ದಿನಭವಿಷ್ಯ | ಈ ರಾಶಿಯವರಿಗೆ ಇಂದು ಧನಲಾಭ…

ಮೇಷ
ಹಲವಾರು ಕೌಟುಂಬಿಕ ವಿಷಯಗಳನ್ನು ಇಂದು ಇತ್ಯರ್ಥಪಡಿಸಲು ಆದ್ಯತೆ ಕೊಡುವಿರಿ. ಇದಕ್ಕೆ ಕುಟುಂಬ ಸದಸ್ಯರ ಸಹಕಾರವೂ ಒದಗುವುದು.

ವೃಷಭ
ಭಾವನಾತ್ಮಕವಾಗಿ ಹೆಚ್ಚು ನಿಯಂತ್ರಣ ಸಾಸಿ. ಸಣ್ಣ ವಿಷಯಗಳಿಗೂ ಉದ್ವಿಗ್ನಗೊಳ್ಳುವುದು ತರವಲ್ಲ. ಇತರರನ್ನು ಅವರ ಮಾತಿನಿಂದಷ್ಟೆ ಅಳೆಯಬೇಡಿ.

ಮಿಥುನ
ಪ್ರತಿಕೂಲ ಪರಿಸ್ಥಿತಿ ಎದುರಿಸುವಿರಿ. ಸ್ವಲ್ಪ ತಾಳ್ಮೆ ತಂದುಕೊಳ್ಳಿ. ಪರಿಸ್ಥಿತಿಯು ತಾನಾಗಿ ತಿಳಿಯಾಗುವುದು. ಮಕ್ಕಳ ಸಂಗದಲ್ಲಿ ಖುಷಿ ಪಡುವಿರಿ.

ಕಟಕ
ನಿಮ್ಮ ಜೀವನ ಉತ್ತಮಪಡಿಸುವುದು ನಿಮ್ಮ ಗುರಿಯಾಗಲಿ. ಅದನ್ನು ಸಾಧಿಸಲು ಪ್ರಯತ್ನಪಡಿ. ಇತರರ ಮೇಲಿನ ಅವಲಂಬನೆ ಕಡಿಮೆ ಮಾಡಿ.

ಸಿಂಹ
ನಿಮ್ಮ ಆಶಾವಾದಿ ಮತ್ತು ಗುಣಾತ್ಮಕ ಸ್ವಭಾವವು ಎಲ್ಲರಿಂದ ಮೆಚ್ಚಲ್ಪಡುವುದು. ನಿಮ್ಮ ಗುರಿಸಾಧನೆಗೂ ಇದು ನೆರವಾಗುವುದು. ಆರ್ಥಿಕ ಲಾಭ.

ಕನ್ಯಾ
ನಿಮಗಾಗಿ ಇತರರು ಬದಲಾಗಬೇಕು ಎಂಬ ಭಾವನೆ ಬಿಡಿ. ನೀವೂ ಹೊಂದಾಣಿಕೆ ಮಾಡಿಕೊಳ್ಳಲು ಕಲಿಯಬೇಕು. ಆರ್ಥಿಕ ಸ್ಥಿರತೆ .

ತುಲಾ
ಕೆಲಸದಲ್ಲಿ ಸಫಲತೆ ಸಾಸಲು ಹೆಚ್ಚು ಶ್ರಮಪಡಬೇಕು. ಉದಾಸೀನತೆ ಬಿಟ್ಟುಬಿಡಿ. ಇಂದಿನ ಕೆಲಸವನ್ನು ಇಂದೇ ಮಾಡಿರಿ.

ವೃಶ್ಚಿಕ
ಆರೋಗ್ಯ ಸಂಬಂ ಸಮಸ್ಯೆಯಿಂದ ನಿರಾಳತೆ ಪಡೆಯುವಿರಿ. ಧಾರ್ಮಿಕ ಕಾರ್ಯ ದಲ್ಲಿ ಹೆಚ್ಚು ಆಸಕ್ತಿ. ಆರ್ಥಿಕ ಲಾಭ. ಕೌಟುಂಬಿಕ ಸಮ್ಮಿಲನ.

ಧನು
ಮನೆಯ ಒಳಹೊರಗಿನ ಕುರಿತಂತೆ ಹೆಚ್ಚು ಆಸ್ಥೆ ವಹಿಸಬೇಕಾದ ಪ್ರಸಂಗ ಒದಗುವುದು. ಆಪ್ತರಿಂದ ನೆರವು. ವಿದ್ಯಾರ್ಥಿಗಳಿಗೆ ಯಶಸ್ಸು.

ಮಕರ
ವೈಯಕ್ತಿಕವಾಗಿ ಯಾರನ್ನೂ ಹಳಿಯಲು ಹೋಗಬೇಡಿ. ಅದು ವಿಪರೀತ ಪರಿಣಾಮಕ್ಕೆ ಕಾರಣವಾದೀತು. ಮಾತು, ನಡೆಯಲ್ಲಿ ಸಂಯಮವಿರಲಿ.

ಕುಂಭ
ಕಾರ್ಯದಲ್ಲಿ ಅಡ್ಡಿಗಳು. ಇದರಿಂದ ಉತ್ಸಾಹಕ್ಕೆ ಕುಂದು. ಮನೆಯಲ್ಲಿನ ವಾತಾವರಣವು ನಿಮಗೆ ನೆರವಾಗುವುದು. ಆಪ್ತರ ಸಂಗದಲ್ಲಿ ಸಂತೋಷ ಕಾಣುವಿರಿ.

ಮೀನ
ಕೆಲವರ ಜತೆ ಸಂಘರ್ಷ ಉಂಟಾದೀತು.  ಆದರೆ ಸಂಘರ್ಷವು ಅತಿರೇಕಕ್ಕೆ ಹೋಗದಂತೆ ನೋಡಿಕೊಳ್ಳಿ. ಸಂಧಾನ ಒಳಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!