ದಿನಭವಿಷ್ಯ|ಹೇಗಿದೆ ಇಂದಿನ ನಿಮ್ಮ ರಾಶಿಫಲ…

ಮೇಷ
ಇಂದು ನಿಮ್ಮ ಸಂವಹನ  ಸಾಮರ್ಥ್ಯದಿಂದಲೇ ಕೆಲಸ ಸಾಸುವಿರಿ. ಎಲ್ಲರೊಂದಿಗೆ ಉತ್ತಮವಾಗಿ ಮಾತನಾಡುವ ನಿಮ್ಮ ಕಲೆ ನೆರವಿಗೆ ಬರಲಿದೆ.

ವೃಷಭ
ಸಮಸ್ಯೆ , ಕಷ್ಟಗಳು ಕಾಡಿದರೂ ಎದೆಗುಂದದಿರಿ. ಅದನ್ನು ಎದುರಿಸುವ ಧೈರ್ಯ ತೋರಿ. ದಿನದಂತ್ಯಕ್ಕೆ ಎಲ್ಲವೂ ನಿಮ್ಮ ಪರವಾಗಿ ಆಗುವುದು.

ಮಿಥುನ
ನಿಮ್ಮ ಖಾಸಗಿ ವಸ್ತುಗಳ ಬಗ್ಗೆ ಅತಿಯಾದ ಮೋಹ ತೋರುವಿರಿ. ನಿಮ್ಮ ಆಪ್ತರ ಜತೆಗೆ ಇತರರ ಗೆಳೆತನ ಸಹಿಸಲಾರಿರಿ. ಅಸೂಯೆ ನಿಮ್ಮಲ್ಲಿ ಮೊಳೆಯಬಹುದು.

ಕಟಕ
ಹಿರಿಯರಿಂದ ನಿಮಗೆ ಇಂದು ಲಾಭವಿದೆ. ಅವರ ಮಾತು ಕೇಳಿರಿ. ಕಾನೂನು ಸಂಘರ್ಷದಲ್ಲಿ ತೊಡಗಿದ್ದರೆ ಇಂದು ಹಿನ್ನಡೆ ಸಂಭವ.

ಸಿಂಹ
ಯಾವುದೇ ವಿಚಾರದಲ್ಲಿ ಅತುರದಿಂದ ವರ್ತಿಸುವುದು ಸಲ್ಲದು. ಅದು ಹಿನ್ನಡೆಯನ್ನೆ ಉಂಟು ಮಾಡುವುದು. ಸರಿಯಾಗಿ ಯೋಚಿಸಿ ಕಾರ್ಯವೆಸಗಿ.

ಕನ್ಯಾ
ನಿಮ್ಮ ಮಹತ್ವಾಕಾಂಕ್ಷೆ ಈಡೇರುವ ಸಂಕೇತ ತೋರುವುದು. ಅದಕ್ಕೆ ಪೂರಕವಾದ ಕಾರ್ಯ ಮಾಡಿರಿ. ನಿಮ್ಮ ಸಾಧನೆ ಇತರರಿಂದ ಮೆಚ್ಚುಗೆ ಪಡೆಯುವುದು.

ತುಲಾ
ಆತ್ಮೀಯರೊಬ್ಬರ ಆರೋಗ್ಯ ಸ್ಥಿತಿ ಚಿಂತೆಗೆ ಕಾರಣವಾದೀತು. ಆದರೆ ಬಳಿಕ ಈ ಚಿಂತೆ ಪರಿಹಾರ ಕಾಣುವುದು. ಖರ್ಚುವೆಚ್ಚಗಳು ಇಂದು ಅಕ.

ವೃಶ್ಚಿಕ
ವಿವೇಕಕ್ಕಿಂತಲೂ ಭಾವನೆಗೆ ಇಂದು ಹೆಚ್ಚು ಆದ್ಯತೆ ಕೊಡುವಿರಿ. ಇದರಿಂದ ಮನಸ್ಸಿಗೆ ನೋವು ಉಂಟಾದೀತು. ಆಪ್ತರ ವರ್ತನೆಯಿಂದ ಬೇಸರ ಸಂಭವ.

ಧನು
ಯಾವುದೇ ಕಾರ್ಯ ದಲ್ಲಿ ಇಂದು ನಿಮಗೆ ಗೆಲುವು ನಿಶ್ಚಿತ. ವಿರೋಧಗಳು ನಿಮ್ಮನ್ನು ಕಾಡಲಾರವು. ಆರ್ಥಿಕವಾಗಿ ಲಾಭ. ಕೌಟುಂಬಿಕ ನೆಮ್ಮದಿ.

ಮಕರ
ನಿಮ್ಮ ಉತ್ತಮ ಕಾರ್ಯದಿಂದ ನಿಮ್ಮ ಸುತ್ತಲಿನ ಜನರ ಮೆಚ್ಚುಗೆ ಪಡೆಯುವಿರಿ. ಹಣಕಾಸು ಲಾಭ ಉಂಟಾದೀತು. ಆರೋಗ್ಯ ಸುಧಾರಣೆ.

ಕುಂಭ
ಭಾವನೆ ಮತ್ತು ತರ್ಕದ ಮಧ್ಯೆ ಸರಿಯಾದ ಸಮತೋಲನ ಕಂಡುಕೊಳ್ಳುವಿರಿ. ಹಾಗಾಗಿ ಭಾವನಾತ್ಮಕ ಏರುಪೇರುಗಳನ್ನು ನಿಭಾಯಿಸುವಿರಿ.

ಮೀನ
ವೃತ್ತಿಯಲ್ಲಿ ಉನ್ನತಿ. ನಿಮ್ಮ ಸಾಮರ್ಥ್ಯದ ಫಲ ಸಿಗುವುದು. ಕುಟುಂಬದಲ್ಲಿ ವಾಗ್ವಾದ ಉಂಟಾದರೂ ಅದು ಉಲ್ಬಣಕ್ಕೆ ಹೋಗದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!