Sunday, December 3, 2023

Latest Posts

ದಿನಭವಿಷ್ಯ | ಈ ರಾಶಿಯವರಿಗೆ ಕೆಲದಿನಗಳಿಂದ ಕಾಡುತ್ತಿದ್ದ ಹಣಕಾಸಿನ ಬಿಕ್ಕಟ್ಟು ಇಂದು ಪರಿಹಾರ ಕಾಣಲಿದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಮೇಷ

ಹಳೆಯ ಸ್ನೇಹಿತರನ್ನು ಭೇಟಿಯಾಗುವ ಅವಕಾಶ. ಗತದಿನಗಳ ಮೆಲುಕು. ಕೌಟುಂಬಿಕ ಹೊಣೆಗಾರಿಕೆಗಳು ಮಾನಸಿಕ ಒತ್ತಡ ಹೇರುತ್ತವೆ.

ವೃಷಭ
ನಿಮ್ಮ ಮನದಾಳದ ಭಾವವನ್ನು ಆಪ್ತರೊಂದಿಗೆ ಹಂಚಿಕೊಳ್ಳುವ ಪ್ರಸಂಗ ಉದ್ಭವಿಸಬಹುದು. ಅದರಿಂದ ಮನಸ್ಸಿಗೆ ನಿರಾಳತೆ.

ಮಿಥುನ
ಲಾಭ -ನಷ್ಟಗಳಿಲ್ಲದ ಸಮತೋಲಿತ ದಿನ. ಕುಟುಂಬ ಸದಸ್ಯರು ನಿಮ್ಮಿಂದ ಕೆಲವನ್ನು ನಿರೀಕ್ಷಿಸುತ್ತಾರೆ.  ಅವರ ಬೇಡಿಕೆಗಳಿಗೆ ಸ್ಪಂದಿಸುವುದು ಒಳಿತು.

ಕಟಕ
ಕೆಲವು ವಿಚಾರಗಳಲ್ಲಿ ಇಂದು ನಿಮಗೆ ನಿರಾಶೆ ಕಾದಿದೆ. ಹಣಕಾಸು, ಕೌಟುಂಬಿಕ ವ್ಯವಹಾರ ಮತ್ತು ಸಂಬಂಧದಲ್ಲಿ ಹಿನ್ನಡೆ ಅನುಭವಿಸುವಿರಿ. ಸಹನೆಯಿರಲಿ.

ಸಿಂಹ
ಗತಕಾಲದ ಆಪ್ತರು ಭೇಟಿಯಾಗಬಹುದು. ಅವರ ಸಂಗದಲ್ಲಿ ಸಂತೋಷ ಪಡುವಿರಿ. ಯುವಕರಿಗೆ ಪ್ರೇಮದ ಆಕರ್ಷಣೆ. ಅಧ್ಯಯನ ಕಡೆಗಣಿಸದಿರಿ.

ಕನ್ಯಾ
ಆರ್ಥಿಕ ಪರಿಸ್ಥಿತಿ ಚಿಂತೆ ತರುತ್ತದೆ. ಸಣ್ಣಪುಟ್ಟ ವಿಚಾರಗಳು ನಿಮ್ಮ ಸಂತೋಷ ಹಾಳುಗೆಡವುತ್ತವೆ. ಏನಿದ್ದರೂ ನಿಮ್ಮ ವಿಶ್ವಾಸ ಕುಂದದಿರಲಿ.

ತುಲಾ
ನಿಮ್ಮ ಕಾರ್ಯವೈಖರಿ ಕೆಲವರಿಂದ  ಪ್ರಶ್ನಿಸಲ್ಪಡುವುದು. ಅದನ್ನು ನಿರ್ಲಕ್ಷಿಸದಿರಿ. ಅದರ ಕುರಿತು ಗಮನ ಹರಿಸಿ ಕ್ರಮ ತೆಗೆದುಕೊಳ್ಳಿ.

ವೃಶ್ಚಿಕ
ಬಾಹ್ಯ ಸೌಂದರ್ಯಕ್ಕೆ ನೀವಿಂದು ವಿಶೇಷ  ಗಮನ ಕೊಡುವಿರಿ. ಯಾರನ್ನೋ ಮೆಚ್ಚಿಸುವ ಪ್ರಯತ್ನ ನಿಮ್ಮದು. ಕೆಲವರ ಭಾವನೆಗೆ ನೋವುಂಟು ಮಾಡದಿರಿ.

ಧನು
ಹಣಕಾಸು ವಿಚಾರಕ್ಕೆ ಸಂಬಂಧಿಸಿ  ಹೆಚ್ಚು ಕಾರ್ಯನಿರತ. ಕೆಲಸದಲ್ಲಿ  ಗೋಜಲು ಉಂಟಾಗಬಹುದು. ಅದನ್ನು ನಿವಾರಿಸುವಲ್ಲಿ ವ್ಯಸ್ತರಾಗುವಿರಿ.

ಮಕರ
ಕೆಲಸದ ಒತ್ತಡದಿಂದ ವಿಮುಖರಾಗಿ  ವಿಶ್ರಾಂತಿ ಪಡೆಯಲು ಬಯಸಿದರೂ ಅದು ನಿಮಗೆ ದುರ್ಲಭ. ಮನೆಯಲ್ಲೂ  ಕೆಲಸದೊತ್ತಡ.

ಕುಂಭ
ಕೆಲದಿನಗಳಿಂದ ಕಾಡುತ್ತಿದ್ದ ಆರ್ಥಿಕ ಬಿಕ್ಕಟ್ಟು  ಪರಿಹಾರ ಕಾಣಲಿದೆ. ಇದರಿಂದ ಅವಶ್ಯ ಖರ್ಚುವೆಚ್ಚ ಸರಿದೂಗಿಸುವಿರಿ. ಕೌಟುಂಬಿಕ ಶಾಂತಿ.

ಮೀನ
ವೃತ್ತಿಯಲ್ಲಿ ಪ್ರಮುಖ ಸಾಧನೆ ಮಾಡುತ್ತೀರಿ. ಭಾವನಾತ್ಮಕವಾಗಿ ಹೆಚ್ಚು ಸಂತೋಷದ ಬೆಳವಣಿಗೆ. ಆರ್ಥಿಕ ಉನ್ನತಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!