ದಿನಭವಿಷ್ಯ| ಈ ರಾಶಿಯವರಿಗೆ ಗ್ರಹಗತಿಗಳು ಪೂರಕ, ಎಲ್ಲವೂ ನೀವೆಣಿಸಿದಂತೆ ಸಾಗಲಿದೆ ಈ ದಿನ

ಮೇಷ
ನಿಮ್ಮ ಪಾಲಿಗೆ ಸುಂದರ ದಿನ. ಆತ್ಮೀಯ ಭೇಟಿ. ಹಳೆ ಸ್ನೇಹಿತರ ಒಡನಾಟ. ಮನೆಯಲ್ಲಿ ಇಷ್ಟಮಿತ್ರರ ಜತೆ ಕಾಲಕ್ಷೇಪ. ವೃತ್ತಿಯ ಒತ್ತಡ ಬಾರದು.

ವೃಷಭ
ವೃತ್ತಿಯಲ್ಲಿ ಉನ್ನತಿ. ಹಣಕಾಸು ಲಾಭ ಕೂಡ ಉಂಟಾಗಲಿದೆ. ನಿಮ್ಮ ಕೆಲಸಕ್ಕಾಗಿ ಇತರರನ್ನು ಅವಲಂಬಿಸಬೇಡಿ. ಅವರು ನಿಮ್ಮ ಕೆಲಸ ಕೆಡಿಸಿಯಾರು.

ಮಿಥುನ
ಇತರರ ಜತೆ ಇಂದು ಉತ್ತಮ ಹೊಂದಾಣಿಕೆ ಸಾಸುತ್ತೀರಿ. ಇದರಿಂದಾಗಿ ಕೆಲಸಗಳೆಲ್ಲ ಸುಗಮ. ಕೌಟುಂಬಿಕ ಬಿಕ್ಕಟ್ಟು ಪರಿಹಾರ.

ಕಟಕ
ದಿನದ ಆರಂಭದಲ್ಲಿ ಹಿನ್ನಡೆ ಉಂಟಾದೀತು. ಬೇಸರದ ಪ್ರಸಂಗ ಸಂಭವಿಸೀತು. ಆದರೆ ನಂತರ ಎಲ್ಲವೂ ಸುಸೂತ್ರವಾಗಿ ನಡೆಯುವುದು.

ಸಿಂಹ
ಗ್ರಹಗಳು ಇಂದು ನಿಮಗೆ ಪೂರಕವಾಗಿವೆ. ಎಲ್ಲವೂ ನೀವೆಣಿಸಿದಂತೆ ನಡೆಯುವುದು. ಇಂದಿನ ದಿನವನ್ನು ಸದುಪಯೋಗ ಮಾಡಿಕೊಳ್ಳಿ.

ಕನ್ಯಾ
ಆರೋಗ್ಯದ ವಿಷಯ ಬಂದಾಗ ಮೀನಮೇಷ ಎಣಿಸಬೇಡಿ. ಅಗತ್ಯವೆಂದು ಕಂಡರೆ ಕೂಡಲೇ ವೈದ್ಯರನ್ನು ಕಾಣಿರಿ. ಕೌಟುಂಬಿಕ ಒತ್ತಡ ಹೆಚ್ಚು.

ತುಲಾ
ಮುಂಜಾನೆ ಅವಯಲ್ಲಿ ಒತ್ತಡದ ಕೆಲಸ. ಅಪರಾಹ್ನ ವಿರಾಮ ಪಡೆಯುವಿರಿ. ಸಂಜೆ ವೇಳೆಗೆ ಆತ್ಮೀಯರ ಸಂಗಡ ಉಲ್ಲಾಸ ಅನುಭವಿಸುವಿರಿ.

ವೃಶ್ಚಿಕ
ಹೊಸ ಉದ್ಯೋಗ ಅಥವಾ ವಹಿವಾಟು ಆರಂಭಿಸಲು ಕಾಲ ಸುಸೂತ್ರವಾಗಿಲ್ಲ. ಆರ್ಥಿಕ ಮುಗ್ಗಟ್ಟು. ಕುಟುಂಬಸ್ಥರಿಂದ  ಅಸಹಕಾರ.

ಧನು
ಸಂಘರ್ಷದ ಸ್ಥಿತಿ ಏರ್ಪಡಬಹುದು. ನೀವು ಸಹನೆ ಕಾಯ್ದುಕೊಳ್ಳಬೇಕು. ತಪ್ಪು ಯಾರದೆಂದು ಹುಡುಕುವ ಕಾಲ ಇದಲ್ಲ.

ಮಕರ
ವಹಿವಾಟು, ಉದ್ಯೋಗಕ್ಕೆ ಸಂಬಂಧಿಸಿ ಗೊಂದಲದ ಮನಸ್ಥಿತಿ. ಸರಿಯಾದ ನಿರ್ಧಾರ ತಾಳಲಾಗದೆ ದ್ವಂದ್ವ. ಇತರರ ಸಲಹೆ ಪಡೆಯುವುದೊಳಿತು.

ಕುಂಭ
ಅನಿರೀಕ್ಷಿತವಾದುದು ಸಂಭವಿಸಬಹುದು. ನಿಮ್ಮ ಪ್ರಗತಿಗೆ ಹಠಾತ್ ಅಡ್ಡಿ ಬರಬಹುದು. ಅವಸರದಿಂದ ಪ್ರತಿಕ್ರಿಯಿಸಬೇಡಿ. ವಿವೇಚನೆಯಿರಲಿ.

ಮೀನ
ಮನೆಯಲ್ಲಿ ಬಾಕಿ ಉಳಿದಿರುವ ಕಾರ್ಯಗಳನ್ನು ಇಂದು ಪೂರೈಸುವಿರಿ. ಇದಕ್ಕೆ ಎಲ್ಲರ ಸಹಕಾರ ಪಡೆಯುವುದು ಅವಶ್ಯ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!