Wednesday, September 27, 2023

Latest Posts

ಬಾಜಾ ಕರಾವಳಿ ದಾಟಿದ ಚಂಡಮಾರುತ: ಭಾರೀ ಮಳೆ, ಪ್ರವಾಹದ ಎಚ್ಚರಿಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉಷ್ಣವಲಯದ ಚಂಡಮಾರುತ ʻಹಿಲರಿʼ ಮೆಕ್ಸಿಕೋದ ಬಾಜಾ ಕರಾವಳಿಯನ್ನು ದಾಟಿದ್ದು, ಈ ಚಂಡಮಾರುತ ಕ್ಯಾಲಿಫೋರ್ನಿಯಾ ಕರಾವಳಿಯತ್ತ ಚಲಿಸಲಿದೆ ಎಂದು ಯುಎಸ್ ರಾಷ್ಟ್ರೀಯ ಚಂಡಮಾರುತ ಕೇಂದ್ರ ತಿಳಿಸಿದೆ. ಇದರ ಪ್ರಭಾವದಿಂದ ಭಾರೀ ಮಳೆ ಮತ್ತು ಪ್ರವಾಹ ಉಂಟಾಗುವ ಹೆಚ್ಚಿನ ಸಾಧ್ಯತೆ ಇದೆ ಎಂಬ ಎಚ್ಚರಿಕೆ ನೀಡಿದೆ. 84 ವರ್ಷಗಳಲ್ಲಿ ದಕ್ಷಿಣ ಕ್ಯಾಲಿಫೋರ್ನಿಯಾವನ್ನು ಹೊಡೆದ ಮೊದಲ ಉಷ್ಣವಲಯದ ಚಂಡಮಾರುತವಾಗಿ ಹಿಲರಿ ಇತಿಹಾಸವನ್ನು ನಿರ್ಮಿಸಿದೆ.

ಈಗಾಗಲೇ ಚಂಡಮಾರುತದ ಎಫೆಕ್ಸ್‌ನಿಂದ ಕ್ಯಾಲಿಫೋರ್ನಿಯಾದ ದಕ್ಷಿಣ ಲಾಸ್ ಏಂಜಲೀಸ್ನಲ್ಲಿ ಭಾರೀ ಮಳೆಯುಂಟಾಗಿದೆ. ಮೆಕ್ಸಿಕೊದ ಸಾಂಟಾ ರೊಸಾಲಿಯಾ ಪಟ್ಟಣದಲ್ಲಿ ವಾಹನವೊಂದು ಪ್ರವಾಹದ ನೀರಿನಲ್ಲಿ ಕೊಚ್ಚಿಹೋದ ದೃಶ್ಯಗಳು ವರದಿಯಾಗಿವೆ, ಓರ್ವ ಸಾವನ್ನಪ್ಪಿದ್ದರೆ, ವಾಹನದಲ್ಲಿದ್ದ ಇತರ ನಾಲ್ವರನ್ನು ತುರ್ತು ಸಿಬ್ಬಂದಿ ರಕ್ಷಿಸಿದ್ದಾರೆ. ಚಂಡಮಾರುತ ಅಪ್ಪಳಿಸುವ ಪ್ರದೇಶಗಳಲ್ಲಿರುವ ಜನರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ವೈಟ್ ಹೌಸ್ ಒತ್ತಾಯಿಸಿದೆ.

ಟಿಜುವಾನಾ ಧಾರಾಕಾರ ಮಳೆಯನ್ನು ಅನುಭವಿಸುವ ಸಾಧ್ಯತೆಯಿದೆ. ಹಿಲರಿ ಚಂಡಮಾರುತದಿಂದಾಗಿ ಹಠಾತ್ ಪ್ರವಾಹಗಳು, ಸುಂಟರಗಾಳ ಮತ್ತು ವಿದ್ಯುತ್ ಕಡಿತವಾಘುವ ಸಂಭವ ಹೆಚ್ಚಿದೆ. ಈಗಾಗಲೇ ಮೆಕ್ಸಿಕೋದ ಬಾಜಾ ಕ್ಯಾಲಿಫೋರ್ನಿಯಾ ಪರ್ಯಾಯ ದ್ವೀಪದ ಉತ್ತರಕ್ಕೆ ಭೂಕುಸಿತ ಸಂಭವಿಸಿದೆ. ಗಂಟೆಗೆ ಗರಿಷ್ಠ 100 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಿತು ಎಂದು ಯುಎಸ್ ರಾಷ್ಟ್ರೀಯ ಚಂಡಮಾರುತ ಕೇಂದ್ರ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!