ಫ್ರೆಂಚರಿಂದ ಸ್ವಾತಂತ್ರ್ಯ ಪಡೆಯಲು ಹೋರಾಡಿದ್ದರು ವೆಂಕಟರಾಜ ರಾವ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಸ್ವಾತಂತ್ರ್ಯ ಹೋರಾಟಗಾರ ವೆಂಕಟರಾಜ ರಾವ್ ಅವರು 13 ಜೂನ್ 1917ರಂದು ಜನಿಸಿದರು. ಅವರು ಪುದುಚೇರಿಯ ಯಾನಂ ಮೂಲದವರು. ಅವರು ತಮ್ಮ ಆರಂಭಿಕ ಶಿಕ್ಷಣವನ್ನು ಯಾನಂ ಶಾಲೆಯಲ್ಲಿ ಮತ್ತು ನಂತರ ಪುದುಚೇರಿಯ ಫ್ರೆಂಚ್ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ಆ ಬಳಿಕ ಅವರು ಯಾನಂನ ಮೊದಲ ಉಪಮೇಯರ್ ಆದರು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕರೂ ಪಾಂಡಿಚೇರಿ, ಚಂದ್ರನಾಗೂರು, ಮಾಹೆ, ಕಾರೈಕಲ್ ಮತ್ತು ಯಾನಂಗಳಿಗೆ ಫ್ರೆಂಚರಿಂದ ಸ್ವಾತಂತ್ರ್ಯ ಸಿಕ್ಕಿರಲಿಲ್ಲ. ವೆಂಕಟರಾಜ ರಾವ್ ಅವರು 1954 ರ ವಿಮೋಚನಾ ಪಾಂಡಿಚೇರಿ ಚಳವಳಿಯಲ್ಲಿ ಭಾಗವಹಿಸಿದರು. ಅವರು 13 ಜೂನ್ 1954 ರಿಂದ 1 ನವೆಂಬರ್ 1954 ರವರೆಗೆ ಯಾನಂನಲ್ಲಿ ಸ್ಥಾಪಿಸಲಾದ ತಾತ್ಕಾಲಿಕ ಸರ್ಕಾರದ ಸದಸ್ಯರಾಗಿದ್ದರು. ವಿಮೋಚನಾ ಚಳವಳಿಯಲ್ಲಿ ಅವರ ಪಾತ್ರಕ್ಕಾಗಿ ಅವರಿಗೆ ರಾಜ್ಯ ಪ್ರಶಸ್ತಿಯನ್ನು ನೀಡಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!