ದಿನಭವಿಷ್ಯ | ಇಂದಿನ ರಾಶಿಫಲಗಳು ಹೀಗಿವೆ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಮೇಷ
ಸಂಬಂಧದಲ್ಲಿ ಶಾಂತಿ ಮತ್ತು ಸಮನ್ವಯತೆ. ವೃತ್ತಿಯಲ್ಲಿ ಸವಾಲು ಒದಗಿದರೂ ಅದು ನಿಮಗೆ ಹೊಸ ಅವಕಾಶ ಕೂಡ ಒದಗಿಸಲಿದೆ. ಒಟ್ಟಾರೆ ಫಲಪ್ರದ ದಿನ.

ವೃಷಭ
ಬಾಕಿ ಉಳಿದಿರುವ ಕಾರ್ಯ ಪೂರ್ಣ ಗೊಳಿಸಿ. ಅದನ್ನು ಇನ್ನಷ್ಟು ನನೆಗುದಿಗೆ ಇಡಬೇಡಿ. ಇತರರ ಸಹಾಯ ದೊರಕಲಾರದು. ಕೌಟುಂಬಿಕ ಅಸಹಕಾರ.

ಮಿಥುನ
ಕುಟುಂಬಸ್ಥರು, ಬಂಧುಗಳ ಜತೆ ಮೃದುವಾಗಿ ವರ್ತಿಸಿ. ಅಜೀರ್ಣ ಸಮಸ್ಯೆ ಇಂದು ಕಾಡಬಹುದು. ಆರೋಗ್ಯಕರ ಆಹಾರ ಸೇವಿಸುವುದೊಳಿತು.

ಕಟಕ
ನಿಮ್ಮ ನಿರೀಕ್ಷೆಯಂತೆ ನಡೆಯದು. ಕಾಲಮಿತಿ ಯಲ್ಲಿ ಕೆಲಸ ಮುಗಿಸಲು ವಿಫಲರಾಗುವಿರಿ. ಕೆಲವರಿಂದ ಅಸಮಾಧಾನ ಎದುರಿಸುವಿರಿ.

ಸಿಂಹ
ದಿನವಿಡೀ ಒಂದಿಲ್ಲೊಂದು ಒತ್ತಡ ಎದುರಿಸುವಿರಿ. ವೃತ್ತಿಯಲ್ಲಿ , ಖಾಸಗಿ ಬದುಕಲ್ಲಿ ಸಮಸ್ಯೆ. ಆರೋಗ್ಯದ ಕಡೆಗೂ ಗಮನ ಕೊಡಿ.

ಕನ್ಯಾ
ಕಷ್ಟ ಬಂದಾಗ ಇತರರ ನೆರವನ್ನು ಕೋರುವುದು ತಪ್ಪಲ್ಲ. ಬಿಗುಮಾನ ಬಿಟ್ಟು ವ್ಯವಹರಿಸಿ. ಇಲ್ಲವಾದರೆ ಏಕಾಂಗಿಯಾಗಿ ಸಮಸ್ಯೆ ಎದುರಿಸುವಿರಿ.

ತುಲಾ
ಕೆಲಸದಲ್ಲಿ ಸಣ್ಣ ವಿಷಯಕ್ಕೂ ಗಮನ ಕೊಡಿ. ಕೆಲವೊಮ್ಮೆ ಅದುವೇ ದೊಡ್ಡ ಸಮಸ್ಯೆ ಸೃಷ್ಟಿಸಬಹುದು. ಕೌಟುಂಬಿಕ ಸಮ್ಮಿಲನ. ಬಂಧುಗಳ ಭೇಟಿ.

ವೃಶ್ಚಿಕ
ವೃತ್ತಿಯಲ್ಲಿ ಇಂದು ಎಂದಿಗಿಂತ ಹೆಚ್ಚು ಇತರರ ಸಹಕಾರ ಪಡೆಯುವಿರಿ. ನಿಮ್ಮನ್ನು ಕಂಡರಾಗದವರೂ ಸಮೀಪವಾಗುವರು. ಕೌಟುಂಬಿಕ ನೆಮ್ಮದಿ.

ಧನು
ಕುಟುಂಬದಲ್ಲಿ ಭಿನ್ನಮತ ಮೂಡಿದರೂ ಮುಕ್ತ ಮಾತುಕತೆಯಿಂದ ಅದನ್ನು ಪರಿಹರಿಸಲು ಸಾಧ್ಯವಿದೆ. ನಿಮ್ಮ ನಿಲುವಿಗೇ ಅಂಟಿ ಕೂರದಿರಿ.

ಮಕರ
ಇತರರ ಜತೆ ವ್ಯವಹರಿಸುವಾಗ ನಿಮ್ಮ ಕೋಪದ ಮೇಲೆ ನಿಯಂತ್ರಣವಿಡಿ. ಮುಖ್ಯವಾಗಿ ಕುಟುಂಬಸ್ಥರ ಜತೆ ಸಹನೆಯಿಂದ ವರ್ತಿಸಿ.

ಕುಂಭ
ಸಣ್ಣ ವಿವಾದಗಳು ಮನಶ್ಯಾಂತಿ ಕೆಡಿಸದಂತೆ ನೋಡಿಕೊಳ್ಳಿ. ದ್ವೇಷ ಇಟ್ಟುಕೊಳ್ಳಬೇಡಿ. ಸಂಧಾನದ ದಾರಿ ಶಾಂತಿಗೆ ಪೂರಕ. ಆರ್ಥಿಕ ಒತ್ತಡ.

ಮೀನ
ಆರ್ಥಿಕವಾಗಿ ಸದೃಡತೆ. ನಿಮ್ಮ ಹೊಸ ಚಿಂತನೆಗೆ ಮೇಲಕಾರಿಗಳ ಬೆಂಬಲ ಲಭ್ಯ. ಮನೆಯಲ್ಲಿ ಅನಾರೋಗ್ಯ ಕಾಡೀತು. ಎಚ್ಚರ ವಹಿಸಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!