ದಿನಭವಿಷ್ಯ | ಹಳೆಯ ನೆನಪು, ಹಳೆ ಸ್ನೇಹಿತರು ಕಾಡಬಹುದು

ಹೊಸದಿಗಂತ ಡಿಜಿಟಲ್ ಡೆಸ್ಕ್‌
ಮೇಷ
ಕೆಲಸದ ಹೊರೆ ಮರೆತು ಆನಂದದಿಂದ ಕಾಲ ಕಳೆಯುವ ಯೋಜನೆ ನಿಮ್ಮದು. ಆದರೆ ಮೊದಲಿಗೆ ಅವಶ್ಯ ಕೆಲಸ ಪೂರೈಸಿ. ಯಾವುದನ್ನೂ ಬಾಕಿ ಇಡಬೇಡಿ.

ವೃಷಭ
ಹೊಣೆ ಹೆಚ್ಚು. ಅಧಿಕ ಕೆಲಸ. ಇತರರ ನೆರವು ಕೇಳಲು ಮುಜುಗರ ಬೇಡ. ಎಲ್ಲವನ್ನೂ ಯಾಂತ್ರಿಕವಾಗಿ ಮಾಡದಿರಿ. ಮನಸ್ಸು ತೊಡಗಿಸಿ.

ಮಿಥುನ
ಹಳೆಯ ನೆನಪು, ಹಳೆಯ ಸ್ನೇಹಿತರು ಕಾಡಬಹುದು. ಆದರೆ ಗತವನ್ನು ನೆನೆದು ಈಗಿನ ಸಂತೋಷ ಹಾಳು ಮಾಡಬೇಡಿ. ವೃತ್ತಿಯಲ್ಲಿ ಅಧಿಕ ಒತ್ತಡ.

ಕಟಕ
ಕುಟುಂಬ ಸದಸ್ಯರಿಂದ ಅನಿರೀಕ್ಷಿತ ಕೊಡುಗೆ. ವೃತ್ತಿಯಲ್ಲಿ ನಿಮ್ಮ ನಿರ್ವಹಣಾ ಸಾಮರ್ಥ್ಯ ತೋರ್ಪಡಿಸಿ. ಇತರರ ನಂಜು ಮಾತಿಗೆ ಕಿವಿಗೊಡದಿರಿ.

ಸಿಂಹ
ಹಣಕಾಸು ಪರಿಸ್ಥಿತಿಗೆ ಸಂಬಂಧಿಸಿ ಪ್ರಮುಖ ನಿರ್ಧಾರ ತಾಳದಿರಿ. ಅದು ನಿಮಗೆ ಪೂರಕ ಆಗಲಾರದು. ಸ್ವಲ್ಪ ದಿನ ಕಾದು ನೋಡಿ. ಆಪ್ತರ ಸಲಹೆ ಪಡೆಯಿರಿ.

ಕನ್ಯಾ
ಸಂವಹನದ ಕೊರತೆಯು ಖಾಸಗಿ ಬದುಕಲ್ಲಿ ಸಮಸ್ಯೆ ಸೃಷ್ಟಿಸಬಹುದು. ಅಭಿಪ್ರಾಯ ವ್ಯಕ್ತ ಮಾಡುವಲ್ಲಿ ಮುಕ್ತ ಮನಸ್ಸಿರಲಿ. ಯಾವುದೂ ಮುಚ್ಚಿಡಬೇಡಿ.

ತುಲಾ
ನಿಮ್ಮ ಪಾಲಿಗೆ ಸಾಧಾರಣ ದಿನ. ವ್ಯವಹಾರದಲ್ಲಿ ಹೆಚ್ಚು ಪ್ರಾಕ್ಟಿಕಲ್ ಆಗಿರಿ. ಭಾವನಾತ್ಮಕತೆ ವ್ಯವಹಾರವನ್ನು ಹಾಳು ಮಾಡಬಹುದು.

ವೃಶ್ಚಿಕ
ಖಾಸಗಿ ಸಮಸ್ಯೆ ಬಗೆಹರಿಸಲು ಇಂದು ಆದ್ಯತೆ ಕೊಡಬೇಕು. ಕುಟುಂಬಸ್ಥರ ಜತೆ ಸಹಕಾರದಿಂದ ವರ್ತಿಸಿ. ಸಣ್ಣ ವಿಷಯಕ್ಕೂ ರೇಗದಿರಿ.

ಧನು
ಯಾವುದೇ ಪ್ರತಿಕೂಲ ಪರಿಸ್ಥಿತಿ ಏರ್ಪಟ್ಟರೂ ಆತ್ಮವಿಶ್ವಾಸ ಬಿಡಬೇಡಿ. ಏಕೆಂದರೆ ದಿನದಂತ್ಯಕ್ಕೆ ಎಲ್ಲವೂ ನಿಮ್ಮ ಪರವಾಗಿ ಆಗುವುದು. ಆರ್ಥಿಕ ಬಿಕ್ಕಟ್ಟು ನಿವಾರಣೆ.

ಮಕರ
ನಿಮ್ಮ ಎಲ್ಲಾ ಕಾರ್ಯಕ್ಷೇತ್ರಗಳಲ್ಲಿ ಅಭಿವೃದ್ಧಿ. ಆರ್ಥಿಕ ಉನ್ನತಿ. ಹದಗೆಟ್ಟಿದ್ದ ಸಂಬಂಧವೊಂದು ಮತ್ತೆ ಚಿಗುರುವುದು. ಒಟ್ಟಿನಲ್ಲಿ ಖುಷಿಯ ದಿನ.

ಕುಂಭ
ಸಣ್ಣ ಸಮಸ್ಯೆಯೊಂದು ಮನಸ್ಸು ಕಾಡುವುದು.  ವಿಷಯ ಸಣ್ಣದಾದರೂ ಅದನ್ನು ಕಡೆಗಣಿಸುವ ಹಾಗಿಲ್ಲ. ಸೂಕ್ತ ಕ್ರಮ ತೆಗೆದುಕೊಂಡು ಪರಿಹರಿಸಿಕೊಳ್ಳಿ.

ಮೀನ
ಖಾಸಗಿ ಮತ್ತು ವೃತ್ತಿ ಬದುಕಿನಲ್ಲಿ ಉನ್ನತಿ. ಮನೆಯಲ್ಲಿ ಎಲ್ಲರ ಜತೆ ಉತ್ತಮ ಹೊಂದಾಣಿಕೆ. ವೈಮನಸ್ಸು ದೂರ. ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!