ಹೊಸದಿಗಂತ ಡಿಜಿಟಲ್ ಡೆಸ್ಕ್
ಮೇಷ
ಆತ್ಮೀಯ ಸಂಬಂಧದಲ್ಲಿ ಬಿರುಕು ಮೂಡೀತು. ಅದಕ್ಕೆ ಬೇರೆಯವರನ್ನು ದೂರಬೇಡಿ. ನಿಮ್ಮ ವರ್ತನೆಯ ಪರಾಮರ್ಶೆಯನ್ನೂ ಮಾಡಿಕೊಳ್ಳಿ.
ವೃಷಭ
ನೀವೆಸಗುವ ಕೆಲಸದಲ್ಲಿ ತಪ್ಪು ಸಂಭವಿಸಬಹುದು. ಸಕಾಲದಲ್ಲಿ ಅದನ್ನು ಸರಿಪಡಿಸಿ. ಕಡೆಗಣನೆ ಬೇಡ. ಕೆಲವು ಸಹೋದ್ಯೋಗಿಗಳು ಕಿರಿಕಿರಿ ಸೃಷ್ಟಿಸುವರು.
ಮಿಥುನ
ನೀವಿಂದು ಕೈಗೊಳ್ಳುವ ಕಾರ್ಯದಲ್ಲಿ ಸಫಲತೆ. ಪ್ರತಿಕೂಲ ಪರಿಸ್ಥಿತಿಯೂ ನಿಮಗೆ ಪೂರಕವಾಗಿ ಬದಲಾಗುವುದು. ಆಪ್ತರಿಂದ ಸೂಕ್ತ ಸಹಕಾರ, ಬೆಂಬಲ.
ಕಟಕ
ನಿಮ್ಮ ಸುತ್ತಲಿನ ಬದಲಾವಣೆಗೆ ಕುರುಡರಾಗಬೇಡಿ. ಏಕೆಂದರೆ ಅದು ನಿಮ್ಮ ಬದುಕಿನ ಮೇಲೂ ಪರಿಣಾಮ ಬೀರಬಹುದು.
ಸಿಂಹ
ನಿಮ್ಮ ಬೆನ್ನಹಿಂದೆ ಏನೋ ನಡೆಯುತ್ತಿದೆ ಎಂಬ ಭಾವ ಕಾಡಬಹುದು. ನಿಮಗೆ ಆಗದವರು ನಿಮ್ಮ ವಿರುದ್ಧ ಮಸಲತ್ತು ನಡೆಸಬಹುದು. ಎಚ್ಚರದಿಂದಿರಿ.
ಕನ್ಯಾ
ಹೆಚ್ಚು ಒತ್ತಡದ ದಿನ. ಕಾರ್ಯಗಳು ನೀವು ಬಯಸಿದಂತೆ ಸಾಗುವುದಿಲ್ಲ. ಅಡ್ಡಿಗಳು ಬಾಧಿಸುತ್ತವೆ. ಚಾಡಿ ಮಾತು ಕೇಳಿ ಆಪ್ತರನ್ನು ದೂರ ಮಾಡದಿರಿ.
ತುಲಾ
ಲೌಕಿಕ ಜಗತ್ತಿನಲ್ಲಿ ಭಾವನೆಗಳಿಗೆ ಬೆಲೆಯಿಲ್ಲ ಎಂಬಂತಹ ಅನಿಸಿಕೆ ಮೂಡೀತು. ಅತಿಯಾದ ಭಾವುಕತೆ ಒಳಿತಲ್ಲ ಎಂಬ ಅರಿವು ನಿಮಗಿರಲಿ.
ವೃಶ್ಚಿಕ
ನಂಬಿಕಸ್ಥರ ಮಾತನ್ನು ಮಾತ್ರ ನಂಬಿರಿ. ವದಂತಿಗಳನ್ನು ನಂಬಿ ನಿಮ್ಮ ಕುಟುಂಬದ ಶಾಂತಿ ಹಾಳು ಮಾಡಿಕೊಳ್ಳದಿರಿ. ಆರ್ಥಿಕ ಒತ್ತಡ, ಖರ್ಚು ಹೆಚ್ಚುವುದು.
ಧನು
ನಿಮ್ಮ ಕ್ಷೇತ್ರದಲ್ಲಿ ಉತ್ತಮ ಅವಕಾಶ ದೊರಕಲಿದೆ. ಅದನ್ನು ಸದುಪಯೋಗ ಮಾಡಿಕೊಳ್ಳಿ. ಆರ್ಥಿಕವಾಗಿ ಲಾಭ. ಕೌಟುಂಬಿಕ ನೆಮ್ಮದಿ.
ಮಕರ
ವೃತ್ತಿ ಮತ್ತು ಮನೆಯಲ್ಲಿ ಜವಾಬ್ದಾರಿ ಹೆಚ್ಚುತ್ತದೆ. ಇತರರ ಕಾರ್ಯವೂ ನಿಮ್ಮ ಹೆಗಲೇರುವುದು. ಆಪ್ತರೊಬ್ಬರು ನಿಮ್ಮ ನೋವಿಗೆ ಶಮನವಾಗಿ ಬರುತ್ತಾರೆ.
ಕುಂಭ
ವೃತ್ತಿ ಕ್ಷೇತ್ರದಲ್ಲಿ ಅತೃಪ್ತಿ.ಮಾಡಿದ ಕಾರ್ಯವು ನಿರೀಕ್ಷಿತ ಫಲ ನೀಡದು. ಹಣಕ್ಕೆ ಸಂಬಂಧಿಸಿ ಕೆಲವು ಒತ್ತಡಗಳು ಬಾಧಿಸುತ್ತವೆ. ಕೌಟುಂಬಿಕ ಉದ್ವಿಗ್ನತೆ.
ಮೀನ
ವೃತ್ತಿಯಲ್ಲಿ ಹೆಚ್ಚು ಹೊಣೆಗಾರಿಕೆ. ಅದನ್ನು ನಿಭಾಯಿಸುವಲ್ಲಿ ಸಫಲರಾಗುವಿರಿ. ನೆಗೆಟಿವ್ ಚಿಂತನೆಗಳು ಮನಸ್ಸನ್ನು ಕಾಡದಂತೆ ನೋಡಿಕೊಳ್ಳಿ.