ಉಕ್ರೇನ್ ಬಗ್ಗೆ ಭಾರತದ ನಿಲುವಿಗೆ ತಕರಾರಿಲ್ಲ ಅಂತು ಕ್ವಾಡ್- ಇದು ಜಾಗತಿಕ ರಾಜಕಾರಣದಲ್ಲಿ ಭಾರತದ ಶಕ್ತಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಭಾರತವು ವಿದೇಶ ನೀತಿ ವಿಚಾರದಲ್ಲಿ ತನ್ನದೇ ನಿಲುವಿಗೆ ಅಂಟಿಕೊಂಡಿರುವುದನ್ನು ಜಗತ್ತು ಗೌರವಿಸಲೇಬೇಕಾಗಿ ಬಂದಿದೆ ಎಂಬುದನ್ನು ನಿರೂಪಿಸುವ ವಿದ್ಯಮಾನವೊಂದು ನಡೆದಿದೆ.

ಭಾರತಕ್ಕೆ ಆಸ್ಟ್ರೇಲಿಯದ ರಾಯಭಾರಿಯಾಗಿರುವ ಬ್ಯಾರಿ ಒ ಫರ್ರೆಲ್, “ಕ್ವಾಡ್ ದೇಶಗಳು ರಷ್ಯ ವಿಚಾರದಲ್ಲಿ ಭಾರತದ ನಿಲುವನ್ನು ಅರ್ಥಮಾಡಿಕೊಂಡಿವೆ.” ಎಂದಿದ್ದಾರೆ.

ಕ್ವಾಡ್ ದೇಶಗಳೆಂದರೆ ಇಂಡೊ-ಪೆಸಿಫಿಕ್ ಭಾಗದಲ್ಲಿ ರಕ್ಷಣೆ ಮತ್ತು ಕಾರ್ಯತಂತ್ರದ ದೃಷ್ಟಿಯಿಂದ ಒಂದಾಗಿರುವ ಅಮೆರಿಕ, ಆಸ್ಟ್ರೇಲಿಯ, ಜಪಾನ್ ಮತ್ತು ಭಾರತ. ಈ ಗುಂಪಿನ ಇತರ ಎಲ್ಲ ದೇಶಗಳು ರಷ್ಯ ವಿರುದ್ಧ ನಿಲುವು ತೆಗೆದುಕೊಂಡಿದ್ದರೆ ಭಾರತ ಮಾತ್ರ ತಟಸ್ಥ ನಿಲುವು ತಾಳಿತ್ತು. ಇದನ್ನು ಪಾಶ್ಚಾತ್ಯ ಪತ್ರಿಕೆಗಳು ಟೀಕಿಸಿ, ಭಾರತದ ಮೇಲೆ ನಿರ್ಬಂಧ ಹೇರಬೇಕು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದವು. ಆದರೆ ಭಾರತ ಮಾತ್ರ ವಿದೇಶ ವ್ಯವಹಾರಗಳಲ್ಲಿ ತನ್ನ ಹಿತ ಕಾಯ್ದುಕೊಳ್ಳುವ ಗಟ್ಟಿ ನಿಲುವಿಗೆ ಅಂಟಿಕೊಂಡಿತ್ತು. ಇದೀಗ ಬಲಾಢ್ಯ ರಾಷ್ಟ್ರಗಳು ಭಾರತದ ಈ ನಿಲುವನ್ನು ಪುರಸ್ಕರಿಸಿರುವುದು ಜಾಗತಿಕ ರಾಜಕೀಯದಲ್ಲಿ ಭಾರತ ಎಂಥ ಪ್ರಭಾವಿ ಸ್ಥಾನವನ್ನು ಗಳಿಸಿಕೊಂಡಿದೆ ಎಂಬುದಕ್ಕೆ ಸಾಕ್ಷಿ.

“ಕ್ವಾಡ್ ದೇಶಗಳು ಭಾರತದ ನಿಲುವನ್ನು ಅರ್ಥಮಾಡಿಕೊಂಡಿವೆ. ಪ್ರತಿ ದೇಶಕ್ಕೂ ಅದರದ್ದೇ ಆದ ದ್ವಿಪಕ್ಷೀಯ ಸಂಬಂಧವಿರುತ್ತದೆ. ವಿದೇಶ ವ್ಯವಹಾರಗಳ ಸಚಿವಾಲಯದ ಹೇಳಿಕೆ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಉಭಯ ದೇಶಗಳ ನಡುವಿನ ಸಂಘರ್ಷ ಕೊನೆಗೊಳಿಸುವುದಕ್ಕೆ ತಮ್ಮೆಲ್ಲ ಸಂಪರ್ಕವನ್ನು ಬಳಸುತ್ತಿರುವುದೂ ನಿಚ್ಚಳವಾಗಿದೆ” ಎಂದು ಕ್ವಾಡ್ ದೇಶಗಳಲ್ಲಿ ಒಂದಾಗಿರುವ ಆಸ್ಟ್ರೇಲಿಯದ ಕಡೆಯಿಂದ ಹೇಳಿಕೆ ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!