ದಿನಭವಿಷ್ಯ | ವೃಷಭವರ ನಿಷ್ಕ್ರಿಯತೆ ಟೀಕೆಗೆ ಗುರಿಯಾದೀತು, ಸಿಂಹ ರಾಶಿಯವರು ಆರೋಗ್ಯದ ಬಗ್ಗೆ ಗಮನ ಕೊಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಮೇಷ
ಸಮಸ್ಯೆ ಒದಗಿದರೂ ಅದನ್ನು ದಿಟ್ಟವಾಗಿ ಎದುರಿಸಿ. ಹೆದರಿ ಓಡದಿರಿ. ಹಣದ ವಿಚಾರದಲ್ಲಿ ಎಚ್ಚರ ದಿಂದ ವ್ಯವಹರಿಸಿ. ನಷ್ಟ ತಪ್ಪಿಸಿರಿ.

ವೃಷಭ
ಕುಟುಂಬ ಸದಸ್ಯರಿಂದ ದೂರ ಸರಿಯದಿರಿ. ನಿಮ್ಮ ನಿಷ್ಕ್ರಿಯತೆ ಟೀಕೆಗೆ ಗುರಿಯಾದೀತು. ವೃತ್ತಿಕ್ಷೇತ್ರದಲ್ಲಿ ನಿಮಗೆ ಕೇಡು ತರಲು ಕೆಲವರು ಯತ್ನಿಸುವರು.

ಮಿಥುನ
ಕೆಲವು ಬೆಳವಣಿಗೆ ನಿಮ್ಮ ಆತ್ಮವಿಶ್ವಾಸ ಕುಂದಿಸಬಹುದು. ದೇಹಾರೋಗ್ಯ  ಸುಸ್ಥಿರ. ಆದರೆ ಮಾನಸಿಕ ಒತ್ತಡವು ನಿಮ್ಮನ್ನು ಬಳಲಿಸುತ್ತದೆ.

ಕಟಕ
ಕೌಟುಂಬಿಕ ಪರಿಸ್ಥಿತಿ ಸೌಹಾರ್ದದಾಯಕ. ಉತ್ತಮ ಹೊಂದಾಣಿಕೆ. ಆದರೆ ವೃತ್ತಿ ಬದುಕಿನಲ್ಲಿ ನೀವು ಅಸಹಕಾರ ಎದುರಿಸುವಿರಿ. ಸಮಸ್ಯೆ ಕಾಡುವುದು.

ಸಿಂಹ
ಆರೋಗ್ಯದ ಕುರಿತು ಗಮನ ಕೊಡಿ. ಅಸೌಖ್ಯ ಕಡೆಗಣಿಸದಿರಿ. ನೀವು ಈಗ ಕೈಗೊಂಡಿರುವ ಯಾವುದೇ ಕಾರ್ಯ ಉತ್ತಮ ಫಲ ನೀಡುವುದು.

ಕನ್ಯಾ
ಬಜೆಟ್ ನೋಡಿಕೊಂಡು ಖರೀದಿಗೆ ಹೊರಡಿ. ಇಲ್ಲವಾದರೆ ನಿಮ್ಮ ಖರ್ಚು ಹೆಚ್ಚಬಹುದು. ವೃತ್ತಿಯಲ್ಲಿ ನಿಮ್ಮ ಕೋಪತಾಪ ನಿಯಂತ್ರಿಸಿ ವ್ಯವಹರಿಸಿ.

ತುಲಾ
ಪ್ರತೀ ಕೆಲಸದಲ್ಲೂ ಪರಿಪೂರ್ಣತೆ ಬಯಸುವಿರಿ. ಇದು ಕೆಲವರಿಗೆ ಅಸಹನೀಯ ಎನಿಸಬಹುದು. ಅವರಿಂದ ಟೀಕೆ ಎದುರಿಸುವಿರಿ.

ವೃಶ್ಚಿಕ
ಬಿಡುವಿಲ್ಲದ ದಿನ. ಕೆಲವು ವ್ಯವಹಾರಗಳು ನೀವು ಬಯಸಿದಂತೆ ಸಾಗದು. ಅದರಿಂದ ವ್ಯಥೆ ಬೇಡ. ಕುಟುಂಬ ಸದಸ್ಯರಿಂದ ಹೆಚ್ಚು ಆದರ , ಪ್ರೀತಿ ಪಡೆಯುವಿರಿ.

ಧನು
ನಿಮ್ಮ ಪ್ರಾಮಾಣಿಕ ಕಾರ್ಯಕ್ಕೆ ಮೆಚ್ಚುಗೆ ಲಭಿಸಲಿದೆ. ಭಾವನಾತ್ಮಕ ಸಂಘರ್ಷ ಎದುರಿಸುವಿರಿ. ಆಪ್ತರ ವರ್ತನೆಯು ನೋವು ತರಬಹುದು.

ಮಕರ
ಪ್ರಮುಖ ನಿರ್ಧಾರ ತಾಳುವಾಗ ನಿಮ್ಮ ಆತ್ಮಸಾಕ್ಷಿಯಂತೆ ನಡಕೊಳ್ಳಿ. ಇತರರ ಪ್ರಭಾವಕ್ಕೆ ಒಳಗಾಗಬೇಡಿ. ಕೌಟುಂಬಿಕ ಒತ್ತಡ.

ಕುಂಭ
ವೃತ್ತಿಯಲ್ಲಿ ಒತ್ತಡ ಎದುರಿಸುವಿರಿ. ಕೆಲವರ ಅಸಹಕಾರ. ಆದರೆ ಸಂಜೆಯ ವೇಳೆಗೆ ಎಲ್ಲವೂ ನಿರಾಳ. ಆಪ್ತರಿಂದ ಶುಭ ಸಂದೇಶ ದೊರಕೀತು.

ಮೀನ
ಕೆಲವು ಹೊಸ ವಿಷಯಗಳು ನಿಮ್ಮ ಅರಿವಿಗೆ ಬಂದು ಮನಶ್ಯಾಂತಿ ಕದಡಬಹುದು. ಆಪ್ತರೆನಿಸಿದವರೇ ವಂಚನೆ ಬಗೆದಾರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!