ದಿನಭವಿಷ್ಯ | ಕನ್ಯಾದವರಿಗೆ ಇಂದು ಖರ್ಚುಗಳು ವಿಪರೀತ, ಕುಂಭದವರಿಗೆ ಒಲಿಯಲಿದೆ ಅದೃಷ್ಟ!

ಹೊಸಗಂತ ಡಿಜಿಟಲ್‌ ಡೆಸ್ಕ್

ಮೇಷ
ಸಂಬಂಧದ ವಿಚಾರದಲ್ಲಿ ಪ್ರವಾಹ ದೊಂದಿಗೇ ಸಾಗಿ. ವಿರುದ್ಧವಾಗಿ ವರ್ತಿಸು ವುದು ಬೇಡ. ಇರುವ ಸಂಬಂಧ ಕಾಯ್ದುಕೊಳ್ಳಿ.

ವೃಷಭ
ಇಂದು ಒತ್ತಡಗಳಿಲ್ಲದ ವಿರಾಮದ ದಿನ. ಶಾಪಿಂಗ್ ಅವಕಾಶವಿದೆ.  ಹಣದ ವಿಷಯ ಇಂದು ನಿಮಗೆ ಮುಖ್ಯವಾಗುವುದಿಲ್ಲ. ಖರೀದಿಯೇ ಮುಖ್ಯ.

ಮಿಥುನ
ನಿಮ್ಮ ಆಕ್ರಮಣಕಾರಿ ಧೋರಣೆಯಿಂದ ಕೆಲವ ರೊಂದಿಗೆ ಸಂಘರ್ಷ ಉಂಟಾದೀತು. ನಿಮ್ಮ ಹೆಸರಿಗೆ ಮಸಿ ಬಳಿಯಲು ಯತ್ನಿಸಿಯಾರು.

ಕಟಕ
ಎಲ್ಲರೊಂದಿಗೆ ಕೂಡಿ ಕಳೆಯುವಿರಿ. ಅವರ ಹರ್ಷದಲ್ಲಿ ಪಾಲ್ಗೊಳ್ಳುವಿರಿ. ಆದರೆ ನಿಮ್ಮ ಮನದಾಳದಲ್ಲಿ ನೋವು ತುಂಬಿದೆ, ಬೇಸರವಿದೆ.

ಸಿಂಹ
ಬದಲಾವಣೆಗೆ ಹಾತೊರೆಯುವಿರಿ. ಹೊಸತನ್ನು  ಮಾಡ ಬೇಕೆಂಬ ಉತ್ಸಾಹ. ಆದರೆ ಇತರರ ಪ್ರೋತ್ಸಾಹ ನಿಮಗೆ ಸಿಗಲಾರದು.

ಕನ್ಯಾ
ಇಂದು ಖರ್ಚುಗಳು ವಿಪರೀತ ಏರುತ್ತವೆ. ಬಹುತೇಕ ಅನವಶ್ಯ ಖರ್ಚುಗಳೇ. ಖಾಸಗಿ ಬದುಕಿನಲ್ಲಿ ಮಹತ್ವದ ಬೆಳವಣಿಗೆ ಸಂಭವಿಸಬಹುದು.

ತುಲಾ
ಪ್ರೀತಿಪಾತ್ರರೊಂದಿಗೆ ಇಂದು ಸಮಯ ಕಳೆಯುವ ಅವಕಾಶ. ಭಿನ್ನಾಭಿಪ್ರಾಯ  ಏಳದಂತೆ ನೋಡಿಕೊಳ್ಳಿ. ಹೊಂದಾಣಿಕೆ ಅತೀ ಅವಶ್ಯ.

ವೃಶ್ಚಿಕ
ಏಕತಾನತೆಯ ಬದುಕು ಬೋರ್ ಹೊಡೆಸುತ್ತದೆ. ಉತ್ಸಾಹಕಾರಿ ಕಾರ್‍ಯಕ್ಕೆ ತೊಡಗುವ ಮನಸ್ಸು.  ಆರ್ಥಿಕ ಒತ್ತಡ ನಿಮ್ಮ ಉತ್ಸಾಹ ಭಂಗಕ್ಕೆ ಕಾರಣವಾಗುವುದು.

ಧನು
ನಿಮ್ಮ ನಾಯಕತ್ವ ಗುಣಕ್ಕೆ ಮೆಚ್ಚುಗೆ ಸಿಗುವುದು. ಹಿಡಿದ ಕಾರ್‍ಯವನ್ನು ಬಿಡದೆ ಸಾಧಿಸುವಿರಿ.  ಕೌಟುಂಬಿಕ ಸಹಕಾರ ಲಭ್ಯ.

ಮಕರ
ಕೆಲಸ ವಿಫಲವಾದರೆ ಮತ್ತೆ ಪ್ರಯತ್ನಿಸಿ. ಏಕೆಂದರೆ ಮರಳಿ ಯತ್ನದಿಂದ ಕಾರ್‍ಯ ಸಾಧ್ಯ ಎಂಬುದು ಇಂದು ನಿಮ್ಮ ಗ್ರಹಗತಿ ಸೂಚಿಸುತ್ತಿವೆ.

ಕುಂಭ
ನಿಮಗಿಂದು ಸವಾಲಿನ ದಿನ. ಇತರರಿಂದ ಅಸಹಕಾರ. ಆದರೂ ಅದೃಷ್ಟ ನಿಮ್ಮ ಕಡೆಗೆ ವಾಲುವುದು. ಕೌಟುಂಬಿಕ ವ್ಯಾಜ್ಯ ಪರಿಹಾರ.

ಮೀನ
ಗ್ರಹಗತಿ ಪೂರಕವಾಗಿಲ್ಲ. ಹಾಗಾಗಿ ಸಮಸ್ಯೆಗಳಿಂದ ದೂರವಿರಿ. ನೀವಾಗಿ ಸಮಸ್ಯೆ ಮೈಮೇಲೆ ಎಳೆದುಕೊಳ್ಳಬೇಡಿ. ಮಾತಿನಲ್ಲಿ  ಹದವಿರಲಿ‌.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!