Wednesday, July 6, 2022

Latest Posts

ದಿನ ಭವಿಷ್ಯ | ಈ ರಾಶಿಯವರು ಪ್ರೀತಿ- ಪ್ರಣಯದ ವಿಚಾರದಲ್ಲಿ ಸಮಸ್ಯೆಗೆ ಸಿಲುಕುವಿರಿ, ಎಚ್ಚರವಹಿಸಿ!

ಮೇಷ
ವೃತ್ತಿಯಲ್ಲಿ ಹೊಸ ಅವಕಾಶ ಲಭ್ಯ. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ತಪ್ಪು ಕಲ್ಪನೆಯಿಂದ ಹುಟ್ಟಿಕೊಂಡ ಕೌಟುಂಬಿಕ ಸಮಸ್ಯೆ ನಿವಾರಣೆ.
ವೃಷಭ
ಮನೆ ಮತ್ತು ಕಚೇರಿಯಲ್ಲಿ ಹೊಣೆಗಾರಿಕೆ ಹೆಚ್ಚಳ. ಎಲ್ಲ ಕೆಲಸ ಮುಗಿಸಲು ಸಾಧ್ಯವಾಗದು. ಕೆಲವರ ಅಸಮಾಧಾನಕ್ಕೆ ತುತ್ತಾಗುವಿರಿ.

ಮಿಥುನ

ಖಾಸಗಿ ಬದುಕಿನಲ್ಲಿ ಏರುಪೇರು. ಪ್ರೀತಿಯ ಆಕರ್ಷಣೆಗೆ ತುತ್ತಾಗುವಿರಿ. ಕೆಲವರು ಮುನಿಸಿಕೊಳ್ಳುವ ಸಾಧ್ಯತೆ ಯಿದೆ. ಸಂಧಾನದಿಂದ ಸಮಸ್ಯೆ ಪರಿಹರಿಸಿ.ಕಟಕ
ಉದ್ಯೋಗ ಕ್ಷೇತ್ರದಲ್ಲಿ ಬಾಸ್‌ನ ಅವಕೃಪೆಗೆ ತುತ್ತಾಗುವಿರಿ. ಇತರರ ಕರ್ತವ್ಯಚ್ಯುತಿಯ ಹೊಣೆ ನೀವೇ ಹೊರಬೇಕಾಗುವುದು. ಕೌಟುಂಬಿಕ ಅಸಹಕಾರ.
ಸಿಂಹ

ಖಾಸಗಿ ಬದುಕಿನಲ್ಲಿ ಸಮಸ್ಯೆ. ಮಾನಸಿಕ ಚಿಂತೆಯಿಂದ ದೈಹಿಕವಾಗಿಯೂ ದುಷ್ಪರಿಣಾಮ.  ಪ್ರಯಾಣ ಕಿರಿಕಿರಿ ಸೃಷ್ಟಿಸುತ್ತದೆ.ಕನ್ಯಾ
ಪ್ರೀತಿ, ಪ್ರಣಯದ ಭಾವ ನಿಮ್ಮನ್ನು ಆವರಿಸಬಹುದು. ಇದಕ್ಕಾಗಿ ನಿಮ್ಮ ಹಿತಾಸಕ್ತಿ ಕಡೆಗಣಿಸದಿರಿ. ಸಮಸ್ಯೆಗೆ ಸಿಲುಕುವಿರಿ, ಎಚ್ಚರದಿಂದಿರಿ.

ತುಲಾ
ಮಿತ್ರರೊಂದಿಗೆ ಜಗಳ ಸಂಭವ. ರೇಗದಿರಿ.  ಆರ್ಥಿಕ ವಿಚಾರದಲ್ಲಿ ಒತ್ತಡ ಅನುಭವಿಸುವಿರಿ. ಹಣಕ್ಕಾಗಿ ಇತರರು ಬೇಡಿಕೆ ಇಡುವರು.

ವೃಶ್ಚಿಕ
ಆತ್ಮೀಯ ಸಂಬಂಧ ವೊಂದನ್ನು ಇನ್ನಷ್ಟು ಗಟ್ಟಿಗೊಳಿಸಲು ಯೋಜಿಸಿರಿ. ಕೆಲವರ ವದಂತಿ ನಂಬಿ ಸಂಬಂಧ ಹಾಳು ಮಾಡದಿರಿ.  ಕುಟುಂಬದ ಸಹಕಾರ.

ಧನು
ನಿಮ್ಮ ಮೇಲೆ ಮೊದಲಾಗಿ ವಿಶ್ವಾಸ ಹೆಚ್ಚಿಸಿಕೊಳ್ಳಿ. ನಿಮ್ಮಿಂದ ಆಗದು ಎಂಬ ಅಪನಂಬಿಕೆ ಬಿಡಿ. ಸಣ್ಣ ಆರೋಗ್ಯ ಸಮಸ್ಯೆ ಇಂದು ಕಾಡಬಹುದು.

ಮಕರ
ಕೌಟುಂಬಿಕ ವಿಚಾರದಲ್ಲಿ ಹೊರಗಿನವರ ಸಲಹೆ ಕೇಳದಿರಿ. ಅದರಿಂದ ನಿಮಗೇ ತೊಂದರೆ. ಆಪ್ತರೊಂದಿಗಿನ ಸಮಸ್ಯೆಯನ್ನು ನೀವೇ ಬಗೆಹರಿಸಿಕೊಳ್ಳಿ.

ಕುಂಭ
ಭಾವನಾತ್ಮಕ ಶಿಸ್ತು ಬೆಳೆಸಿಕೊಳ್ಳಿ.  ನಿಮ್ಮ ಭಾವನೆಯನ್ನು ಸುಲಭದಲ್ಲಿ ಬಿಟ್ಟುಕೊಡಬೇಡಿ. ಆಪ್ತರೆನಿಸಿದವರು ದೂರವಾದಾರು.

ಮೀನ
ನಿಮ್ಮ ಕ್ರಿಯಾಶೀಲತೆಯನ್ನು ವ್ಯರ್ಥ ಮಾಡುತ್ತಿದ್ದೀರಿ. ಉದಾಸೀನ ಬಿಟ್ಟು ಕಾರ್ಯವೆಸಗಿ. ಉತ್ತಮ ಸಾಧನೆ ಮಾಡುವ ಅವಕಾಶ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss