ಟೇಕ್‌ ಆಫ್‌ ವೇಳೆ ಅಪಘಾತಕ್ಕೀಡಾದ ವಿಮಾನ: ಗಾಯಗೊಂಡ 25 ಪ್ರಯಾಣಿಕರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಟೇಕ್‌ ಆಫ್‌ ವೇಳೆ ರನ್ ವೇ ಯಲ್ಲಿದ್ದ ವಿಮಾನ ಅಪಘಾತಕ್ಕೀಡಾಗಿದ್ದು 25 ಪ್ರಯಾಣಿಕರು ಗಾಯಗೊಂಡಿದ್ದಾರೆ. ನೈರುತ್ಯ ಚೀನಾದ ಚಾಂಗ್ಕಿಂಗ್ ವಿಮಾಣ ನಿಲ್ದಾಣದಲ್ಲಿ ಘಟನೆ ನಡೆದಿದೆ.

ಟಿಬೇಟ್‌ ಏರ್‌ ಲೈನ್ಸ್‌ ಗೆ ಸೇರಿದ ಪ್ಯಾಸೆಂಜರ್‌ ವಿಮಾನವು ಅಪಘಾತಕ್ಕೀಡಾಗಿದ್ದು 113 ಪ್ರಯಾಣಿಕರನ್ನು ಕೊಂಡೊಯ್ಯುತ್ತಿತ್ತು ಎಂದು ಮೂಲಗಳು ವರದಿ ಮಾಡಿವೆ. ವಿಮಾನದಲ್ಲಿದ್ದ 9 ಮಂದಿ ಸಿಬ್ಬಂದಿಗಳೊಂದಿಗೆ ಎಲ್ಲಾ ಪ್ರಯಾಣಿಕರನ್ನು ರಕ್ಷಿಸಲಾಗಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತಕ್ಕೆ ಕಾರಣವು ತಿಳಿದು ಬಂದಿಲ್ಲ ಈ ಕುರಿತು ತನಿಖೆ ನಡೆಸಲಾಗಿದೆ ಎಂದು ಮೂಲಳು ಹೇಳಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!