ದಿನಭವಿಷ್ಯ | ವೃತ್ತಿಯಲ್ಲಿ ಕೆಲವರು ನಿಮಗೆ ಬೇಕೆಂದೇ ಅಡ್ಡಗಾಲು ಹಾಕುತ್ತಾರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಮೇಷ
ಮುಕ್ತ ಮನಸ್ಸಿನಿಂದ ಮಾತುಕತೆ ನಡೆಸಿ. ಎಲ್ಲ ಬಗೆಯ ಭಿನ್ನಾಭಿಪ್ರಾಯ ನಿವಾರಣೆ ಸಾಧ್ಯ. ಸವಾಲುಗಳನ್ನು ದಿಟ್ಟವಾಗಿ ಎದುರಿಸಲು ಕಲಿಯಿರಿ.

ವೃಷಭ
ವಾಹನ ಚಾಲನೆಯಲ್ಲಿ ಸಂಚಾರಿ ನಿಯಮ ಪಾಲಿಸಿ. ವಿದ್ಯಾರ್ಥಿ ಗಳಿಗೆ ನಿರೀಕ್ಷೆಗಿಂತ ಹೆಚ್ಚು ಸಫಲತೆ ಸಿಗುವುದು. ಶೀತದಂತಹ ಬಾಧೆ ಕಾಡಬಹುದು.

ಮಿಥುನ
ನಿಮಗೆ ಒದಗುವ ಕಷ್ಟವನ್ನು ನೀವೇ ನೀಗಬೇಕು. ಇತರರ ಸಹಾಯಕ್ಕಾಗಿ ಕಾದು ಕೂರದಿರಿ. ನಿಮ್ಮ ಸಾಮರ್ಥ್ಯದಲ್ಲಿ ವಿಶ್ವಾಸವಿರಲಿ.

ಕಟಕ
ವೃತ್ತಿಯಲ್ಲಿನ ಹೊಣೆಗಾರಿಕೆ ನಿಭಾಯಿಸಲು ಅಡ್ಡಿ ಒದಗಬಹುದು. ಕೆಲವರು ಬೇಕೆಂದೇ ನಿಮಗೆ ಅಡ್ಡಗಾಲು ಹಾಕುತ್ತಾರೆ.

ಸಿಂಹ
ಮನೆಯಲ್ಲಿ ಪರಸ್ಪರರ ಮೇಲೆ ಆರೋಪ ಹೊರಿಸುತ್ತಾ ಕೂರದಿರಿ. ಭಿನ್ನಮತ ನಿವಾರಿಸಲು ಆದ್ಯತೆ ಕೊಡಿ. ವೃತ್ತಿಯ ಒತ್ತಡ ಮನೆಯ ನೆಮ್ಮದಿ ಹಾಳು ಮಾಡಬಹುದು.

ಕನ್ಯಾ
ವೃತ್ತಿಯಲ್ಲಿ ಸಮಸ್ಯೆ ಒದಗಬಹುದು. ಅದನ್ನು ಸರಿಯಾಗಿ ಆಲೋಚಿಸಿ ಪರಿಹರಿಸಿ. ಆತುರದ ತೀರ್ಮಾನ ಒಳಿತು ತರದು. ಆರೋಗ್ಯ ಸ್ಥಿತಿ ಸುಧಾರಣೆ.

ತುಲಾ
ಸಂಗಾತಿ ಜತೆಗೆ ಭಿನ್ನಮತ ಮೂಡಬಹುದು. ಅದನ್ನು ಶಾಂತಿಯಿಂದ ಪರಿಹರಿಸಿಕೊಳ್ಳಿ. ವಾಗ್ವಾದ ಬಿಕ್ಕಟ್ಟು ಹೆಚ್ಚು ಮಾಡಬಹುದು. ಖರ್ಚು ಅಧಿಕ.

ವೃಶ್ಚಿಕ
ಕೌಟುಂಬಿಕ ಶಾಂತಿ ಮತ್ತು ಸಮಾಧಾನ. ಆರ್ಥಿಕ ಯೋಜನೆಗಳು ಉತ್ತಮ ಫಲ ನೀಡುತ್ತವೆ. ಸ್ವಂತ ಉದ್ಯಮದಲ್ಲಿ ತೊಡಗಿದವರಿಗೆ ಧನಲಾಭ.

ಧನು
ಕೌಟುಂಬಿಕ ಪರಿಸರವು ಹೆಚ್ಚು ಶಾಂತಿಯುತ. ಅದಕ್ಕೆ ಕಾರಣ ನೀವು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಹೊಂದಾಣಿಕೆ ನಡೆಸುವುದು.

ಮಕರ
ಹಣದ ವಿಚಾರದಲ್ಲಿ ಆತುರದ ತೀರ್ಮಾನ ತೆಗೆದುಕೊಳ್ಳದಿರಿ. ನಷ್ಟದ ಸಾಧ್ಯತೆ ತಪ್ಪಿಸಿರಿ.ಆಪ್ತ ಬಂಧುವಿನಿಂದ ಈಡೇರಿಸಲಾಗದ  ಬೇಡಿಕೆ ಬರಬಹುದು.

ಕುಂಭ
ಬದಲಾವಣೆಗೆ ಕೊರಗುತ್ತ ಕೂರದಿರಿ. ಅದಕ್ಕೆ ಹೊಂದಿಕೊಳ್ಳಲು ಅಭ್ಯಸಿಸಿ. ಇಲ್ಲವಾದರೆ ನೀವು ಹಿಂದೆ ಬೀಳುವಿರಿ. ಸಾಂಸಾರಿಕ ಸಮಸ್ಯೆ ಪರಿಹಾರ ಕಾಣುವುದು.

ಮೀನ
ಕೌಟುಂಬಿಕವಾಗಿ ವಾಗ್ವಾದ ನಡೆದೀತು. ಇದರಿಂದ ಸಂಬಂಧ ಕೆಡಬಹುದು. ಇತರರ ಅಭಿಪ್ರಾಯಕ್ಕೂ ಮನ್ನಣೆ ಕೊಡಲು ಪ್ರಯತ್ನಿಸಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!