ದಿನಭವಿಷ್ಯ | ಮಂಗಳವಾರದ ಶುಭದಿನ ಹೀಗಿವೆ ನಿಮ್ಮ ರಾಶಿಫಲಗಳು

ಮೇಷ
ಕೌಟುಂಬಿಕ ವಿಷಯಗಳಿಗೆ ಹೆಚ್ಚು ಗಮನ ಕೊಡಬೇಕಾಗುತ್ತದೆ. ಕುಟುಂಬ ಸದಸ್ಯರ ಸಾಧನೆಯು ಸಂತೋಷ ತರುತ್ತದೆ. ಆರ್ಥಿಕ ಒತ್ತಡ ಬಾಧಿಸಿತು.

ವೃಷಭ
ವ್ಯಕ್ತಿಯೊಬ್ಬರು ನಿಮ್ಮಲ್ಲಿ ಹರ್ಷ ಉಕ್ಕಿಸುತ್ತಾರೆ. ಅವರ ಸಂಗದಲ್ಲಿ ಉಲ್ಲಾಸ ಪಡುವಿರಿ. ನಿಮ್ಮ ಕಾರ್ಯಕ್ಷೇತ್ರದ ಮೇಲೂ ಇದರಿಂದ ಗುಣಾತ್ಮಕ ಪರಿಣಾಮ.

ಮಿಥುನ
ವೃತ್ತಿಯೇತರ ವಿಷಯಗಳಲ್ಲಿ ಹೆಚ್ಚು ಆಸಕ್ತಿ ತೋರುತ್ತೀರಿ. ಅದರಲ್ಲಿ ಪರಿಣತಿ ಸಾಧಿಸಲು ಯತ್ನ. ಕೌಟುಂಬಿಕ ಸನ್ನಿವೇಶ ಸೌಹಾರ್ದಕರ.

ಕಟಕ
ದೈನಂದಿನ ವ್ಯವಹಾರ ದಲ್ಲಿ ಸಣ್ಣಪುಟ್ಟ ಅಡ್ಡಿಗಳು. ದೊಡ್ಡ ಹಾನಿ ತರದಿದ್ದರೂ ಮನಸ್ಸಿಗೆ ಕಿರಿಕಿರಿ. ಕೌಟುಂಬಿಕ ಅಸಹಕಾರವು ಅಸಹನೆ ಸೃಷ್ಟಿಸುವುದು.

ಸಿಂಹ
ನಾಯಕತ್ವವು ನಿಮ್ಮ ಹುಟ್ಟುಗುಣ. ಇಂದು ಅದನ್ನು ಮತ್ತೊಮ್ಮೆ ಪ್ರದರ್ಶಿಸುವಿರಿ. ಬೆಂಬಲಿಗರ ಸಂಖ್ಯೆ ಹೆಚ್ಚಿಸಿಕೊಳ್ಳುವಿರಿ. ಉದ್ಯೋಗದಲ್ಲಿ ಬಡ್ತಿ.

ಕನ್ಯಾ
ಹಠಾತ್ತನೆ  ಉದ್ವೇಗಕ್ಕೆ ಒಳಗಾಗುವ ಪ್ರಸಂಗ ಉದ್ಭವಿಸ ಬಹುದು. ಮನಸ್ಸನ್ನು ನಿಯಂತ್ರಿಸಲು ಪ್ರಯತ್ನಿಸಿ. ಮುಜು ಗರಕ್ಕೆ ಈಡಾಗದಿರಿ.

ತುಲಾ
ನಿಮ್ಮದು ದೃಢ ಮನಸ್ಸು. ಆದರೆ ನಿಮ್ಮ ದೃಢತೆಯನ್ನು ಅಲುಗಾಡಿಸುವ ಬೆಳವಣಿಗೆ ಸಂಭವಿಸಬಹುದು. ಹತಾಶರಾಗದಿರಿ.

ವೃಶ್ಚಿಕ
ಸವಾಲಿನ ದಿನ. ಹೊಸ ಕ್ಷೇತ್ರದಲ್ಲಿ ಧುಮುಕಲು ಯತ್ನಿಸುವುದಾದರೆ ಜಾಗ್ರತೆ ವಹಿಸಿ. ಕೆಲವರ ಅಸಹಕಾರ ಎದುರಿಸು
ವಿರಿ. ಕಠಿಣ ಪರಿಶ್ರಮ ದಿಂದ ಯಶಸ್ಸು .

ಧನು
ಸಂಬಂಧ ಸುಧಾರಣೆಗೆ ಆದ್ಯತೆ ಕೊಡಿ. ಎಡವಟ್ಟು ಮಾಡದಿರಿ. ಆಪ್ತರ ತಪ್ಪುಗಳನ್ನು ಮನ್ನಿಸುವ ಉದಾರತೆ ಪ್ರದರ್ಶಿಸಿ. ಅದರಿಂದ ಶಾಂತಿ ನೆಲೆಸುವುದು.

ಮಕರ
ಇಂದು ಎದ್ದ ಘಳಿಗೆ ಸರಿಯಾಗಿಲ್ಲ ಎಂದು ಅನಿಸಬಹುದು. ಏಕೆಂದರೆ ದಿನವಿಡೀ ಕಿರಿಕಿರಿ. ಮಾನಸಿಕ ಶಾಂತಿ ದೂರ. ವೃತ್ತಿಯಲ್ಲಿ ಹಿನ್ನಡೆ.

ಕುಂಭ
ಕುಟುಂಬದ ಸಂಗಡ ಹೆಚ್ಚು ಕಾಲ ಕಳೆಯುವ ಅವಕಾಶ. ವೃತ್ತಿಯಲ್ಲಿನ ಒತ್ತಡದಿಂದ ವಿರಾಮ ಪಡೆಯಲು ಬಯಸುವಿರಿ. ಧನ ಲಾಭ.

ಮೀನ
ಇತರರಿಂದ ಪಡೆದ ಹಳೆಯ ಉಪಕಾರಕ್ಕೆ ಪ್ರತ್ಯುಪಕಾರ ಮಾಡಲು ಸೂಕ್ತ ಸಮಯ. ನಿಮ್ಮ ಕುಟುಂಬದ ಹಿತಾಸಕ್ತಿಗೆ ಆದ್ಯತೆ ಕೊಡಿ. ಅವರ ಬೇಡಿಕೆ ಈಡೇರಿಸಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!