ದಿನಭವಿಷ್ಯ | ಈ ರಾಶಿಯವರಿಗೆ ಇಂದು ಧನಲಾಭ!

 

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇಷ

ಇಂದು ಹಲವಾರು ಕಾರ್ಯಗಳನ್ನು ಪೂರೈಸಬೇಕಾದ ಒತ್ತಡ. ವೃತ್ತಿಯಲ್ಲಿ ವಿರೋಧಿಗಳಿಂದ ಸಮಸ್ಯೆ. ಜಾಣ್ಮೆಯಿಂದ ನಿಭಾಯಿಸಿ.

ವೃಷಭ
ಕುಟುಂಬದ ಹಿತಾಸಕ್ತಿಗೆ ಹೆಚ್ಚು ಆದ್ಯತೆ ಕೊಡಬೇಕು. ಕುಟುಂಬದಲ್ಲಿ ಆರೋಗ್ಯ ಸಮಸ್ಯೆ ಕಾಡಬಹುದು. ಆರ್ಥಿಕ ಸಮಸ್ಯೆ ಕಾಡುವುದು.

ಮಿಥುನ
ಆರ್ಥಿಕ ವ್ಯವಸ್ಥೆಯನ್ನು ಸರಿದಾರಿಗೆ ತರಲು ಯತ್ನಿಸುವಿರಿ. ಸಮಸ್ಯೆಗಳನ್ನು ಬದಿಗಿಟ್ಟು ಖುಷಿ ತರುವ ಹೊಸ ಕಾರ್ಯಕ್ಕೆ ಹೊರಡಿ.

ಕಟಕ
ಯೋಜನಾಬದ್ಧವಾಗಿ ಕಾರ್ಯ ನಿರ್ವಹಿ ಸುವಿರಿ. ಆದರೂ ನಿಮಗೆ ದೊರಕುವ ಪ್ರತಿಫಲ ವಿಳಂಬವೇ ಆಗುವುದು. ನಿರಾಶೆ ಮತ್ತು ಹತಾಶೆ.

ಸಿಂಹ
ಒಳ್ಳೆ ಆಹಾರ ಸೇವಿಸಿ. ಇಲ್ಲವಾದರೆ ಆರೋಗ್ಯ ಸಮಸ್ಯೆ. ಧನ ಲಾಭ. ಮಕ್ಕಳಿಂದ ಕಿರಿಕಿರಿ ಅನುಭವಿಸುವಿರಿ. ಸಂಗಾತಿಯಿಂದ ಉತ್ತಮ ಬೆಂಬಲ.

ಕನ್ಯಾ
ಸಂತೋಷದ ದಿನ. ಇತರರ ಸಮಸ್ಯೆ ಪರಿಹರಿಸಲು ನೀವು ಮತ್ತು ಕುಟುಂಬಸ್ಥರು ಮುಂದಾಗುವಿರಿ. ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಿ.

ತುಲಾ
ಹಲವು ಬಿಕ್ಕಟ್ಟುಗಳನ್ನು ಏಕಕಾಲದಲ್ಲಿ ಎದುರಿಸುವಿರಿ. ತಾಳ್ಮೆಯಿಂದ ವ್ಯವಹರಿಸಬೇಕು. ಇಲ್ಲವಾದರೆ ಇನ್ನಷ್ಟು ಗೊಂದಲ ಸೃಷ್ಟಿ.

ವೃಶ್ಚಿಕ
ಬಿಡುವಿಲ್ಲದ ಕೆಲಸ. ಮನೆ ಮತ್ತು ವೃತ್ತಿಯಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಸಮಯ ಕೊಡಬೇಕಾಗುವುದು. ಆರ್ಥಿಕ ಒತ್ತಡ.

ಧನು
ಉದ್ಯಮದಲ್ಲಿ ಯಶಸ್ಸು. ವ್ಯಾಪಾರ ವಹಿವಾಟು ಸುಗಮ ವಾಗಿ ಸಾಗುವುದು. ಕಳೆದ ಕೆಲವು ದಿನಗಳ ಸಮಸ್ಯೆಯು ನಿಧಾನ ವಾಗಿ ನೀಗುವುದು.

ಮಕರ
ಅನಿರೀಕ್ಷಿತ ಖರ್ಚು. ಸಹೋದ್ಯೋಗಿಯೊಬ್ಬ ನಿಮ್ಮ ವಿರುದ್ಧವಾಗಿ ಕಾರ್ಯಾಚರಿಸುವನು. ಮಹಿಳೆಯರು ಆರೋಗ್ಯದ ಕಾಳಜಿ ವಹಿಸಬೇಕು.

ಕುಂಭ
ಎಚ್ಚರದಿಂದ ಹೆಜ್ಜೆ ಯಿಡಿ. ಕೆಲವರು ನಿಮ್ಮ ಕಾರ್ಯವಿಧಾನ ಮೆಚ್ಚುವುದಿಲ್ಲ. ಅವರ ವಿಚಾರದಲ್ಲಿ  ನೀವು ಹಸ್ತಕ್ಷೇಪ ನಡೆಸು
ವುದನ್ನು ಸಹಿಸೋಲ್ಲ.

ಮೀನ
ಆರ್ಥಿಕ ಪರಿಸ್ಥಿತಿ ಯನ್ನು ಸುಧಾರಿಸಲು ನೀವು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಬೇಕು. ಕುಟುಂಬದಲ್ಲಿ ಸಂಘರ್ಷ ಸಂಭವ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!