ್ಯ ಸಮಸ್ಯೆ ಪರಿಹಾರ. ಸಾಲ ಪಡೆಯುವ ಕಾರ್ಯಕ್ಕೆ ಹೋಗದಿರಿ. ಅದು ಪ್ರತಿಕೂಲವಾದೀತು.

ಕುಂಭ
ಗೊಂದಲದ ಮನಸ್ಥಿತಿ. ಕೆಲಸದ ಕ್ಷೇತ್ರದಲ್ಲಿ ಖಾಸಗಿ ಸಮಸ್ಯೆ ಬದಿಗಿಟ್ಟು ವ್ಯವಹರಿಸಿ. ಹಣದ ವಿಷಯ ತುಸು ಚಿಂತೆಗೆ ಕಾರಣವಾದೀತು.

ಮೀನ
ಮನೆಯಲ್ಲಿ ಅಹಂಭಾವ ತ್ಯಜಿಸಿ ವರ್ತಿಸಿರಿ. ನಿಮ್ಮದೇ ಮಾತು ನಡೆಯಬೇಕೆಂಬ ಹಠ ಬೇಡ. ಇಲ್ಲವಾದರೆ ಅದರಿಂದ ಭಿನ್ನಮತ ಉಂಟಾದೀತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!