ಕಳ್ಳತನ ಮಾಡಿದ್ದ ವ್ಯಕ್ತಿ ಇದೀಗ ಪೊಲೀಸರ ಅತಿಥಿ…

ಹೊಸದಿಗಂತ ವರದಿ ಯಲ್ಲಾಪುರ:

ಪಟ್ಟಣದ ಹಾದಿಗಾವಿಗಲ್ಲಿಯ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆ.26ರಂದು ಮನೆ ಕಳ್ಳತನವಾಗಿರುವ ಕುರಿತು ಹಾದಿಗಾವಿಗಲ್ಲಿಯ ನಿವಾಸಿ ನಿವೃತ್ತ ಶಿಕ್ಷಕ ತಮ್ಮಣ್ಣ ಸುಬ್ರಾಯ ಭಟ್ಟ ಅವರು,  ಮನೆಯ ಹಿಂದಿನ ಬಾಗಿಲನ್ನು ಮುರಿದು ಒಳಗಡೆ ಕೋಣೆಯಲ್ಲಿ ಕಪಾಟಿನಲ್ಲಿರುವ 1 ಬಂಗಾರದ ಚೈನ್ ಬಂಗಾರದ ಗಟ್ಟಿ, ನಗದು ಹಣ 3,000ರೂ. ಹೀಗೆ ಒಟ್ಟು 1,25,000 ರೂ ಕಳುವು ಮಾಡಿಕೊಂಡು ಹೋಗಿರುವ ಬಗ್ಗೆ ಪ್ರಕರಣ ದಾಖಲಿಸಿದ್ದರು.

ಪೊಲೀಸರು ಖಚಿತ ಮಾಹಿತಿ ಮೇರೆಗೆ ಉದ್ಯಮನಗರದ ಸೆಂಟ್ರಿಂಗ್ ಸೆಂಟ್ರಿಂಗ್ ಕೆಲಸಗಾರ ಶೋಹೆಬ್‌ ಮಹ್ಮದ ಗೌಸ್ ಚಿಗರಳ್ಳಿ(23) ವಶಕ್ಕೆ ಪಡೆದು ಕದ್ದ ಸೊತ್ತನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪೊಲೀಸ್ ಅಧೀಕ್ಷಕಿ ಡಾ.ಸುಮನ ಪೆನ್ನೇಕರ
ಹೆಚ್ಚುವರಿಪೊಲೀಸ್ ಅಧೀಕ್ಷಕ ಎಸ್. ಬದರಿನಾಥ , ಶಿರಸಿಯ ಪೊಲೀಸ್ ಉಪಾಧೀಕ್ಷಕರು ರವಿ ನಾಯ್ಕರವರ ಮಾರ್ಗದರ್ಶನದಲ್ಲಿ ಸಿ ಪಿ.ಐ ಸುರೇಶ ಯಳ್ಳೂರ, ನೇತೃತ್ವದಲ್ಲಿ ಪಿ.ಎಸ್.ಐಗಳಾದ ಅಮೀನಸಾಬ್‌ ಎಂ.ಅತ್ತಾರ ಪ್ರೋ, ಉದಯ ಡಿ ಹಾಗೂ ಸಿಬ್ಬಂದಿ, ಬಸವರಾಜ, ಮಹ್ಮದ ಶಫಿ, ಗಜಾನನ, ಗಿರೀಶ, ಶೋಭಾ, ನಾಯ್ಕ ಇವರು ಸಹ ಆರೋಪಿತನನ್ನು ದಸ್ತಗಿರಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!