ದಿನ ಭವಿಷ್ಯ | ನಿಮ್ಮ ಸಾಮರ್ಥ್ಯ ಇಂದು ಎಲ್ಲರಿಗೂ ಮನದಟ್ಟಾಗಲಿದೆ

ಮೇಷ
ಸವಾಲಿನ ದಿನ. ಕೆಲವಾರು ಸಮಸ್ಯೆ ಬಾಧಿಸಬಹುದು. ಇತರರ ಜತೆ ಎಚ್ಚರದಿಂದ ವ್ಯವಹರಿಸಿ.  ಮಾತಿನ ತಪ್ಪರ್ಥದಿಂದ ಸಂಬಂಧ ಕೆಡಬಹುದು.

ವೃಷಭ
ಕೆಲವು ಸಮಸ್ಯೆಗಳನ್ನು ಎದುರಿಸುವಿರಿ. ಆದರೆ ಅವನ್ನೆಲ್ಲಾ ನಿಭಾಯಿಸಲು ಸಮರ್ಥರಾಗುವಿರಿ. ಆಹಾರ ಸೇವನೆಯಲ್ಲಿ ಎಚ್ಚರ ವಹಿಸಿ.

ಮಿಥುನ
ಮನಸ್ಸಿನಲ್ಲಿ ಕೆಲವು ಗೊಂದಲಗಳು. ನೆಗೆಟಿವ್ ಚಿಂತನೆಗಳು ಕಾಡಬಹುದು. ಮನೆಯಲ್ಲಿ ವಾಗ್ವಾದಕ್ಕೆ ಮುಂದಾಗದಿರಿ. ಸಹನೆ ಕಾಯ್ದುಕೊಳ್ಳಿ.

ಕಟಕ
ಸಣ್ಣ ವಿಷಯಕ್ಕೂ ಅಧಿಕ ಒತ್ತಡ ತಾಳದಿರಿ. ಎಲ್ಲವನ್ನೂ ತಾಳ್ಮೆಯಿಂದ  ಸರಿಪಡಿಸಬಹುದು ಎಂಬುದನ್ನು ಅರಿಯಿರಿ. ಸೂಕ್ತ ಸಹಕಾರವೂ ನಿಮಗೆ ಸಿಗುವುದು.

ಸಿಂಹ
ಇತರರ ಮನೋಭಾವನೆ ಅರಿತು ವ್ಯವಹರಿಸಿರಿ. ಆತುರದಿಂದ ತೀರ್ಮಾನಕ್ಕೆ ಬರಬೇಡಿ. ಸಂಗಾತಿ ಜತೆ ವಾಗ್ವಾದಕ್ಕೆ ಮುಂದಾಗದಿರಿ. ಆರ್ಥಿಕ ಒತ್ತಡ.

ಕನ್ಯಾ
ಏರಿಳಿತಗಳ ದಿನ. ವೃತ್ತಿಯಲ್ಲಿ ನಿಮ್ಮ ಗುರಿ  ಈಡೇರುವುದು. ಆದರೆ ಇದೇವೇಳೆ, ಕೆಲವರ ಮನಸ್ತಾಪ ಕಟ್ಟಿಕೊಳ್ಳುವಿರಿ. ಕೌಟುಂಬಿಕ ಒತ್ತಡ ಅಕ.

ತುಲಾ
ವ್ಯವಹಾರದಲ್ಲಿ ಯಶಸ್ಸು. ನಿಮ್ಮ ಸಾಮರ್ಥ್ಯವನ್ನು ಇತರರು ಗಮನಿಸುವರು. ಧಾರ್ಮಿಕ ವಿಚಾರಗಳು ಹೆಚ್ಚು ಆಸಕ್ತಿ ಕೆರಳಿಸಬಹುದು.

ವೃಶ್ಚಿಕ
ನಿಮ್ಮ ಪ್ರಮುಖ ನಿರ್ಧಾರಗಳು ಹಿತಾಸಕ್ತಿ ಕಾಯಲಾರವು. ಹಾಗಾಗಿ ಯೋಚಿಸಿ ಹೆಜ್ಜೆ ಇಡುವುದು ಲೇಸು. ಆರ್ಥಿಕ ಪರಿಸ್ಥಿತಿಯು ಸುಧಾರಿಸುವುದು.

ಧನು
ಕಾರ್ಯದಲ್ಲಿ ಸಫಲತೆ. ಆಪ್ತರ ಜತೆ ಮಾತನಾಡುವಾಗ ನಿಮ್ಮ ಮಾತು ತಪ್ಪರ್ಥ ಮೂಡಿಸದಂತೆ ಎಚ್ಚರ ವಹಿಸಿ. ಸಂಬಂಧ ಕಾಯ್ದುಕೊಳ್ಳಿ.

ಮಕರ
ಇಂದು ಸಾಧಾರಣ ಯಶಸ್ಸಿನ ದಿನ. ನಿಮ್ಮ ಉದ್ದೇಶ ಸಂಪೂರ್ಣ ಸಾಧಿಸದು. ಹಾಗೆಂದು ನಿರಾಶೆಯೂ ಉಂಟಾಗದು. ಕೌಟುಂಬಿಕ ಸೌಹಾರ್ದ.

ಕುಂಭ
ವೃತ್ತಿ ಮತ್ತು ಖಾಸಗಿ ಬದುಕಿನಲ್ಲಿ ತೃಪ್ತಿಕರ ದಿನ. ಆರ್ಥಿಕವಾಗಿ ನಿಮಗೆ ಪೂರಕ ಬೆಳವಣಿಗೆ. ಕೌಟುಂಬಿಕ ಪರಿಸರ ಉಲ್ಲಾಸದಾಯಕ.

ಮೀನ
ಮನೆ ಮತ್ತು ಕಚೇರಿಯಲ್ಲಿ ಹೆಚ್ಚು ಹೊಣೆಗಾರಿಕೆ. ದಿನವಿಡೀ ಕಾರ್ಯದ ಒತ್ತಡ. ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಕಾಡಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!