ದಿನಭವಿಷ್ಯ | ಗ್ರಹಗತಿಗಳು ನಿಮಗೆ ಪೂರಕವಾಗಿವೆ: ಮನೆಯಲ್ಲಿ ಶಾಂತಿ, ನಿಶ್ಚಯಿಸಿದ ಕಾರ್ಯಸಿದ್ಧಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇಷ

ಕೆಲದಿನಗಳ ಒತ್ತಡವು ನಿಮ್ಮ ತಾಳ್ಮೆ ಕೆಡಿಸುತ್ತದೆ. ಎಲ್ಲರ ಮೇಲೆ ರೇಗುವ ಸಾಧ್ಯತೆಯಿದೆ. ಮಾತು ವಿಕೋಪಕ್ಕೆ ಹೋಗದಂತೆ ನೋಡಿಕೊಳ್ಳಿ. ಹಣದ  ಕೊರತೆ ಕಾಡುವುದು.

ವೃಷಭ
ಇತರರ ಭಾವನೆ ಅರ್ಥೈಸಿಕೊಂಡು ವ್ಯವಹರಿಸಿ. ಸಣ್ಣ ವಿಷಯಕ್ಕೂ ವಾದ ಮಾಡಲು ಹೋಗಬೇಡಿ. ಮನಶ್ಯಾಂತಿ ಕಾಯಲು ಇದು ಅವಶ್ಯ.

ಮಿಥುನ
ಮಾನಸಿಕ ದೃಢತೆ ಕಾಪಾಡಲು ಆದ್ಯತೆ ಕೊಡಿ. ಭಾವಾವೇಶಕ್ಕೆ ಒಳಗಾಗಿ ನೆಮ್ಮದಿ ಕಳಕೊಳ್ಳದಿರಿ. ಕೋಪತಾಪ ನಿಯಂತ್ರಿಸಿರಿ.

ಕಟಕ
ವೃತ್ತಿ ಮತ್ತು ಖಾಸಗಿ ಬದುಕು ಎರಡರಲ್ಲೂ ನಿಮಗಿಂದು ಪೂರಕ ಬೆಳವಣಿಗೆ ಸಂಭವಿಸಲಿದೆ. ಬಹುಕಾಲದ ಉದ್ದೇಶ ಈಡೇರುವುದು.

ಸಿಂಹ
ಯಾವುದೇ ಕೆಲಸ ಸಮಯಕ್ಕೆ ಸರಿಯಾಗಿ ಮಾಡಿ ಮುಗಿಸಿ. ಇಲ್ಲವಾದರೆ ತಾಪತ್ರಯ ಎದುರಿಸುವಿರಿ. ಜಡತ್ವ ತೊಡೆಯುವುದು ಅತ್ಯವಶ್ಯ.

ಕನ್ಯಾ
ಕೌಟುಂಬಿಕ ಭಿನ್ನಮತ. ಇತರರ ಮೇಲೆಯೆ ಆರೋಪ ಹೊರಿಸುವುದು ಬಿಟ್ಟುಬಿಡಿ. ನಿಮ್ಮ ತಪ್ಪನ್ನೂ ಒಪ್ಪಿಕೊಂಡು ತಿದ್ದಿಕೊಳ್ಳಿ.

ತುಲಾ
ದೈಹಿಕ ನೋವು, ಅನುಭವಿಸುವಿರಿ. ಉದ್ಯಮಿಗಳಿಗೆ ವ್ಯವಹಾರ ವಿಸ್ತರಿಸಲು ಸೂಕ್ತ ಅವಕಾಶ ಸಿಗಲಿದೆ.  ಹಣದ ಮುಗ್ಗಟ್ಟು ನಿವಾರಣೆ.

ವೃಶ್ಚಿಕ
ಕುಟುಂಬ ಸದಸ್ಯರ ಜತೆ ಹೊಂದಾಣಿಕೆಯಿಂದ ವರ್ತಿಸಿರಿ. ಇಲ್ಲವಾದರೆ ಮನಸ್ತಾಪ ಉಂಟಾದೀತು. ಇತರರಲ್ಲಿ ತಪ್ಪು ಹುಡುಕಲು ಹೋಗಬೇಡಿ.

ಧನು
ಆಪ್ತ ಬಂಧುಗಳ ಜತೆ ಭಿನ್ನಾಭಿಪ್ರಾಯ ಉಂಟಾದೀತು. ಅದನ್ನು ವಿಕೋಪಕ್ಕೆ ಕೊಂಡೊಯ್ಯದಿರಿ. ತಾಳ್ಮೆಯಿಂದ ವರ್ತಿಸಿ. ಆರ್ಥಿಕ ಉನ್ನತಿ.

ಮಕರ
ವೃತ್ತಿಯಲ್ಲಿ ನಿಮ್ಮ ಗುರಿ ಸಾಧನೆ. ಸ್ಪರ್ಧೆಯನ್ನು ಎದುರಿಸಿ ಗೆಲ್ಲುವಿರಿ. ಕುಟುಂಬ ಸದಸ್ಯರ ಸಹಕಾರ. ಆರೋಗ್ಯ ಸಮಸ್ಯೆ ನಿವಾರಣೆ ಕಾಣುವುದು.

ಕುಂಭ
ಗ್ರಹಗತಿಗಳು ನಿಮಗೆ ಪೂರಕವಾಗಿವೆ. ಮನೆಯಲ್ಲಿ ಶಾಂತಿ. ಕಾರ್ಯಸಿದ್ಧಿ. ಮೇಲಧಿಕಾರಿಗಳಿಂದ ಮೆಚ್ಚುಗೆ. ಹಳೆಯ ಸ್ನೇಹಿತರ ಭೇಟಿ.

ಮೀನ
ಬದಲಾವಣೆ ಅನಿವಾರ್ಯ. ಅದಕ್ಕೆ ಹೊಂದಿಕೊಳ್ಳಲು ಕಲಿಯಿರಿ. ಆ ಕುರಿತು ಗೊಣಗುತ್ತಾ ಕೂರದಿರಿ. ಸ್ನೇಹಿತರ ಸಹಕಾರ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!