ದಿನಭವಿಷ್ಯ| ಸಂವಹನದ ಕೊರತೆಯಿಂದ ಆಪ್ತರಲ್ಲೇ ಜಗಳ ಉಂಟಾದೀತು‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮೇಷ
ನಿಮಗಿಂದು ಫಲಪ್ರದ ದಿನ. ಉದ್ದೇಶಿಸಿದ ಕಾರ್ಯ ಈಡೇರುವುದು. ಆರ್ಥಿಕ ಪ್ರಗತಿ. ಆಹಾರ ಸೇವನೆಯಲ್ಲಿ ಹಿತಮಿತ ನೋಡಿಕೊಳ್ಳಿ.

ವೃಷಭ
ಕೌಟುಂಬಿಕ ವಿಚಾರಗಳಿಗೆ ಇಂದು ಹೆಚ್ಚು ಪ್ರಾಮುಖ್ಯತೆ ಕೊಡಬೇಕಾಗುವುದು. ಮಾತಿನ ಚಕಮಕಿ ಉಂಟಾದೀತು. ತಾಳ್ಮೆ ಕಳಕೊಳ್ಳದಿರಿ.

ಮಿಥುನ
ಕೆಲಸ ಫಲಪ್ರದವಾಗಲು ಹೆಚ್ಚು ಶ್ರಮ ಪಡಬೇಕು. ಸ್ವಲ್ಪ ಧನವ್ಯಯ ಸಂಭವಿಸಬಹುದು. ಹಣದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಕೌಟುಂಬಿಕ ಒತ್ತಡ.

ಕಟಕ
ಕೌಟುಂಬಿಕ ವಿಚಾರದಲ್ಲಿ ಅಸಮಾಧಾನ ಉಂಟಾಗುವುದು. ಕೆಲವರ ವರ್ತನೆ ಅಸಹನೀಯ ಎನಿಸುವುದು. ಹೊಂದಾಣಿಕೆ ಮುಖ್ಯ.

ಸಿಂಹ
ಸಂವಹನದ ಕೊರತೆಯಿಂದ ಆಪ್ತರಲ್ಲೇ ಜಗಳ ಉಂಟಾದೀತು. ತಿಳಿದು ವ್ಯವಹರಿಸುವುದು ಮುಖ್ಯ. ಖರ್ಚು ಹೆಚ್ಚುವುದು.

ಕನ್ಯಾ
ಖಾಸಗಿ ವ್ಯವಹಾರದಲ್ಲಿ ಹೆಚ್ಚು ಹೊಣೆಗಾರಿಕೆ. ಕೆಲವರಿಂದ ಅಪೇಕ್ಷಿತ ಸಹಕಾರ ದೊರೆಯುವುದಿಲ್ಲ. ಪ್ರೀತಿಯ ವಿಷಯದಲ್ಲಿ ಮುಖ್ಯ ಬೆಳವಣಿಗೆ.

ತುಲಾ
ನಿಮಗೆ ಒಳಿತು ತರುವ ದಿನ. ವೃತ್ತಿಯಲ್ಲಾಗಲಿ, ಖಾಸಗಿ ಬದುಕಲ್ಲಾಗಲಿ ನಿಮಗೆ ಅನುಕೂಲ ಬೆಳವಣಿಗೆ. ಮುನಿಸಿಕೊಂಡವರು ಹತ್ತಿರವಾಗುವರು.

ವೃಶ್ಚಿಕ
ನಿಮ್ಮ ಬಿಗುಮಾನ, ಅಹಂಕಾರಿ ವರ್ತನೆ ಆತ್ಮೀಯ ಸಂಬಂಧ ಹಾಳು ಮಾಡಬಹುದು. ವಿನಯವಂತಿಕೆ ಬೆಳೆಸಿಕೊಳ್ಳಿ. ಆರ್ಥಿಕ ಒತ್ತಡ, ಬಿಕ್ಕಟ್ಟು.

ಧನು
ವೈಯಕ್ತಿಕ ಮತ್ತು ಕೌಟುಂಬಿಕ ಬದುಕಿನಲ್ಲಿ ನಿಮಗೆ ಪೂರಕವಾದ ಬೆಳವಣಿಗೆ. ಆತ್ಮೀಯರಿಂದ ನಿಮ್ಮ ಕಾರ್ಯಕ್ಕೆ ಸಹಕಾರ. ಕಾರ್ಯ ಸಾಫಲ್ಯ .

ಮಕರ
ನಿಮ್ಮ ಕೆಲಸದಲ್ಲಿ ಅಡ್ಡಿ, ತಪ್ಪು ಸಂಭವಿಸಬಹುದು. ಎಚ್ಚರದಿಂದ ಕಾರ್ಯ ನಿರ್ವಹಿಸಿ. ಕೌಟುಂಬಿಕ ಅಶಾಂತಿ. ಕೆಲವು ವಿಷಯ ಬೇಸರ ಹುಟ್ಟಿಸುತ್ತದೆ.

ಕುಂಭ
ಹೊಸ ವ್ಯವಹಾರ ಅಥವಾ ಉದ್ಯೋಗ ಆರಂಭಿಸಲು ಸಮಯ ಸೂಕ್ತವಾಗಿದೆ. ಯಶಸ್ಸು ಲಭಿಸುವುದು. ವಿರೋಧಿಗಳ ಕುರಿತಂತೆ ಎಚ್ಚರದಿಂದಿರಿ.

ಮೀನ
ಕೌಟುಂಬಿಕ ವಿಷಯಗಳು ಇಂದು ಆದ್ಯತೆ ಪಡೆಯುತ್ತವೆ. ಕೆಲವಾರು ವ್ಯವಹಾರ ಪೂರ್ಣಗೊಳಿಸಲು ಆದ್ಯತೆ ಕೊಡಿ. ಬಾಕಿ ಉಳಿಸಬೇಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!