ದಿನಭವಿಷ್ಯ | ಭಾನುವಾರದ ಜಾತಕ ಫಲಗಳು ಹೀಗಿವೆ…

ಮೇಷ
ಸಾಮಾಜಿಕ ಕಾರ್ಯ, ಇತರರಿಗೆ ನೆರವು ನೀಡುವುದರಲ್ಲೇ ವ್ಯಸ್ತರಾಗುವಿರಿ. ಇದರ ಮಧ್ಯೆಯೇ ನಿಮ್ಮ ಹಿತಾಸಕ್ತಿ ಕಡೆಗೂ ಗಮನ ಕೊಡಿ.

ವೃಷಭ
ಅಲ್ಪಾವ ಗುರಿ ಸಾಸುವಿರಿ. ಆದರೆ ದೀರ್ಘಾವ ಗುರಿ ಸಾಸುವಲ್ಲಿ ತೊಡಕು ಮೂಡಬಹುದು. ಕೌಟುಂಬಿಕ ಒತ್ತಡ ಹೆಚ್ಚುವುದು.

ಮಿಥುನ
ಕೆಲವು ಪ್ರಮುಖ ವಿಚಾರಗಳನ್ನು ಇತರರ ಜತೆ ಸಮಾಲೋಚನೆ ಮಾಡಬೇಕಾದ ಪ್ರಸಂಗ ಬರುವುದು. ನಿಲುವಿನಲ್ಲಿ ಹೊಂದಾಣಿಕೆ ಮಾಡಲು ತಯಾರಾಗಿರಿ.

ಕಟಕ
ಪ್ರೀತಿಪಾತ್ರರ ಬಗ್ಗೆ ಅತೀವ ಕಾಳಜಿ ವಹಿಸುವಿರಿ. ವಿವೇಕಕ್ಕಿಂತಲೂ ಹೃದಯದ ಭಾವನೆಗೆ ಹೆಚ್ಚು ಆದ್ಯತೆ ಕೊಡುವಿರಿ.

ಸಿಂಹ
ಮಿಶ್ರಫಲದ ದಿನ. ಕೌಟುಂಬಿಕ ವ್ಯವಹಾರ ಬೇಸರ ತರಿಸಬಹುದು. ಆದರೆ ವೃತ್ತಿಗೆ ಸಂಬಂಧಿಸಿ ನಿಮಗೆ ಪೂರಕವಾದ ಬೆಳವಣಿಗೆ.

ಕನ್ಯಾ
ಹಣದ ವಿಚಾರದಲ್ಲಿ ಹೆಚ್ಚು ವಿವೇಕದಿಂದ ನಡಕೊಳ್ಳಿ. ದುಂದುವೆಚ್ಚ ಅಥವಾ ಸಾಲ ನೀಡುವ ಕುರಿತಂತೆ ಎಚ್ಚರ ವಹಿಸಿ. ಕುಟುಂಬಸ್ಥರಿಂದ ಸಹಕಾರ.

ತುಲಾ
ನಿಮ್ಮ ಕಾರ್ಯಕ್ಕೆ ಉತ್ತಮ ಫಲ ದೊರಕುವುದು. ಅಡ್ಡಿಗಳು ನಿವಾರಣೆ. ಕೌಟುಂಬಿಕ ಬಿಕ್ಕಟ್ಟು ಪರಿಹಾರ, ಎಲ್ಲರಿಂದ ಸಹಕಾರ.

ವೃಶ್ಚಿಕ
ಬಂಧುಗಳನ್ನು ಭೇಟಿಯಾಗುವ ಅವಕಾಶ. ಕೆಲವರ ವರ್ತನೆ ಅಸಹನೀಯ ಎನಿಸಿದರೂ ತಾಳ್ಮೆಯಿಂದ ವರ್ತಿಸಿ. ವಾಗ್ವಾದಕ್ಕೆ ಆಸ್ಪದ ಕೊಡದಿರಿ.

ಧನು
ಬೆಳಗಿನಿಂದಲೇ ಉದಾಸೀನತೆ ಕಾಡ ಬಹುದು. ನಿಮ್ಮ ಕಾರ್ಯವನ್ನು ಇತರರಿಗೆ ವಹಿಸ ಬೇಕಾದೀತು. ಅದಕ್ಕೆ ಸಮರ್ಥರನ್ನೆ ಆಯ್ಕೆ ಮಾಡಿಕೊಳ್ಳಿ.

ಮಕರ
ವ್ಯವಹಾರ ವ್ಯಾಪ್ತಿ ವಿಸ್ತರಿಸುವ ಉದ್ದೇಶ ನಿಮ್ಮದು. ಆದರೆ ನಿಮ್ಮಲ್ಲಿ ಸೂಕ್ತ ಯೋಜನೆಯಿಲ್ಲ. ಅವಸರದ ತೀರ್ಮಾನ ತಾಳದಿರಿ. ಯೋಚಿಸಿ ಮುಂದುವರಿಯಿರಿ.

ಕುಂಭ
ಹಳೆಯ ಘಟನೆಗಳ ಪರಿಣಾಮ ಈಗ ತೋರಿ ಬರಬಹುದು. ಅದರಿಂದ ಒಂದೋ ಒಳಿತಾದೀತು ಅಥವಾ ಕೆಟ್ಟದಾದೀತು. ಸೂಕ್ತವಾಗಿ ನಡಕೊಳ್ಳಿ.

ಮೀನ
ಮಿಶ್ರಭಾವನೆ. ಒಂದೆಡೆಯಿಂದ ಮಾನಸಿಕ ಒತ್ತಡ, ಕಾಡುವ ನೆನಪು. ಜತೆಗೇ ಬಂದದ್ದನ್ನು ಬಂದಂತೇ ಸ್ವೀಕರಿಸುವ ನಿರ್ಲಿಪ್ತತೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!