ದಿನಭವಿಷ್ಯ | ಚಾಡಿ ಮಾತು ಕೇಳಿ ಆಪ್ತರನ್ನು ದೂರ ಮಾಡಿಕೊಳ್ಳಬೇಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇಷ
ನಿಮ್ಮ ಸುತ್ತಲಿನ ಬದಲಾವಣೆಗೆ ಕುರುಡರಾಗಬೇಡಿ. ಏಕೆಂದರೆ ಅದು ನಿಮ್ಮ ಬದುಕಿನ ಮೇಲೂ ಪರಿಣಾಮ ಬೀರಬಹುದು.

ವೃಷಭ
ನಿಮ್ಮ ಬೆನ್ನಹಿಂದೆ ಏನೋ ನಡೆಯುತ್ತಿದೆ ಎಂಬ ಭಾವ ಕಾಡಬಹುದು. ನಿಮಗೆ ಆಗದವರು ನಿಮ್ಮ ವಿರುದ್ಧ ಮಸಲತ್ತು ನಡೆಸಬಹುದು. ಎಚ್ಚರದಿಂದಿರಿ.

ಮಿಥುನ
ಆತ್ಮೀಯ ಸಂಬಂಧದಲ್ಲಿ ಬಿರುಕು ಮೂಡೀತು. ಅದಕ್ಕೆ ಬೇರೆಯವರನ್ನು  ದೂರಬೇಡಿ. ನಿಮ್ಮ ವರ್ತನೆಯ ಪರಾಮರ್ಶೆಯನ್ನೂ  ಮಾಡಿಕೊಳ್ಳಿ.

ಕಟಕ
ಹೆಚ್ಚು ಒತ್ತಡದ ದಿನ. ಕಾರ್ಯಗಳು ನೀವು ಬಯಸಿದಂತೆ ಸಾಗುವುದಿಲ್ಲ. ಅಡ್ಡಿಗಳು ಬಾಧಿಸುತ್ತವೆ. ಚಾಡಿ ಮಾತು ಕೇಳಿ ಆಪ್ತರನ್ನು ದೂರ ಮಾಡದಿರಿ.

ಸಿಂಹ
ನೀವೆಸಗುವ ಕೆಲಸದಲ್ಲಿ ತಪ್ಪು ಸಂಭವಿಸಬಹುದು. ಸಕಾಲದಲ್ಲಿ ಅದನ್ನು ಸರಿಪಡಿಸಿ. ಕಡೆಗಣನೆ ಬೇಡ. ಕೆಲವು ಸಹೋದ್ಯೋಗಿಗಳು  ಕಿರಿಕಿರಿ ಸೃಷ್ಟಿಸುವರು.

ಕನ್ಯಾ
ಲೌಕಿಕ ಜಗತ್ತಿನಲ್ಲಿ ಭಾವನೆಗಳಿಗೆ ಬೆಲೆಯಿಲ್ಲ ಎಂಬಂತಹ ಅನಿಸಿಕೆ ಮೂಡೀತು. ಅತಿಯಾದ ಭಾವುಕತೆ ಒಳಿತಲ್ಲ  ಎಂಬ ಅರಿವು ನಿಮಗಿರಲಿ.

ತುಲಾ
ನೀವಿಂದು ಕೈಗೊಳ್ಳುವ ಕಾರ್ಯದಲ್ಲಿ ಸಫಲತೆ. ಪ್ರತಿಕೂಲ ಪರಿಸ್ಥಿತಿಯೂ ನಿಮಗೆ ಪೂರಕವಾಗಿ ಬದಲಾಗುವುದು. ಆಪ್ತರಿಂದ ಸೂಕ್ತ ಸಹಕಾರ, ಬೆಂಬಲ.

ವೃಶ್ಚಿಕ
ವೃತ್ತಿಯಲ್ಲಿ ಹೆಚ್ಚು ಹೊಣೆಗಾರಿಕೆ. ಅದನ್ನು ನಿಭಾಯಿಸುವಲ್ಲಿ  ಸಫಲರಾಗುವಿರಿ. ನೆಗೆಟಿವ್ ಚಿಂತನೆಗಳು ಮನಸ್ಸನ್ನು ಕಾಡದಂತೆ ನೋಡಿಕೊಳ್ಳಿ.

ಧನು
ಮನೆಯಲ್ಲಿ ಜವಾಬ್ದಾರಿ, ಕೆಲಸ  ಹೆಚ್ಚುತ್ತದೆ. ಇತರರ ಕಾರ್ಯವೂ ನಿಮ್ಮ ಹೆಗಲೇರುವುದು. ಆಪ್ತರೊಬ್ಬರು ನಿಮ್ಮ ನೋವಿಗೆ ಶಮನವಾಗಿ ಬರುತ್ತಾರೆ.

ಮಕರ
ವೃತ್ತಿ ಕ್ಷೇತ್ರದಲ್ಲಿ ಅತೃಪ್ತಿ.ಮಾಡಿದ ಕಾರ್ಯವು ನಿರೀಕ್ಷಿತ ಫಲ ನೀಡದು. ಇತರರ ಟೀಕೆ. ಹಣಕ್ಕೆ ಸಂಬಂಧಿಸಿ ಕೆಲವು ಒತ್ತಡಗಳು. ಕೌಟುಂಬಿಕ ಉದ್ವಿಗ್ನತೆ.

ಕುಂಭ
ನಿಮ್ಮ  ಆಸಕ್ತಿಯ ಕ್ಷೇತ್ರದಲ್ಲಿ ಉತ್ತಮ ಅವಕಾಶ ದೊರಕಲಿದೆ. ಅದನ್ನು ಸದುಪಯೋಗ ಮಾಡಿಕೊಳ್ಳಿ. ಆರ್ಥಿಕವಾಗಿ ಲಾಭ. ಕೌಟುಂಬಿಕ ನೆಮ್ಮದಿ.

ಮೀನ
ವಿಶ್ವಾಸಿಗಳ ಮಾತನ್ನು ಮಾತ್ರ ನಂಬಿರಿ. ವದಂತಿಗಳನ್ನು ನಂಬಿ ನಿಮ್ಮ ಶಾಂತಿ ಹಾಳು ಮಾಡಿಕೊಳ್ಳದಿರಿ. ಆಪ್ತರ ಬಗ್ಗೆ ಅನವಶ್ಯ ಅಪನಂಬಿಕೆ ಬೇಡ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!