ದಿನಭವಿಷ್ಯ | ಈ ರಾಶಿಯವರಿಗಿಂದು ವೃತ್ತಿಯಲ್ಲಿ ಯಶಸ್ಸು, ಎಲ್ಲಾ ಕಾರ್ಯಗಳು ಸುಲಲಿತ!

0
324
ದಿನ ಭವಿಷ್ಯ: ಕುಟುಂಬ ಸಮಸ್ಯೆಯ ಪರಿಹಾರದ ಬಗ್ಗೆ ಹೆಚ್ಚು ಗಮನ ಕೊಡಿ

ಮೇಷ
ಮಾತು ಹಿತಮಿತ ಆಗಿರಲಿ. ಇಲ್ಲವಾದರೆ ಅನವಶ್ಯ ವಿವಾದಕ್ಕೆ ಸಿಲುಕುವಿರಿ. ವದಂತಿ ಹರಡದಿರಿ. ಅದು ನಿಮಗೇ ಪ್ರತಿಕೂಲ ಆಗಬಹುದು.

ವೃಷಭ
ಕುಟುಂಬ ಸದಸ್ಯರ ಜತೆ ಹೆಚ್ಚು ಕಾಲ ಕಳೆಯುವ ಅವಕಾಶ. ಅವರ ಸಂತೋಷದಲ್ಲಿ ನೆಮ್ಮದಿ ಕಾಣುವಿರಿ. ದೂರ ಪ್ರಯಾಣದಲ್ಲಿ ಅಡ್ಡಿ ಬಾಧಿಸಬಹುದು.

ಮಿಥುನ
ಹೊಸ ಯೋಜನೆಗಳು ಹೊಳೆಯಬಹುದು. ಅದನ್ನು ಸರಿಯಾಗಿ ಅನುಷ್ಠಾನಿಸಿ. ಅನುಭವಿಗಳ ಸಲಹೆ ಪಡೆಯಿರಿ. ಅವಸರದ ತೀರ್ಮಾನ ಬೇಡ.

ಕಟಕ
ಹಣದ ವಿಚಾರದಲ್ಲಿ ನಿಮಗಿಂದು ಯಶಸ್ಸು ಕಾದಿದೆ. ಉಳಿದಂತೆ ಸಾಮಾಜಿಕ ಬದುಕಿನಲ್ಲಿ ನಿರಾಶೆ. ಆತ್ಮೀಯರಿಂದ ಸರಿಯಾದ ಸ್ಪಂದನೆ ದೊರಕದೆ ಬೇಸರ.

ಸಿಂಹ
ವೃತ್ತಿಯಲ್ಲಿ ಯಶಸ್ಸು. ನಿಮ್ಮ ಕಾರ್ಯವು ಸುಲಲಿತವಾಗಿ ಸಾಗುವುದು. ಇತರರೂ ನಿಮ್ಮಿಂದ ಪ್ರೇರಣೆ ಪಡೆಯುವರು. ಕೌಟುಂಬಿಕ ಶಾಂತಿ.

ಕನ್ಯಾ
ಕೌಟುಂಬಿಕ ವಿಚಾರಗಳು ಇಂದು ಆದ್ಯತೆ ಪಡೆಯುತ್ತವೆ. ಕುಟುಂಬ ಸದಸ್ಯ ರೊಬ್ಬರು ಮನೆಯ ಶಾಂತಿ ಕದಡಬಹುದು. ಸಹನೆ ಕಾಯ್ದುಕೊಳ್ಳಿ.

ತುಲಾ
ಆರ್ಥಿಕ ಒತ್ತಡ ಕಾಡುತ್ತದೆ. ಖರೀದಿಯ ಹುಮ್ಮಸ್ಸಿದ್ದರೂ ಹಣದ ಕೊರತೆ ಕಾಡಬಹುದು. ನಿಮ್ಮ ಮಿತಿಗಿಂತ ಹೆಚ್ಚು ವೆಚ್ಚ ಮಾಡಲು ಹೋಗದಿರಿ.

ವೃಶ್ಚಿಕ
ಭಾವುಕ ಸನ್ನಿವೇಶ ಎದುರಿಸುವಿರಿ. ನಿಮಗೆ ಅಹಿತಕರವಾದ ಬೆಳವಣಿಗೆ ನಿಮ್ಮ ಮನಸ್ಸನ್ನು ಕೆದಕುತ್ತದೆ. ವೃಥಾ ವಾಗ್ವಾದಕ್ಕೆ ಇಳಿಯದಿರಿ.

ಧನು
ಆಪ್ತರೊಬ್ಬರ ನಡೆನುಡಿ ನಿಮ್ಮಲ್ಲಿ ತಲ್ಲಣಕ್ಕೆ ಕಾರಣವಾದೀತು. ಅವರನ್ನು ತಹಬಂದಿಗೆ ತರುವ ಪ್ರಯತ್ನ ಸಫಲವಾಗಲಾರದು. ಸಂಯಮವಿರಲಿ.

ಮಕರ
ವೈಯಕ್ತಿಕ ಬದುಕಿನಲ್ಲಿ ದಿಟ್ಟ ನಿರ್ಧಾರ ತಾಳಬೇಕಾದ ಪ್ರಸಂಗ ಒದಗುವುದು. ಈಗ ಕಹಿಯೆನಿಸಿದರೂ ದೀರ್ಘಾವಧಿಯಲ್ಲಿ ಅದು ಒಳಿತು ತರಲಿದೆ.

ಕುಂಭ
ಆಪ್ತರಿಂದಲೇ ಇಂದು ನೀವು ಬೇಸರ ಪಡುವ ಬೆಳವಣಿಗೆ ಉಂಟಾದೀತು. ಅದಕ್ಕೆ ಪ್ರತಿಕ್ರಿಯೆ ತೋರುವಾಗ ಸಂಯಮ ವಹಿಸಿ.  ಸಂಬಂಧ ಕೆಡಿಸದಿರಿ.

ಮೀನ
ವೃತ್ತಿಯಲ್ಲಿ ನಿಮ್ಮ ಇಚ್ಛೆಯ ಬೆಳವಣಿಗೆ ಸಂಭವಿಸುವುದು. ಮನೆಯಲ್ಲಿ ಆತ್ಮೀಯರ ಸಂಗದಲ್ಲಿ ಸಂತೋಷ. ಆರ್ಥಿಕ ಪರಿಸ್ಥಿತಿ ಸುಧಾರಣೆ.

LEAVE A REPLY

Please enter your comment!
Please enter your name here