ಹೊಸದಿಗಂತ ಡಿಜಿಟಲ್ ಡೆಸ್ಕ್
ಮೇಷ
ನೀವಿಂದು ಹೆಚ್ಚು ಭಾವುಕರಾಗಿ ವರ್ತಿಸವ ಸಾಧ್ಯತೆಯಿದೆ. ಭಾವನೆಗಳ ಮೇಲೆ ನಿಯಂತ್ರಣ ಹೇರಿ. ಮನಸ್ಸನ್ನು ಮುಕ್ತವಾಗಿ ತೆರೆದಿಡಿ.
ವೃಷಭ
ಸಮಸ್ಯೆಯೊಂದು ಬಗೆಹರಿದರೂ ನಿಮಗೆ ಸಮಾಧಾನ ಉಂಟಾಗದು. ಮತ್ತೇನು ಬರುವುದೋ ಎಂಬ ಆತಂಕ. ದೇವರ ಸ್ಮರಣೆ ಯಿಂದ ಮನಶ್ಯಾಂತಿ.
ಮಿಥುನ
ನಿಮ್ಮ ಸುತ್ತ ಆಗುತ್ತಿರುವ ಬದಲಾವಣೆಗಳಿಗೆ ಕುರುಡಾಗದಿರಿ. ಅದನ್ನು ಗಮನಿಸಿ. ನೀವೂ ಅದಕ್ಕೆ ಹೊಂದಿಕೊಳ್ಳಿ. ಕಠಿಣ ನಿಲುವು ತಳೆಯುವುದು ಸೂಕ್ತವೆನಿಸದು.
ಕಟಕ
ಕೆಲ ವಿಷಯಗಳಲ್ಲಿ ಇಂದು ನಿರಾಶೆ ಕಾಡಬಹುದು. ಕಾರ್ಯದಲ್ಲಿ ಪೂರ್ಣ ಫಲ ಸಿಗಲಾರದು. ಕೆಲವರಿಂದ ಟೀಕೆಗಳನ್ನೂ ಎದುರಿಸುವಿರಿ.
ಸಿಂಹ
ಕೆಲವು ಹೊಸ ಸವಾಲು ಎದುರಾಗಬಹುದು. ಅದನ್ನು ಎದುರಿಸುವ ದಾರಿ ಗೋಚರಿಸುವುದರಿಂದ ಚಿಂತೆ ಬೇಡ. ಕೌಟುಂಬಿಕ ಸಹಕಾರ.
ಕನ್ಯಾ
ಇಂದು ನಿಮ್ಮ ಕಾರ್ಯಸಾಧನೆ ಕಠಿಣವೆನಿಸಬಹುದು. ಆದರೆ ಪ್ರಯತ್ನ ಬಿಡದಿರಿ. ಅಂತಿಮವಾಗಿ ಎಲ್ಲವೂ ನಿಮಗೆ ಪೂರಕ, ಕಾರ್ಯಸಿದ್ಧಿ.
ತುಲಾ
ಸೋಲಿನಿಂದ ಗೆಲುವಿನೆಡೆ ಹೆಜ್ಜೆ ಇಡಲು ಆಶಾವಾದ ಅವಶ್ಯ . ಇದನ್ನು ನೀವು ಮರೆಯಬಾರದು. ಸಣ್ಣ ಹಿನ್ನಡೆಯಿಂದ ಹತಾಶರಾಗದಿರಿ.
ವೃಶ್ಚಿಕ
ನಿಮ್ಮ ಒಳ್ಳೆತನವನ್ನು ಕೆಲವರು ದುರುಪಯೋಗ ಮಾಡಿಕೊಳ್ಳುವರು. ಯೋಚಿಸಿ ನೆರವು ಚಾಚಿ. ಅಪಾತ್ರರಿಗೆ ಸಹಾಯ ಅನವಶ್ಯ.
ಧನು
ಕೆಲವು ಸಣ್ಣ ಘಟನೆಗಳೇ ಕೆಲವೊಮ್ಮೆ ದೊಡ್ಡ ಪಾಠ ಕಲಿಸುತ್ತವೆ. ಅಂತಹ ಪಾಠವೊಂದು ಇಂದು ಉಂಟಾದೀತು. ಸಂಯಮದಿಂದ ವರ್ತಿಸುವುದು ಮುಖ್ಯ.
ಮಕರ
ಕಠಿಣ ಮನಸ್ಥಿತಿ ಇಂದು ನಿಮ್ಮನ್ನು ಆವರಿಸುವುದು. ಕೋಪತಾಪದಿಂದ ರೇಗಬಹುದು. ಸಮಾಧಾನದಿಂದ ವರ್ತಿಸಿರಿ.
ಕುಂಭ
ಎಂದಿನ ಏಕತಾನತೆ ಬಿಟ್ಟು ಹೊಸತನ ತುಂಬಿಕೊಳ್ಳಿರಿ. ಹುರುಪಿನಿಂದ ಕೆಲಸ ಮಾಡಿ. ನಿಮ್ಮ ಮನೋಭಾವದಲ್ಲಿ ಬದಲಾವಣೆ ಬರಲಿ
ಮೀನ
ವಿವಾದಗಳನ್ನು ಸಂಧಾನದಿಂದ ಬಗೆಹರಿಸಲು ಯತ್ನಿಸಿ. ಕಲಹಕ್ಕೆ ಇಳಿಯಬೇಡಿ. ಕುಟುಂಬಸ್ಥರಿಂದ ಸೂಕ್ತ ನೆರವು. ಆರ್ಥಿಕ ಒತ್ತಡ ಹೆಚ್ಚಬಹುದು..