ದಿನಭವಿಷ್ಯ | ಈ ರಾಶಿಯವರಿಗಿಂದು ಶುಭದಿನ, ಹಣಕಾಸಿನ ಸಮಸ್ಯೆಗಳು ಪರಿಹಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಮೇಷ
ಕೌಟುಂಬಿಕ ಪರಿಸರದಲ್ಲಿ ಹೆಚ್ಚು ಸಂತೋಷ ಕಾಣುವಿರಿ. ಬಂಧುಗಳ ಸಹಕಾರ. ಖರ್ಚು ತುಸು ಹೆಚ್ಚಳ. ಆದರೆ ಅದು ಅನಿವಾರ್ಯ ಖರ್ಚುಗಳು.

ವೃಷಭ
ನಿಮ್ಮ ವ್ಯವಹಾರದಲ್ಲಿ ಹೆಚ್ಚು ಪ್ರಯತ್ನ ಪಟ್ಟರಷ್ಟೇ ನಿಮಗೆ ಯಶಸ್ಸು.  ಹೇಗಾದರೂ ನಡೆದೀತು ಎಂಬ ಧೋರಣೆ ಬಿಟ್ಟುಬಿಡಿ. ಸಾಂಸಾರಿಕ ಅಸಹಕಾರ.

ಮಿಥುನ
ನಿಮ್ಮ ಕೆಲಸಕ್ಕೆ ಬಯಸಿದಷ್ಟೇ ಫಲ ದೊರಕದು. ತುಸು ನಿರಾಶೆ ಅನುಭವಿಸುವುದು ಅನಿವಾರ್ಯ. ಆದರೆ ಆಶಾವಾದ ಬಿಡದಿರಿ.

ಕಟಕ
ಬೆಳಗಿನ ಅವಧಿಯಲ್ಲಿ ಕೆಲವು ಸಮಸ್ಯೆ ಎದುರಿಸುವಿರಿ. ಅದನ್ನು ನಿಭಾಯಿಸುವುದರಲ್ಲೆ ಸಮಯ ವ್ಯಯ. ಅಪರಾಹ್ನ ಎಲ್ಲವೂ ಸುಸೂತ್ರವಾಗುವುದು.

ಸಿಂಹ
ಫಲಪ್ರದ ದಿನ. ಕಾರ್ಯವೊಂದು ನಿರೀಕ್ಷಿತ ಫಲಿತಾಂಶ ನೀಡಲಿದೆ. ಇದರಿಂದ ಚಿಂತೆ ನಿವಾರಣೆ. ಆರ್ಥಿಕ ಸಮಸ್ಯೆಯು ಪರಿಹಾರ.

ಕನ್ಯಾ
ಮನೆಯಲ್ಲಿ ಸಂಭ್ರಮದ ವಾತಾವರಣ. ಕೆಲವು ಸಮಸ್ಯೆ ಕಾಡಿದರೂ ಇಂದು ಅದು ನಗಣ್ಯವೆನಿಸುವುದು. ಅದರ ಪರಿಹಾರಕ್ಕೆ ಬೇರೆ ದಿನವಿದೆ.

ತುಲಾ
ಆಪ್ತರ ವಲಯದಲ್ಲಿ ಹೆಚ್ಚು ಸಮಯ ಕಳೆಯುವ ಅವಕಾಶ. ಬಂಧುಮಿತ್ರರ ಭೇಟಿ. ಉದ್ಯೋಗದಲ್ಲಿ ಕೆಲವರು ನಿಮ್ಮ ಕುರಿತು ಈರ್ಷ್ಯೆ ಪಡುವರು.

ವೃಶ್ಚಿಕ
ಇಂದು ಎಲ್ಲದರಲ್ಲೂ ಹೊಂದಾಣಿಕೆಯಿಂದ ವರ್ತಿಸಿ. ನಿಮ್ಮದೇ ನಿಲುವಿಗೆ ಪಟ್ಟು ಹಿಡಿಯದಿರಿ. ಇಲ್ಲವಾದರೆ ವಾಗ್ವಾದ ಉಂಟಾದೀತು.

ಧನು
ಕಾರ್ಯಗಳಲ್ಲಿ ಯಶಸ್ಸು. ವೃತ್ತಿಯಲ್ಲಿನ ಒತ್ತಡ ನಿವಾರಣೆ. ಕೌಟುಂಬಿಕ ಪರಿಸರ ಸಮಾಧಾನಕರ. ಸಂಬಂಧಗಳಲ್ಲಿನ ಭಿನ್ನಮತ ನಿವಾರಣೆ.

ಮಕರ
ಮನಸ್ಸಿನಲ್ಲಿ ಏನೋ ಖಾಲಿತನ. ಎಲ್ಲವೂ ಇದ್ದರೂ  ಏನೋ ಇಲ್ಲದ ಕೊರಗು. ಕೌಟುಂಬಿಕ ಅಸಮಾಧಾನ. ಧಾರ್ಮಿಕತೆಯತ್ತ ಮನಸ್ಸು ವಾಲಬಹುದು.

ಕುಂಭ
ಕೆಲವರ ಅಸಮಾಧಾನ ತಣಿಸುವುದು ನಿಮಗಿಂದು ಕಷ್ಟವಾಗಲಿದೆ. ಅವರ ಅಸಹಕಾರ ಎದುರಿಸುವಿರಿ. ಆ ಬಗ್ಗೆ ಚಿಂತೆ ಮಾಡದಿರಿ.

ಮೀನ
ಎಲ್ಲದಕ್ಕೂ ಇತರರನ್ನು ಅವಲಂಬಿಸದಿರಿ. ಅವರ ಸಲಹೆ ಕೇಳಿ ತಪ್ಪು ನಿರ್ಧಾರ ತಾಳಬೇಡಿ. ಕೆಲವು ವಿಚಾರಗಳಲ್ಲಿ ನೀವೇ ಸ್ವಂತ ನಿರ್ಧಾರ ತಾಳಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!