ದಿನಭವಿಷ್ಯ | ನೀವು ನಿರೀಕ್ಷಿಸಿದ ಯಶಸ್ಸು ಇಂದು ದೊರಕುವುದು ಆದರೆ, ಮೈಮರೆಯದಿರಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇಷ
ನೀವು ನಿರೀಕ್ಷಿಸಿದ ಯಶಸ್ಸು ಇಂದು ದೊರಕುವುದು.  ಆದರೆ ಯಶಸ್ಸಿನಿಂದ ಮೈಮರೆಯದಿರಿ. ಕಾರ್ಯದಲ್ಲಿ ಕೌಟುಂಬಿಕ ಸಹಕಾರ.

ವೃಷಭ
ವ್ಯವಹಾರದಲ್ಲಿ ಶುಭ ಸುದ್ದಿ. ನೀವು ನಿರೀಕ್ಷಿಸಿದಂತೆ ಕೆಲಸ ಸಾಗುವುದು. ಆದರೆ ಕೌಟುಂಬಿಕವಾಗಿ ಒತ್ತಡ ಹೆಚ್ಚಳ. ಕೆಲವು ಬೇಡಿಕೆ ಅತಿಯೆನಿಸುವುದು.

ಮಿಥುನ
ಇತರರ ಕುರಿತು ಕಟುವಾಗಿ ವರ್ತಿಸುವುದರಿಂದ ಸಂಬಂಧ ಹಾಳು. ನಿಮ್ಮದೇ ಧೋರಣೆ ಇತರರ ಮೇಲೆ ಹೇರದಿರಿ. ತಾಳ್ಮೆಯಿರಲಿ.

ಕಟಕ
ಹಣಕಾಸಿನ ಪರಿಸ್ಥಿತಿ ಚಿಂತೆಗೆ ಕಾರಣವಾಗುವುದು. ಉಳಿತಾಯ ಮಾಡುವ ಬಗ್ಗೆ ಯೋಜಿಸಿರಿ. ಅನವಶ್ಯ ವೆಚ್ಚ ಕಡಿಮೆ ಮಾಡಬೇಕು.

ಸಿಂಹ
ನಿಮ್ಮ ಜನಪ್ರಿಯತೆ ಹೆಚ್ಚಿಸುವ ಬೆಳವಣಿಗೆ. ಸಾಮಾಜಿಕ ಕಾರ್ಯದಲ್ಲಿ ಯಶಸ್ಸು.  ಕುಟುಂಬದಲ್ಲಿ ಭಿನ್ನಮತ ಮೂಡಿದರೂ ಶೀಘ್ರ ನಿವಾರಣೆ.

ಕನ್ಯಾ
ಪ್ರಮುಖ ವಿಚಾರದಲ್ಲಿ ನಿಮ್ಮ ದೃಷ್ಟಿಕೋನ ಬದಲಿಸುವ ಪ್ರಸಂಗ ನಡೆದೀತು. ಸಂಘರ್ಷದ ಹಾದಿ ತುಳಿಯದಿರಿ. ಎಲ್ಲರ ಜತೆ  ಹೊಂದಾಣಿಕೆ ಮುಖ್ಯ.

ತುಲಾ
ಯಾವುದೇ ಹಿನ್ನಡೆ ನಿಮ್ಮನ್ನಿಂದು ಬಾಧಿಸದು. ಹಾಗಾಗಿ ಆ ಕುರಿತಾದ ಅಂಜಿಕೆ ಬಿಟ್ಟುಬಿಡಿ. ಆದರೆ ದಿನವಿಡಿ ನಿಮ್ಮ ಪಾಲಿಗೆ ನೀರಸವೆನಿಸುತ್ತದೆ.

ವೃಶ್ಚಿಕ
ವೃತ್ತಿಯಲ್ಲಿ ಬಿಕ್ಕಟ್ಟು. ಹಣಕಾಸು ಕೊರತೆ.  ಇತರರ ಸಹಕಾರದಿಂದ ಅದನ್ನು ನಿಭಾಯಿ ಸುವಿರಿ. ಖಾಸಗಿ ಬದುಕಿನಲ್ಲಿ ಏರುಪೇರು. ಪ್ರೇಮ ವೈಫಲ್ಯ.

ಧನು
ಧಾರ್ಮಿಕ ಕಾರ್ಯದಲ್ಲಿ  ಹೆಚ್ಚು ಆಸಕ್ತಿ. ಕೆಲವು ಸಮಸ್ಯೆಗಳು ನಿಮ್ಮನ್ನು ಆಧ್ಯಾತ್ಮಿಕದೆಡೆಗೆ ನೂಕಬಹುದು. ಕಷ್ಟಕ್ಕೆ ಅಂಜದಿರಿ, ಅದನ್ನು ಎದುರಿಸಿ.

ಮಕರ
ಆಪ್ತರೆನಿಸಿದವರ ಬಗ್ಗೆ ಶಂಕೆಗೊಳ್ಳುವ ಪ್ರಸಂಗ ಉದ್ಭವಿಸಬಹುದು. ಸರಿಯಾಗಿ ಪರಾಮರ್ಶೆ ನಡೆಸಿ. ವಿರೋಧಿಗಳನ್ನು ಸಂಧಾನದಿಂದ ಗೆಲ್ಲುವುದು ಒಳಿತು.

ಕುಂಭ
ಅಧಿಕ ಕೆಲಸ, ಅಧಿಕ ಒತ್ತಡ. ಎಲ್ಲ ಕಾರ್ಯವನ್ನು ಮುಗಿಸಲು ಯತ್ನಿಸುವಿರಿ  ಅಂತಿಮವಾಗಿ ಯಾವುದೇ ಕೆಲಸ ಸರಿಯಾಗಿ ನಡೆಯದು.

ಮೀನ
ಸರಿಯಾದ ಯೋಜನೆ
ಯಿಲ್ಲದೆ ನಿಮ್ಮ ಕೆಲಸ  ಕೆಡಬಹುದು. ಕೆಲಸದಲ್ಲಿನ ತಪ್ಪು ಸರಿಪಡಿಸುವುದರಲ್ಲೇ ನಿಮ್ಮ ಹಿತವಿದೆ. ಅದಕ್ಕೆ ಮುಜುಗರ ಬೇಡ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!