ದಿನ ಭವಿಷ್ಯ | ವೃಷಭ ರಾಶಿಯವರಿಗೆ ವೃತ್ತಿ ಕ್ಷೇತ್ರದಲ್ಲಿ ಸಂಘರ್ಷ, ಮಕರ ರಾಶಿಗೆ ಹಣಕಾಸು ಸಮಸ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಮೇಷ:

ಇತರರನ್ನು ಬದಲಿಸಲು ಹೋಗದಿರಿ.ಅದು ನಿಮ್ಮಿಂದಾಗದ ಕೆಲಸ. ಅವರ ಅಸಹನೀಯ ವರ್ತನೆ ತಾಳಿಕೊಳ್ಳಲು ಕಲಿಯಿರಿ. ವಾದವಿವಾದ ತಪ್ಪಿಸಿರಿ.

ವೃಷಭ:
ವೃತ್ತಿ ಕ್ಷೇತ್ರದಲ್ಲಿ ಸಂಘರ್ಷ ಎದುರಿಸುವಿರಿ.ಸಮಸ್ಯೆಗೆ ನಿಮ್ಮ ಪರಿಹಾರ ಸೂತ್ರ ಎಲ್ಲರಿಗೆ ಇಷ್ಟವಾಗದು.ಇದರಿಂದ ದೃತಿಗೆಡದಿರಿ.ಆರ್ಥಿಕ ಉನ್ನತಿ.

ಮಿಥುನ:
ಅನಪೇಕ್ಷಿತ ಬೆಳವಣಿಗೆ ಸಂಭವಿಸಬಹುದು. ಅದು ತಾನಾಗಿ ನಿವಾರಣೆ ಆಗಲು ಕಾಯಿರಿ. ದುಡುಕಿನ ನಿರ್ಧಾರ ತಾಳಲು ಹೋಗಬೇಡಿ.

ಕಟಕ:
ವೃತ್ತಿಯಲ್ಲಿ ಮೇಲುಗೈ ಪಡೆಯಲು ಇತರರ ಜತೆ ಪೈಪೋಟಿ ನಡೆಸುವಿರಿ .ಕೆಲವರು ನಿಮ್ಮನ್ನು ತುಳಿಯಲು ಅಡ್ಡದಾರಿ ಹಿಡಿಯಬಹುದು. ಈ ಬಗ್ಗೆ ಎಚ್ಚರದಿಂದಿರಿ.

ಸಿಂಹ:
ದೈಹಿಕ ಆರೋಗ್ಯದ ಜತೆಗೇ ಭಾವನಾತ್ಮಕ ಸಮತೋಲನ ಇಟ್ಟುಕೊಳ್ಳಿ. ಸಣ್ಣ ವಿಷಯಕ್ಕೂ ಭಾವುಕರಾಗಿ ವರ್ತಿಸದಿರಿ.

ಕನ್ಯಾ:
ಮನೆಯಲ್ಲಿನ ಅನಾರೋಗ್ಯ ಮನಸ್ಸಿನ ನೆಮ್ಮದಿ ಕೆಡಿಸೀತು. ಆದಾಯ ಮತ್ತು ಖರ್ಚಿನ ಮಧ್ಯೆ ಸಮತೋಲನವಿರಲಿ. ಖರ್ಚು ನಿಯಂತ್ರಿಸಿ.

ತುಲಾ:
ಕೆರಿಯರ್‌ನಲ್ಲಿ ಉನ್ನತಿ ಸಾಧಿಸುವ ಬಯಕೆ ನಿಮ್ಮದು. ಆದರೆ ಇತರರಿಂದ ಪ್ರತ್ಯೇಕವಾಗಿ ನಿಲ್ಲದಿರಿ. ಎಲ್ಲರ ಜತೆ ಹೊಂದಿಕೊಂಡು ಕಾರ್ಯಾಚರಿಸಿ.

ವೃಶ್ಚಿಕ:
ನಿಮ್ಮ ಒಳ್ಳೆಯತನವನ್ನು ಕೆಲವರು ದುರುಪಯೋಗ ಮಾಡುತ್ತಾರೆ. ಅದಕ್ಕೆ ಆಸ್ಪದ ಕೊಡದಿರಿ. ಹಿರಿಯರ ಜತೆ ತುಸು ಸಮಯ ಕಳೆಯಿರಿ.

ಧನು:
ಮನೆಯಲ್ಲಿ ಸಣ್ಣಪುಟ್ಟ ಜಗಳಕ್ಕೆ ಅವಕಾಶ ಕೊಡಬೇಡಿ. ವಾದದ ವೇಳೆ ನೀವು ಶಾಂತಿ ಕಾಯ್ದುಕೊಳ್ಳಿ. ಕಷ್ಟಗಳು ನಿಮ್ಮ ಧೃತಿ ಕೆಡಿಸದಂತೆ ನೋಡಿಕೊಳ್ಳಿ.

ಮಕರ:
ಹಣದ ಕೊರತೆ ಕಾಡಬಹುದು. ಆಪ್ತರು ನೆರವಿಗೆ ಬರಲಾರರು. ಸಂಗಾತಿ ಜತೆಗೆ ಭಿನ್ನಮತ ಮೂಡಿದರೂ ಅದು ತಾತ್ಕಾಲಿಕ. ವೃತ್ತಿಯಲ್ಲಿ ಹೆಚ್ಚು  ಒತ್ತಡ.

ಕುಂಭ:
ವೃತ್ತಿಯಲ್ಲಿ ಕೆಲವು ಸಮಸ್ಯೆ ಉದ್ಭವಿಸಿದರೂ ಸಕಾಲಿಕ ಕ್ರಮದಿಂದ ಅವು ಪರಿಹಾರ ಕಾಣುತ್ತವೆ. ಮನೆಯಲ್ಲಿ ಶಾಂತಿ ಮತ್ತು ಸಮಾಧಾನ.

ಮೀನ:
ಕನಸು ನನಸಾಗಲು ನಿರಂತರ ಕಠಿಣ ಶ್ರಮ ಅಗತ್ಯ. ಇದನ್ನು ನೀವು ಪಾಲಿಸಬೇಕು. ಮಕ್ಕಳಿಂದ ಕೀರ್ತಿ ಪಡೆಯುವಿರಿ. ಆರ್ಥಿಕ ಸುಸ್ಥಿರತೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!