ಹೊಸದಿಗಂತ ಡಿಜಿಟಲ್ ಡೆಸ್ಕ್
ಮೇಷ
ಕೌಟುಂಬಿಕ ಸಂತೋಷಕ್ಕೆ ಹೆಚ್ಚು ಗಮನ ಕೊಡುತ್ತೀರಿ. ಕುಟುಂಬಸ್ಥರ ಬೇಡಿಕೆ ಈಡೇರಿಸಿ. ವೃತ್ತಿಯಲ್ಲಿ ಮಾನಸಿಕ ಕಿರಿಕಿರಿ ಉಂಟಾಗಬಹುದು.
ವೃಷಭ
ದಿನವು ಉತ್ತಮ ವಾಗಿಯೇ ಸಾಗಿದರೂ ಮಧ್ಯದಲ್ಲೊಮ್ಮೆ ಕಿರಿಕಿರಿ ಮೂಡಬಹುದು. ಬಂಧುಗಳಿಂದ ಟೀಕೆ. ಕೌಟುಂಬಿಕ ಪರಿಸ್ಥಿತಿ ಸರಿಯಾಗಿ ನಿಭಾಯಿಸಿ.
ಮಿಥುನ
ಕರ್ತವ್ಯಕ್ಕೆ ಆದ್ಯತೆ ಕೊಡುತ್ತೀರಿ. ನಿಮ್ಮ ಗಮನ ಬೇರೆಡೆ ಸೆಳೆಯಲು ಕೆಲವರು ಯತ್ನಿಸಬಹುದು. ಅದಕ್ಕೆ ಕಿವಿಗೊಡಬೇಡಿ. ಕೌಟುಂಬಿಕ ಸಮಾಧಾನ
ಕಟಕ
ಕುಟುಂಬದಲ್ಲಿ ಬಿರುಕು ಮೂಡಿಸಲು ಕೆಲವರು ಯತ್ನಿಸಬಹುದು. ನಿಮ್ಮ ಎಚ್ಚರದಲ್ಲಿ ನೀವಿರಿ. ಭಿನ್ನಮತ ಬೇಗನೆ ಶಮನಗೊಳಿಸಿ. ಆರ್ಥಿಕ ಸಂಕಷ್ಟ.
ಸಿಂಹ
ಅವಿವೇಕದ ನಿರ್ಧಾರ ತಾಳಬೇಡಿ. ನಿಮ್ಮ ಪೊಸೆಸಿವ್‌ನೆಸ್ ಸಂಘರ್ಷಕ್ಕೆ ಕಾರಣವಾದೀತು. ಕೌಟುಂಬಿಕ ಭಿನ್ನಮತ ಏರ್ಪಡಬಹುದು.
ಕನ್ಯಾ
ಕರ್ತವ್ಯ ಮತ್ತು ಪ್ರೀತಿಯ ಮಧ್ಯೆ ಸಮತೋಲನ ಸಾಧಿಸಲು ಸಫಲ. ಇದರಿಂದ ಯಾವುದಕ್ಕೂ ಭಂಗ ಬರದು. ಖರ್ಚಿನ ಕಡೆ ಗಮನ ಕೊಡಿ.
ತುಲಾ
ಉತ್ಸಾಹದ ದಿನ. ಬಂಧುಗಳೊಂದಿಗೆ ಕಾಲಕ್ಷೇಪ. ಪ್ರವಾಸ ಹೊರಡಲು ಸುಸಮಯ. ಆರ್ಥಿಕ ಸ್ಥಿತಿ ಸುಧಾರಣೆ. ಕೌಟುಂಬಿಕ ಶಾಂತಿ.
ವೃಶ್ಚಿಕ
ವೃತ್ತಿಯಲ್ಲಿ ಮತ್ತು ಕುಟುಂಬದಲ್ಲಿ ನಿಮ್ಮ ಬದ್ಧತೆ ಮರೆಯದಿರಿ. ಮನಸ್ಸು ಚಂಚಲವಾಗ ದಂತೆ ನೋಡಿಕೊಳ್ಳಿ. ಆಮಿಷಗಳನ್ನು ತಿರಸ್ಕರಿಸಿದರೆ ಒಳಿತು.
ಧನು
ಹಣಕಾಸಿನ ವಿಚಾರದಲ್ಲಿ ವ್ಯಸ್ತ. ಕೊಡುಕೊಳ್ಳು ವ್ಯವಹಾರ ನಡೆಯ ಬಹುದು. ಸಾಲ ಬಯಸಿದ್ದರೆ ಸಿಗುವುದು. ಸಾಂಸಾರಿಕ ಸಾಮರಸ್ಯ.
ಮಕರ
ನಿಮ್ಮ ಪಾಲಿಗೆ ಶುಭ ದಿನ. ಬೇಸರವಿಲ್ಲದ ಸಂತೋಷದ ವಾತಾ ವರಣ. ಕೈಗೊಂಡ ಕಾರ್ಯದಲ್ಲಿ ಯಶಸ್ಸು. ಕೌಟುಂಬಿಕ ವಾಗಿಯೂ ಹರ್ಷ.
ಕುಂಭ
ಮನಸ್ಸಿನ ಶಾಂತಿ ಕೆಡಿಸುತ್ತಿದ್ದ ಸಮಸ್ಯೆಯೊಂದಕ್ಕೆ ಕೊನೆಗೂ ಪರಿಹಾರ ಕಾಣುವಿರಿ. ಪ್ರೀತಿಯ ವಿಷಯದಲ್ಲಿ ಗುಣಾತ್ಮಕ ಬೆಳವಣಿಗೆ.
ಮೀನ
ಪ್ರೀತಿಯ ವಿಷಯ ದಲ್ಲಿ ಎಚ್ಚರಿಕೆಯಿಂದ ವ್ಯವಹರಿಸಿ. ವಿವಾದಕ್ಕೆ ಸಿಲುಕದಿರಿ. ಸ್ನೇಹಿತ ಕಿರುಕುಳ ನೀಡುವ ಸಾಧ್ಯತೆಯಿದೆ.ಧನ ನಷ್ಟ.