Saturday, March 25, 2023

Latest Posts

ದಿನಭವಿಷ್ಯ| ಸಂಸಾರಿಕ ಬದುಕಿನಲ್ಲಿ ಸಣ್ಣಪುಟ್ಟ ಏರಿಳಿತ ಸಂಭವ, ಹೊಂದಾಣಿಕೆ ಅಗತ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಸಾಂಸಾರಿಕ ಬದುಕಿನಲ್ಲಿ ಸಣ್ಣಪುಟ್ಟ ಏರಿಳಿತ ಸಂಭವ. ಅದನ್ನು ಗಂಭೀರವಾಗಿ ಪರಿಗಣಿಸಬೇಡಿ. ಹೊಂದಾಣಿಕೆ ಜೀವನದಲ್ಲಿ ಅವಶ್ಯ.

ವೃಷಭ
ನಿಮ್ಮ ಹೊಣೆಗಾರಿಕೆ ಸಮರ್ಥವಾಗಿ ನಿಭಾಯಿಸುವಿರಿ. ಕೆಲವರು ನಿಮ್ಮ ಮೇಲೆ ತಮ್ಮ ಬೇಡಿಕೆ ಈಡೇರಿಸಲು ಒತ್ತಡ ಹಾಕಬಹುದು.

ಮಿಥುನ
ಸಂಬಂಧದ ವಿಚಾರದಲ್ಲಿ ಎಚ್ಚರದಿಂದ ವರ್ತಿಸಿ. ಹದತಪ್ಪಿದ ಮಾತು ಅಥವಾ ವರ್ತನೆ ಆತ್ಮೀಯ ಸಂಬಂಧವನ್ನು ಕೆಡಿಸಬಹುದು. ಹಾಗಾಗದಿರಲಿ.

ಕಟಕ
ಹಲವಾರು ಒತ್ತಡಗಳು. ಇದರಿಂದಾಗಿ ನಿಮ್ಮ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಅಸಾಧ್ಯವಾಗುತ್ತದೆ. ಹಣದ ವ್ಯವಹಾರದಲ್ಲಿ ಎಚ್ಚರದಿಂದ ವರ್ತಿಸಿ.

ಸಿಂಹ
ಕೆಲವು ಸಮಸ್ಯೆ ಕಾಡಬಹುದು. ಅದನ್ನು ಸಕಾಲದಲ್ಲಿ ಪರಿಹರಿಸಲೂ ಸಫಲರಾಗುವಿರಿ. ಕೌಟುಂಬಿಕ ಪರಿಸರ ಉಲ್ಲಾಸದಾಯಕ.

ಕನ್ಯಾ
ಮನೆಯ ಸದಸ್ಯರ ಜತೆ ಭಿನ್ನಾಭಿಪ್ರಾಯ ಮೂಡಬಹುದು. ಅದನ್ನು ದೀರ್ಘಕಾಲ ಎಳೆಯದಿರಿ. ಬೇಗನೆ ಅದನ್ನು ಶಮನಗೊಳಿಸಿರಿ.

ತುಲಾ
ನಿಮ್ಮ ಸುತ್ತಲಿನ ವ್ಯಕ್ತಿಗಳ ಜತೆ ಉತ್ತಮ ಹೊಂದಾಣಿಕೆ ಸಾಧಿಸಿ. ನನಗೆ ಯಾರೂ ಬೇಡ ಎಂಬ ಧೋರಣೆ ತ್ಯಜಿಸಿರಿ. ಅದರಿಂದ ಒಳಿತಾಗುವುದು.

ವೃಶ್ಚಿಕ
ಹೆಚ್ಚಿನ ವಿಶೇಷಗಳಿಲ್ಲದ ದಿನ. ಮನೆಯಲ್ಲಿ ಹೊಂದಾಣಿಕೆ. ಇದರಿಂದಾಗಿ ಯಾವುದೇ ಭಿನ್ನಮತ ಮೂಡುವುದಿಲ್ಲ. ದೈಹಿಕವಾಗಿ ಸ್ವಸ್ಥ.

ಧನು
ಮನೆಯವರ ಜತೆ ಸೌಹಾರ್ದ ಬಾಂಧವ್ಯ. ಹಾಗಾಗಿ ಇಂದಿನ ದಿನ ಉಲ್ಲಾಸದಿಂದ ಕಳೆಯುವುದು. ಆರ್ಥಿಕ ಕೊರತೆ ಕಾಡಿದರೂ ಅದು ಮಹತ್ವದ್ದೆನಿಸದು.

ಮಕರ
ನಿಮ್ಮ ಸಾಮರ್ಥ್ಯವನ್ನು ಪೂರ್ಣವಾಗಿ ಬಳಸಿದರೆ ನಿಮ್ಮ ಗುರಿ ಸಾಧಿಸಬಹುದು. ಆದರೆ ಉದಾಸೀನತೆ ನಿಮ್ಮನ್ನು ಕಟ್ಟಿಹಾಕುತ್ತಿದೆ. ಅದನ್ನು ಮೊದಲು ತ್ಯಜಿಸಬೇಕು.

ಕುಂಭ
ನಿಮ್ಮ ಮನಸ್ಸಿಗೆ ತೃಪ್ತಿ ನೀಡುವಂತಹ ಕಾರ್ಯ ಸಾಧಿಸುವಿರಿ. ಇದರಿಂದ ದಿನವಿಡೀ ಉಲ್ಲಾಸದ ಮನಸ್ಥಿತಿ. ಬಂಧುಗಳ ಭೇಟಿ. ಆರ್ಥಿಕ ಉನ್ನತಿ ಸಾಧಿಸುವಿರಿ.

ಮೀನ
ನೀವಿಂದು ಸಂತೋಷ, ಸಂಭ್ರಮದ ವಾತಾವರಣದಲ್ಲಿ ಕಾಲ ಕಳೆಯುವಿರಿ. ಕುಟುಂಬ ಸದಸ್ಯರಿಂದ ಉತ್ತಮ ಸಹಕಾರ. ಖರೀದಿ ಹುಮ್ಮಸ್ಸು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!