ದಿನಭವಿಷ್ಯ| ಊಹಾತ್ಮಕ ವ್ಯವಹಾರ ನಿಮಗೆ ಲಾಭ ತರದು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಖಾಸಗಿ ಬದುಕಲ್ಲಿ ಸಮಸ್ಯೆ. ನಿಮ್ಮ ನಡೆನುಡಿಯಲ್ಲಿ ಎಚ್ಚರ ವಹಿಸಿ. ಕೆಲವರಿಗೆ ಸಹ್ಯವಾಗದಿರಬಹುದು. ಆತುರದ ವರ್ತನೆ ತೋರದಿರಿ.

ವೃಷಭ
ಸಣ್ಣ ಕೆಲಸಕ್ಕೂ ಅತಿಯಾದ ಶ್ರಮ ಹಾಕಬೇಕಾಗುವುದು.  ಅದಕ್ಕೆ ಕಾರಣ ಗ್ರಹಗತಿ ನಿಮಗಿಂದು ಪೂರಕ ಆಗಿಲ್ಲದಿರುವುದು. ಸಹನೆಯಿರಲಿ.

ಮಿಥುನ
ಅತಿಯಾದ ಭಾವುಕತೆ ನಿಮ್ಮ ಕೆಲಸ ಕೆಡಿಸಬಹುದು. ವಿವೇಕ ನಶಿಸಬಹುದು. ಕೆಲ ವಿಚಾರಗಳಲ್ಲಿ  ನಿರ್ಭಾವುಕ ಮನಸ್ಥಿತಿ ಒಳ್ಳೆಯದು.

ಕಟಕ
ಭಾವನಾತ್ಮಕ ಏರುಪೇರು. ಇದು ನಿಮ್ಮ ನಿರ್ವಹಣೆಯ ಮೇಲೆ ಪರಿಣಾಮ ಬೀರುವುದು. ಸಂಯಮದಿಂದ ವರ್ತಿಸುವುದೊಳಿತು.

ಸಿಂಹ
ಊಹಾತ್ಮಕ ವ್ಯವಹಾರ ನಿಮಗೆ ಲಾಭ ತರದು. ಅದರಲ್ಲಿ ಹಣ ಹೂಡದಿರಿ. ವೃತ್ತಿಯಲ್ಲಿ ಹಿನ್ನಡೆ ಅನುಭವಿಸುವಿರಿ. ಬಂಧುಗಳಿಂದ ಕಿರಿಕಿರಿ. ಮಾನಸಿಕ ಅಶಾಂತಿ.

ಕನ್ಯಾ
ಯಾರದೋ ಚಿತಾವಣೆಗೆ ಒಳಗಾಗಿ  ಆಪ್ತರನ್ನು ದೂರ ಮಾಡಿಕೊಳ್ಳಬೇಡಿ. ವದಂತಿ ಕಣ್ಣುಮುಚ್ಚಿ ನಂಬಬೇಡಿ. ವಿವೇಕವಿರಲಿ.

ತುಲಾ
ನಿಮ್ಮ ಕಾರ್ಯಕ್ಕೆ ಕುಟುಂಬಸ್ಥರ  ಅಸಹಕಾರ. ಕೆಲವರಿಗೆ ನಿಮ್ಮ ಕುರಿತು ವಿನಾಕಾರಣ ಮುನಿಸು. ಸಮಾಧಾನದಿಂದ ವ್ಯವಹರಿಸಿರಿ.

ವೃಶ್ಚಿಕ
ದೊಡ್ಡ ಸಮಸ್ಯೆ ಇರದಿದ್ದರೂ ಸಮಸ್ಯೆಯ ಭಾರ ಹೊತ್ತಂತೆ  ವರ್ತಿಸುವಿರಿ. ಎಲ್ಲರ ಹೊಣೆ ನಿಮ್ಮದೇ ಎಂಬಂತೆ ಭಾವಿಸುವಿರಿ. ಹಗುರಾಗಿ ಚಿಂತಿಸಿ.

ಧನು
ಕೆಲವರ ವರ್ತನೆ ಹಾಗೂ ಮಾತುಗಳು ನಿಮ್ಮ  ದೈನಂದಿನ ಕಾರ್ಯದ ಮೇಲೆ ಪರಿಣಾಮ ಬೀರಲಿದೆ. ಅದನ್ನೆಲ್ಲ ಗಂಭೀರವಾಗಿ ಪರಿಗಣಿಸದಿರಿ.

ಮಕರ
ವೃತ್ತಿಯಲ್ಲಿ ನಿಮಗೆ ಅನುಕೂಲಕರ  ಬೆಳವಣಿಗೆ.  ಕೌಟುಂಬಿಕ ವಿಚಾರದಲ್ಲಿ ಮಾತ್ರ ಅಸಮಾಧಾನ ಉಂಟಾಗುವ ಪ್ರಸಂಗ ಸಂಭವಿಸಬಹುದು.

ಕುಂಭ
ಎಲ್ಲಾ ಕಾರ್ಯಗಳು ಇಂದು ನಿಧಾನ ಗೊಳ್ಳುತ್ತವೆ. ಆಪ್ತರ ಜತೆಗಿನ ಸಂಬಂಧದಲ್ಲಿ ಬಿಕ್ಕಟ್ಟು ಉಂಟಾದೀತು. ಸಹನೆಯಿಂದ ವರ್ತಿಸುವುದು ಮುಖ್ಯ.

ಮೀನ
ಈ ದಿನ ನೀವು ಬಯಸಿದಂತೆ ಸಾಗದು. ಮನಸ್ಸು ಕೆಡಿಸುವ ವಿದ್ಯಮಾನ ಉಂಟಾದೀತು. ಅಸಹನೆ ಹೆಚ್ಚಳ. ಬಂಧುಗಳಲ್ಲಿ ವಿರಸ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!