ರಾಷ್ಟ್ರವೇ ಹೆಮ್ಮೆ ಪಡುವಂತಹ ಹೋರಾಟಗಾರ್ತಿ- ಸಮಾಜ ಸುಧಾರಕಿ ಮಂಗಳೂರಿನ ಕಮಲಾದೇವಿ ಚಟ್ಟೋಪಾಧ್ಯಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ (ಸ್ವಾತಂತ್ರೋತ್ಸವ ಅಮೃತ ಮಹೋತ್ಸವದ ವಿಶೇಷ)
ಮಂಗಳೂರಿನಲ್ಲಿ ಜನಿಸಿದ ಕಮಲಾದೇವಿ ಚಟ್ಟೋಪಾಧ್ಯಾಯ ಅವರು ಭಾರತದಲ್ಲಿ ಶಾಸಕಾಂಗ ಸ್ಥಾನಕ್ಕೆ ಸ್ಪರ್ಧಿಸಿದ ಮೊದಲ ಮಹಿಳೆ. ಮದ್ರಾಸ್ ಪ್ರಾಂತೀಯ ಚುನಾವಣೆಯಲ್ಲಿ ಸ್ವರ್ಧಿಸುವ ಮೂಲಕ ಅವರು ಈ ಸಾಧನೆ ಮಾಡಿದ್ದರು. ಸಮಾಜ ಸುಧಾರಕಿಯಾಗಿ, ಭಾರತೀಯ ಮಹಿಳೆಯರ ಸಾಮಾಜಿಕ- ಆರ್ಥಿಕ ಸ್ಥಿತಿಯನ್ನು ಉನ್ನತೀಕರಿಸುವಲ್ಲಿ ಕಮಲಾ ದೇವಿ ಅವರ ಪಾತ್ರ ಗುರುತರವಾದುದು. ಕರಕುಶಲ, ರಂಗಭೂಮಿ ಮತ್ತು ಕೈಮಗ್ಗಗಳು ನವಚೈತನ್ಯ ಕಾಣುವಲ್ಲಿ ಕಾಣುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದರು.
ಆಕೆಯ ದೂರದೃಷ್ಟಿಯ ಕಾರಣದಿಂದಾಗಿ ಇಂದು ಭಾರತದಲ್ಲಿ ಅನೇಕ ಸಾಂಪ್ರದಾಯಿಕ ಸಾಂಸ್ಕೃತಿಕ ಸಂಸ್ಥೆಗಳು ಅಸ್ತಿತ್ವದಲ್ಲಿವೆ, ಇವುಗಳಲ್ಲಿ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ, ಸಂಗೀತ ನಾಟಕ ಅಕಾಡೆಮಿ, ಸೆಂಟ್ರಲ್ ಕಾಟೇಜ್ ಇಂಡಸ್ಟ್ರೀಸ್ ಎಂಪೋರಿಯಮ್ ಮತ್ತು ಕ್ರಾಫ್ಟ್ಸ್ ಕೌನ್ಸಿಲ್ ಆಫ್ ಇಂಡಿಯಾ ಪ್ರಮುಖವಾದವು. ಭಾರತೀಯ ಜನರ ಸಾಮಾಜಿಕ ಮತ್ತು ಆರ್ಥಿಕ ಉನ್ನತಿಯಲ್ಲಿ ಕರಕುಶಲ ಮತ್ತು ಸಹಕಾರಿ ತಳಮಟ್ಟದ ಚಳುವಳಿಗಳು ವಹಿಸುವ ಮಹತ್ವದ ಪಾತ್ರವನ್ನು ಚಟ್ಟೋಪಾಧ್ಯಾಯ ಜನರಿಗೆರ ಮನದಟ್ಟು ಮಾಡಿಸಿದ್ದರು.
ರಾಜಕೀಯ ಸುಧಾರಣೆಗಳು ಮತ್ತು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕಮಲಾದೇವಿ ಪ್ರಮುಖ ಪಾತ್ರ ವಹಿಸಿದ್ದರು. 1927ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಸೇರಿದ ಆಕೆ ಒಂದು ವರ್ಷದೊಳಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿಗೆ ಆಯ್ಕೆಯಾದರು.  ಉಪ್ಪಿನ ದಂಡು ಮೆರವಣಿಗೆಯ ಸಮಯದಲ್ಲಿ, ಮಹಿಳೆಯರು ಮುಂಚೂಣಿಯಲ್ಲಿ ಕಾಣಿಸಿಕೊಳ್ಳಲು  ಸಮಾನ ಅವಕಾಶವನ್ನು ನೀಡುವಂತೆ ಅವರು ಗಾಂಧಿಗೆ ಮನವರಿಕೆ ಮಾಡಿದರು. ಆ ಬಳಿಕ, ಅವರು ರಾಷ್ಟ್ರೀಯ ಸೇವಾದಳವನ್ನು ಸೇರಿಕೊಂಡರು ಮತ್ತು ಮಹಿಳಾ ಕಾರ್ಯಕರ್ತರಿಗೆ ತರಬೇತಿ ನೀಡಿದರು.
3 ಏಪ್ರಿಲ್ 2018 ರಂದು, ಕಮಲಾ ದೇವಿ ಅವರ 115 ನೇ ಜನ್ಮದಿನದಂದು, ಗೂಗಲ್ ತನ್ನ ಮುಖಪುಟದಲ್ಲಿ ಅವರ ಡೂಡಲ್ ಅಳವಡಿಸುವ ಮೂಲಕ ಗೌರವಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!