ದಿನಭವಿಷ್ಯ | ಶ್ರೀರಾಮನವಮಿಯ ಶುಭ ದಿನದಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ ತಿಳಿದುಕೊಳ್ಳಿ

ಮೇಷ
ಕಷ್ಟದಿಂದಲೇ ದಿನವು ಆರಂಭಗೊಂಡರೂ ದಿನ ಸರಿದಂತೆ ಎಲ್ಲವೂ ಸುಸೂತ್ರವಾಗುವುದು. ನಿಮ್ಮ ಭಾವನೆಗಳನ್ನು ಆಪ್ತರ ಜತೆ ಹಂಚಿಕೊಳ್ಳಲು ಸಕಾಲ.

ವೃಷಭ
ಪ್ರಮುಖ ವಿಷಯದಲ್ಲಿ ಕಠಿಣ ನಿರ್ಧಾರ ತಾಳಲು ಹಿಂಜರಿಕೆ ಬೇಡ. ನಿಮಗೆ ಅದರಿಂದ ಒಳಿತೇ ಆಗಲಿದೆ. ಕೌಟುಂಬಿಕ ಬೇಡಿಕೆಗಳನ್ನು ಈಡೇರಿಸಬೇಕು.

ಮಿಥುನ
ಕೆಲಸದಲ್ಲಿ ಹೆಚ್ಚುವರಿ ಹೊಣೆಗಾರಿಕೆ ವಹಿಸಬೇಕು. ಆರ್ಥಿಕವಾಗಿ ನಿರಾಳತೆ ತರುವ ಬೆಳವಣಿಗೆ. ಆರೋಗ್ಯ ಸಮಸ್ಯೆ ನಿವಾರಣೆ.

ಕಟಕ
ಕೌಟುಂಬಿಕವಾಗಿ ಭಿನ್ನಾಭಿಪ್ರಾಯ ಉಂಟಾಗಬಹುದು. ಆರ್ಥಿಕವಾಗಿ ಉತ್ತಮ ಪ್ರಗತಿ. ಧನಲಾಭವಾಗಲಿದೆ. ವೃತ್ತಿಯಲ್ಲಿ ಉನ್ನತಿ.

ಸಿಂಹ
ಹೆಚ್ಚು ಕೆಲಸ. ಹೆಚ್ಚು ಒತ್ತಡ. ಮಾನಸಿಕವಾಗಿಯೂ ಅಭದ್ರತೆಯ ಭಾವನೆ. ಆರ್ಥಿಕ ಸಂಕಷ್ಟ ಹೆಚ್ಚಳ. ಒಟ್ಟಾರೆಯಾಗಿ ಇಂದು ನಿಮ್ಮ ದಿನವಲ್ಲ.

ಕನ್ಯಾ
ಉತ್ಸಾಹದ ದಿನ. ಬಾಕಿ ಇರುವ ಕಾರ್ಯ ಗಳನ್ನೆಲ್ಲ ಪೂರೈಸುವಿರಿ. ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ಆರೋಗ್ಯ ಸಮಸ್ಯೆ ಸುಧಾರಿಸುವುದು.

ತುಲಾ
ನಿಮ್ಮ ಆತ್ಮವಿಶ್ವಾಸವು ಎಂತಹ ಕಠಿಣ ಕೆಲಸವನ್ನು ಪೂರೈಸು ವಂತೆ ಮಾಡುವುದು. ಇತರರು ನಿಮ್ಮಿಂದ ಮಾರ್ಗದರ್ಶನ ಕೋರುತ್ತಾರೆ.

ವೃಶ್ಚಿಕ
ಇತರರೊಂದಿಗೆ ಹೊಂದಾಣಿಕೆಯಿಂದ ವರ್ತಿಸಿ. ದುಡುಕಿನ ವರ್ತನೆ ಅಥವಾ ಕಟು ಮಾತು ಸಂಬಂಧ ಕೆಡಿಸಬಹುದು. ದೈಹಿಕ ಶ್ರಮ ಅಕ.

ಧನು
ಹಣಕಾಸು ವಿಚಾರದಲ್ಲಿ ಎಚ್ಚರದಿಂದ ವ್ಯವಹರಿಸಿ. ಇಲ್ಲವಾ ದರೆ ನಿಮಗೇ ನಷ್ಟ. ದೈಹಿಕ ನೋವುಗಳು ಕಾಡಬಹುದು. ವಿರಾಮ ಒಳ್ಳೆಯದು.

ಮಕರ
ಉದ್ಯೋಗದಲ್ಲಿ ಒತ್ತಡ ಹೆಚ್ಚು. ದೊಡ್ಡ ಗುರಿ ಸಾಸಬೇಕಾಗುವುದು. ಹಣಕಾಸು ಕೊರತೆ ಎದುರಿಸುವಿರಿ. ಕೌಟುಂಬಿಕ ಹೊಣೆಗಾರಿಕೆ ಹೆಚ್ಚಳ.

ಕುಂಭ
ಕೌಟುಂಬಿಕ ಶಾಂತಿ ಕದಡುವ ಬೆಳವಣಿಗೆ. ಕೆಲಸದಲ್ಲಿ ಪ್ರಮಾದ
ಗಳು ಸಂಭವಿಸಬ ಹುದು. ಶೇರು ವ್ಯವಹಾರದಲ್ಲಿ ನಷ್ಟ ಉಂಟಾದೀತು.

ಮೀನ
ಆರ್ಥಿಕ ಪ್ರಗತಿ. ಉದ್ಯೋಗದಲ್ಲಿ ಅನಿಶ್ಚಿತತೆ ಕೊನೆಗೊಳ್ಳಲಿದೆ. ಭಾವನಾತ್ಮಕ ಏರುಪೇರು ಅನುಭವಿಸುವಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!