Wednesday, December 6, 2023

Latest Posts

ದಿನಭವಿಷ್ಯ | ನಿಮ್ಮ ಹಿಂದಿನ ಕೆಲಸಗಳ ಪರಿಶ್ರಮದ ಫಲ ಇಂದು ಸಿಗಲಿದೆ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇಷ
ಸಮಸ್ಯೆಗಳು ನಿಮ್ಮನ್ನು ಮುತ್ತಬಹುದು. ಅವನ್ನು ಪರಿಹರಿಸಲು ಅನ್ಯರ ಸಹಾಯವೂ ಬೇಕಾದೀತು. ಸಹಾಯ ಪಡೆಯಲು ಹಿಂಜರಿಯದಿರಿ.

ವೃಷಭ
ಇಂದು ಹೊಸ ಚಿಂತನೆಗಳು ಮೊಳೆಯಬಹುದು. ಇದು ನಿಮ್ಮ ಬದುಕನ್ನು ಹೆಚ್ಚು ಸರಳಗೊಳಿಸುತ್ತದೆ. ಸಂಬಂಧಗಳನ್ನು ಸರಿಪಡಿಸುತ್ತದೆ.

ಮಿಥುನ
ಉತ್ಸಾಹದ ದಿನ. ನಿಮ್ಮ ಕ್ರಿಯಾತ್ಮಕತೆಗೆ ಉತ್ತಮ ಫಲ ದೊರಕುವುದು. ಉದ್ಯೋಗದಲ್ಲಿ ರಿಸ್ಕ್ ತೆಗೆದುಕೊಳ್ಳ ಬೇಕಾಗು ವುದು. ಅದರಿಂದ ಹಾನಿ ತಟ್ಟದು.

ಕಟಕ
ನಿಮ್ಮ ಕೆಲಸ ಮಾಡಿ. ಪ್ರತಿಫಲವನ್ನು ಅಪೇಕ್ಷಿಸ ಬೇಡಿ. ಈ ಕರ್ಮ ಸಿದ್ಧಾಂತ ಇಂದು ನಿಮಗೆ ಹೆಚ್ಚು ಅನ್ವಯಿಸುವುದು. ಕರ್ತವ್ಯದಲ್ಲಿ ವಿಮಖ ಆಗದಿರಿ.

ಸಿಂಹ
ನಿಮ್ಮ ಹಿಂದಿನ ಕೆಲಸಗಳ ಫಲವನ್ನು ಇಂದು ಪಡೆಯುವಿರಿ. ಆರ್ಥಿಕ ಲಾಭ. ಬಂಧುಗಳಿಂದ ಶುಭ ಸುದ್ದಿ. ಸೊತ್ತು ಖರೀದಿ ಯಶಸ್ವಿಯಾಗುವುದು.

ಕನ್ಯಾ
ಎಲ್ಲರೊಡನೆ ಸೌಹಾರ್ದ ಸ್ಥಾಪಿಸಲು ಇಂದು ಆದ್ಯತೆ ಕೊಡುವಿರಿ. ದ್ವೇಷಾಸೂಯೆ ತೊಡೆಯಲು ನಿರ್ಧರಿಸುವಿರಿ.
ಧನ ಲಾಭ.

ತುಲಾ
ನಿಮ್ಮ ಕಾರ್ಯಶೈಲಿ ಯಲ್ಲಿ ಬದಲಾವಣೆ ಮಾಡಬೇಕಾಗುವುದು. ಅದರಿಂದ ಉತ್ತಮ ಫಲ ಪಡೆಯುವಿರಿ. ನಿಮ್ಮ ವೈಫಲ್ಯಕ್ಕೆ ಅನ್ಯರನ್ನು ದೂರಬೇಡಿ.

ವೃಶ್ಚಿಕ
ಸಹೋದ್ಯೋಗಿಗಳ ಜತೆ ಉತ್ತಮ ಸಹಕಾರ. ಇದರಿಂದಾಗಿ ಕಚೇರಿ ಕಾರ್ಯಗಳು ಸುಗಮ. ಮನೆಯಲ್ಲಿ ಸೌಹಾರ್ದದ ವಾತಾವರಣ.

ಧನು
ಫಲಪ್ರದ ದಿನ. ಮುಖ್ಯವಾಗಿ ಅಪರಾಹ್ನದ ನಂತರ ನಿಮ್ಮ ಕೆಲಸಗಳೆಲ್ಲ ಸುಸೂತ್ರ. ಸಂಜೆ ವೇಳೆಗೆ ಏಕಾಂಗಿತನ ಕಾಡಬಹುದು.

ಮಕರ
ಇಂದು ಮನೆಯೆಂ ಬುದು ನಿಮಗೆ ಸಮಸ್ಯೆಯ ಆಗರ ವಾಗಲಿದೆ. ಅದರಿಂದ ಓಡಿ ಹೋಗಲು ಯತ್ನಿಸ ದಿರಿ. ಸಮಸ್ಯೆಗಳನ್ನು ಪರಿಹರಿಸಲು ಯತ್ನಿಸಿ.

ಕುಂಭ
ನಿಮ್ಮ ಕೋಪತಾಪವನ್ನು ಇಂದು ನಿಯಂತ್ರಿಸ ಬೇಕು. ಇಲ್ಲವಾದರೆ ಸಂಘರ್ಷ ನಡೆದೀತು. ಹಾಗಾದಲ್ಲಿ ಅದು ನಿಮಗೇ ಪ್ರತಿಕೂಲ ಆಗಬಹುದು.

ಮೀನ
ವ್ಯಕ್ತಿಯೊಬ್ಬರ ಕುರಿತಂತೆ ವಿಶೇಷ ಕಾಳಜಿ ವಹಿಸುವಿರಿ. ವೈವಾಹಿಕ ಜೀವನದಲ್ಲಿ ಕುಶಿ. ಕೌಟುಂಬಿಕ ಹೊಣೆಗಾರಿಕೆ, ಒತ್ತಡ ಕಡಿಮೆಯಾಗುವುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!