ದಿನ ಭವಿಷ್ಯ| ನೀವು ಕಾಯುತ್ತಿದ್ದ ಶುಭ ಸುದ್ದಿ ಇಂದು ದೊರಕಬಹುದು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಮೇಷ
ಪ್ರೀತಿಪಾತ್ರರೊಂದಿಗೆ ಹೆಚ್ಚು ಕಾಲ ಕಳೆಯುವ ಅವಕಾಶ. ಅವರ ಬೇಕು ಬೇಡಗಳನ್ನು ಪೂರೈಸ ಬೇಕಾಗುವುದು. ಸಣ್ಣಪುಟ್ಟ ಭೇದ ಮರೆತುಬಿಡಬೇಕು.

ವೃಷಭ
ಇತರರ  ನೋವಿನಲ್ಲಿ ನೀವು ಭಾಗಿಯಾಗು ವಿರಿ. ಅವರ ಸಮಸ್ಯೆ ಪರಿಹಾರಕ್ಕೆ  ಯತ್ನಿಸುವಿರಿ. ಇದರಿಂದ ನಿಮ್ಮ ಸಂತೋಷ ನಷ್ಟ.

ಮಿಥುನ
ಧಾರ್ಮಿಕ ವಿಚಾರದಲ್ಲಿ ಹೆಚ್ಚು ಆಸಕ್ತಿ ಉಂಟಾಗ ಲಿದೆ. ಸಮಸ್ಯೆಗಳ ಪರಿಹಾರಕ್ಕೆ ದೇವರ ಕೃಪೆ ಕೋರುವಿರಿ. ನಿಮ್ಮ ಪ್ರಯತ್ನವೂ ಇರಲಿ. ಸಹನೆಯಿರಲಿ.

ಕಟಕ
ನಿಮ್ಮ ಕುಟುಂಬದತ್ತ ಹೆಚ್ಚು ಗಮನ ಹರಿಸಬೇಕು. ಕೆಲಸದ ಒತ್ತಡದಲ್ಲಿ ಕುಟುಂಬ ಕಡೆಗಣಿಸಬೇಡಿ. ಸಂಬಂಧ ಕಾಯ್ದು ಕೊಳ್ಳುವುದು ಮುಖ್ಯ.

ಸಿಂಹ
ಆಪ್ತರೊಂದಿಗೆ ಇಂದು ಕಾಲಕಳೆಯುವಿರಿ. ಅದುವೇ ಸಂತೋಷಕ್ಕೆ ದಾರಿ. ಅವರ ಅವಶ್ಯಕತೆ ಪೂರೈಸಲು ಆದ್ಯತೆ ಕೊಡಿ. ಖರ್ಚು ಹೆಚ್ಚಾಗಬಹುದು.

ಕನ್ಯಾ
ಇತರರ ಜತೆ ಸೂಕ್ತ ಸಂವಹನ ಸಾಧಿಸುವಲ್ಲಿ ನೀವು ನಿಪುಣರು. ಅದನ್ನಿಂದು ಕಾರ್ಯಗತ ಗೊಳಿಸಬೇಕು. ಅದರಿಂದ ಫಲ ಪ್ರಾಪ್ತಿ.

ತುಲಾ
ಗುರಿ ದೊಡ್ಡದಾಗಿದ್ದರೂ ಸಣ್ಣ ಸಣ್ಣ ವಿಷಯ ಗಳನ್ನು ಮರೆಯದಿರಿ. ಇಲ್ಲವಾದರೆ ಈ ಸಣ್ಣ ವಿಷಯಗಳೇ ಹೆಚ್ಚು ಸಮಸ್ಯೆ ತರುತ್ತವೆ.ಇದನ್ನು ಅರಿತುಕೊಳ್ಳಿ.

ವೃಶ್ಚಿಕ
ವೃತ್ತಿಯಲ್ಲಿ ಇಂದು ಹಿನ್ನಡೆ ಅನುಭವಿಸುವಿರಿ. ಇದರಿಂದ ಮಾನಸಿಕ ಶಾಂತಿ ಕದಡಲಿದೆ.  ಇತರರ ಏಳಿಗೆಗೆ ಕರುಬುವಿರಿ.

ಧನು
ಇಂದಿನ ದಿನ ನಿಮಗೆ ಪೂರಕವಾಗಿದೆ. ನಿಮಗೆ ಅನ್ಯಾಯ ಆಗುತ್ತಿರುವುದರ ವಿರುದ್ಧ ಪ್ರತಿಭಟಿಸಿ. ಅಂತಿಮವಾಗಿ ಒಳ್ಳೆ ಫಲ ಸಿಗುವುದು.

ಮಕರ
ಶುಭ ಸುದ್ದಿಗೆ ಕಾಯುತ್ತಿದ್ದೀರಿ. ಅದು ಇಂದು ದೊರಕಬಹುದು.  ಉದ್ಯೋಗದಲ್ಲಿ ಪ್ರಗತಿ. ಸಂಬಂಧದಲ್ಲಿ ಸುಧಾರಣೆ.

ಕುಂಭ
ದೊಡ್ಡ ಯೋಜನೆ ಹಾಕಲು ಹೋಗದಿರಿ. ಕಾಲ ಅದಕ್ಕೆ ಪಕ್ವ ವಾಗಿಲ್ಲ. ಅಡ್ಡಿಗಳು ಒದಗುತ್ತವೆ. ಇರುವು ದರಲ್ಲೇ ಸಂತೋಷ ಪಡುವುದು ಉತ್ತಮ.

ಮೀನ
ಕಾರ್ಯಗತ ಆಗಬಲ್ಲ ಗುರಿಗಳನ್ನು ಮಾತ್ರ ಇರಿಸಿಕೊಳ್ಳಿ.  ಇಲ್ಲವಾದರೆ ನಿಮಗೆ ಘೋರ ನಿರಾಶೆ ಕಾದಿದೆ. ಕೌಟುಂಬಿಕ ಸಹಕಾರ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!