ದಿನಭವಿಷ್ಯ | ವೃತ್ತಿಯಲ್ಲಿ ಲಾಭ, ಆರ್ಥಿಕ ಉನ್ನತಿ, ನಿಮ್ಮ ಕಾರ್ಯಕ್ಕೆ ಸೂಕ್ತ ಫಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಮೇಷ
ವೃತ್ತಿಯ ಸಮಸ್ಯೆಗಳನ್ನು ಖಾಸಗಿ  ಬದುಕಿನ ಒಳಗೆ ತರಬೇಡಿ. ಅದರಿಂದ ಕೌಟುಂಬಿಕ ಶಾಂತಿ ಹಾಳಾದೀತು. ಆರ್ಥಿಕ ಸಮಸ್ಯೆ ಪರಿಹಾರದ ಸಂಕೇತ ತೋರುವುದು.

ವೃಷಭ
ವೃತ್ತಿಯಲ್ಲಿ ಆಗಾಗ ಅಸಹನೆ ಉಂಟಾದೀತು. ಸುತ್ತಲಿನವರ ಮೇಲೆ ರೇಗುವ ಸಾಧ್ಯತೆ. ಹಣದ ವಿಚಾರದಲ್ಲಿ ನೀವು ಬಯಸಿದ ಪ್ರಗತಿ ಉಂಟಾಗದು.

ಮಿಥುನ
ಆರ್ಥಿಕ ಪ್ರಗತಿ. ಖರ್ಚು ಹೆಚ್ಚಿದರೂ ಉಳಿತಾಯವೂ ಸಾಧ್ಯ. ಉದ್ಯಮಿಗಳಿಗೆ ಹೆಚ್ಚು ವ್ಯವಹಾರ. ಕೌಟುಂಬಿಕ ಪರಿಸರದಲ್ಲಿ ಶಾಂತಿ, ಸಮಾಧಾನ.

ಕಟಕ
ನಿಮ್ಮ ಕೆಲಸದಲ್ಲಿ ನಿರಾಸಕ್ತಿ ತೋರದಿರಿ. ಅದು ಮೇಲಿನವರ ಗಮನಕ್ಕೆ ಬಂದೀತು. ಆತ್ಮೀಯರ ಜತೆ ಅನವಶ್ಯವಾಗಿ ಕ್ರೋಧಗೊಳ್ಳದಿರಿ.

ಸಿಂಹ
ನಿಮ್ಮ ಕಾರ್ಯಶೈಲಿ ವ್ಯವಹಾರ ಮೆಚ್ಚುಗೆ ಗಳಿಸುವುದು. ಅದರಿಂದ ಸೂಕ್ತ ಪ್ರತಿಫಲವೂ ದೊರಕುವುದು. ಕೌಟುಂಬಿಕ ಒತ್ತಡ ನಿವಾರಣೆ.

ಕನ್ಯಾ
ವೃತ್ತಿಯಲ್ಲಿ ಲಾಭ. ಆರ್ಥಿಕ ಉನ್ನತಿ. ನಿಮ್ಮ ಕಾರ್ಯಕ್ಕೆ ಸೂಕ್ತ ಫಲ ಲಭ್ಯ. ಬಂಧುಗಳೊಂದಿಗೆ ಸೌಹಾರ್ದದಿಂದ ವ್ಯವಹರಿಸಿ.

ತುಲಾ
ಕೆಲಸದಲ್ಲಿ ಹೆಚ್ಚು ಹೊಣೆಗಾರಿಕೆ. ಅದನ್ನು ಸರಿಯಾಗಿ ನಿಭಾಯಿಸಿ. ಇತರರ ಮೇಲೆ ಹೊಣೆ ಜಾರಿಸಲು ಯತ್ನಿಸದಿರಿ. ಸಂಗಾತಿ ಜತೆಗೆ ಉತ್ತಮ ಹೊಂದಾಣಿಕೆ.

ವೃಶ್ಚಿಕ
ಹಣಕಾಸು ಪರಿಸ್ಥಿತಿ ಉತ್ತಮಗೊಳ್ಳುವುದು. ಆರೋಗ್ಯ ಪರಿಸ್ಥಿತಿ ಸುಧಾರಣೆ. ಕೆಲವರು ನಿಮ್ಮ ನೆರವು ಕೇಳಿ ಬಂದಾರು. ಕೌಟುಂಬಿಕ ಸಹಕಾರ.

ಧನು
ನಿಮ್ಮ ವಿಶ್ವಾಸ ವೃದ್ಧಿಸುವ ಬೆಳವಣಿಗೆ. ಇದರಿಂದ ನಿಮಗೆ ವಹಿಸಿದ ಕೆಲಸವನ್ನು ಸರಿಯಾಗಿ ನಿಭಾಯಿಸುವಿರಿ. ನಿಮ್ಮ ಟೀಕಾಕಾರರಿಗೆ ಮುಖಭಂಗ.

ಮಕರ
ನಿಮ್ಮ ಕರ್ತವ್ಯ ಸುಲಭವಾಗಿ ನಿಭಾಯಿಸುವಿರಿ. ಆದರೂ ಕೆಲವರಿಗೆ ಅದು ತೃಪ್ತಿ ತಾರದು. ನಿಮ್ಮ ಕೆಲಸದಲ್ಲಿ ಕುಂದು ಹುಡುಕುತ್ತಾರೆ.

ಕುಂಭ
ನಿಮ್ಮ ಆರ್ಥಿಕ ಪರಿಸ್ಥಿತಿ ಸರಿಯಾಗಿ ನಿಭಾಯಿಸಿ. ಅತಿಯಾದ ರಿಸ್ಕ್ ತೆಗೆದುಕೊಳ್ಳದಿರಿ. ಆರ್ಥಿಕ ಮುಗ್ಗಟ್ಟು ಉಂಟಾದೀತು. ಅಸಹನೆ ಹೆಚ್ಚಳ.

ಮೀನ
ನಿಮ್ಮನ್ನು ಅರ್ಥ ಮಾಡಿಕೊಳ್ಳುವ ವ್ಯಕ್ತಿಗಳ ಜತೆ ಸಮಯ ಕಳೆಯುವಿರಿ. ಭಾವನೆಗಳ ವಿನಿಮಯಕ್ಕೆ ಅವಕಾಶ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!